ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಕಾಲೇಜಿನ ರಸಾಯನಶಾಸ್ತ್ರ ವಿಭಾಗದಿಂದ ಜಂಟಿಯಾಗಿ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ವಿಟಿಯು ಕಾಲೇಜುಗಳ ಅನ್ವಯಿಕ ವಿಜ್ಞಾನ ಅಧ್ಯಾಪಕರಿಗಾಗಿ ಏರ್ಪಡಿಸಿದ್ದ ‘ಅನ್ವಯಿಕ ವಿಜ್ಞಾನಗಳ ಪರಿಷ್ಕೃತ ಪಠ್ಯಕ್ರಮ’ ಕಾರ್ಯಾಗಾರವನ್ನು ಆನ್ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ಭವಿಷ್ಯದ ಎಂಜಿನಿಯರ್‌ಗಳನ್ನು ರೂಪಿಸುವಲ್ಲಿ ಅನ್ವಯಿಕ ವಿಜ್ಞಾನ ಅತ್ಯವಶ್ಯಕ. ಅಂತಹ ಅನ್ವಯಿಕ ವಿಜ್ಞಾನದ ವಿಕಾಸದಿಂದ ಇಂದಿನ ನಾವೀನ್ಯತೆಯ ಬೆಳವಣಿಗೆಗಳ ಕುರಿತಾಗಿ, ನವೀನ ಬೋಧನಾ ಕೌಶಲ್ಯತೆಗಳ ಮೂಲಕ ವಿದ್ಯಾರ್ಥಿಗಳನ್ನು ತಲುಪಲು ಪ್ರಯತ್ನಿಸಿ. ಜ್ಞಾನ ಹಂಚುವ ಹೊಣೆಗಾರಿಯೊಂದಿಗೆ, ವಿದ್ಯಾಸಂಸ್ಥೆಗಳನ್ನು ಉನ್ನತೀಕರಣಕ್ಕೆ ಶ್ರಮಿಸುವ ಜೊತೆಗೆ ವೃತ್ತಿಪರ ಬೆಳವಣಿಗೆಯಲ್ಲಿ ಸಮರ್ಪಣಾ ಮನೋಭಾವದಿಂದ ಪಾಲ್ಗೊಳ್ಳಿ ಎಂದರು.ಕ್ವಾಂಟಮ್ ಫಿಸಿಕ್ಸ್, ಕೃತಕ ಬುದ್ಧಿಮತ್ತೆಯಂತಹ ಅತ್ಯಾಧುನಿಕ ಅನ್ವಯಿಕ ವಿಜ್ಞಾನ ವಿಷಯಗಳು, ಇಂದಿನ ಕಾಲಘಟ್ಟದಲ್ಲಿ ಅತ್ಯಗತ್ಯವಾಗಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸಮರ್ಥ ಎಂಜಿನಿಯರಿಂಗ್ ಪದವೀಧರರನ್ನು ತಯಾರಿಸಲು ಶಕ್ತವಾಗಿದೆ. ಶೈಕ್ಷಣಿಕ ಸಂಸ್ಥೆಗಳು ಸ್ವದೇಶಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ವಾತಾವರಣ ಸೃಷ್ಟಿಸಿ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಎಲ್ಲಾ ಎಂಜಿನಿಯರಿಂಗ್ ವಿಷಯಗಳಿಗೆ ಆಧಾರವಾಗಿರುವ ಮೂಲ ವಿಜ್ಞಾನದ ವಿಷಯಗಳನ್ನು ಬಳಸಿಕೊಂಡು, ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆಗಳ ಪರಿಹಾರಾತ್ಮಕ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಉತ್ತೇಜಿಸಬೇಕು. ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳು, ಮೂಲ ವಿಜ್ಞಾನದೊಂದಿಗೆ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ನಾವೀನ್ಯ ವಿಚಾರಗಳನ್ನು ಸಂಪರ್ಕಿಸಿ ಹೊಸತನದ ಅನ್ವೇಷಣೆಗಳಿಗೆ ಪ್ರೇರಣೆ ನೀಡುವಂತೆ ಯುವ ಸಮೂಹವನ್ನು ಸಿದ್ದಗೊಳಿಸಬೇಕು ಎಂದು ಅಧ್ಯಾಪಕರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ವಿಟಿಯು ಮೂಲ ವಿಜ್ಞಾನಗಳ ಪಠ್ಯಕ್ರಮ ಮಂಡಳಿಯ ಅಧ್ಯಕ್ಷ ಡಾ.ಎಂ.ಎಚ್. ಮೊಯಿನುದ್ದೀನ್ ಖಾನ್ ಹಾಜರಿದ್ದರು.