ಕ್ಯಾಂಟೀನ್ ಲಾಭಾಂಶದಲ್ಲಿ ಎಲ್‌ಕೆಜಿ-ಯುಕೆಜಿ ಮಕ್ಕಳಿಗೆ ಸಮವಸ್ತ್ರ

KannadaprabhaNewsNetwork |  
Published : Jul 30, 2026, 02:15 AM IST
ಧಾರವಾಡದ ಮಾಳಮಡ್ಡಿಯ ಸರ್ಕಾರಿ ಎಲ್‌ಕೆಜಿ-ಯುಕೆಜಿ ಮಕ್ಕಳಿಗೆ ಮಂಜುನಾಥ-ರಾಜೇಶ್ವರಿ ದಂಪತಿಯಿಂದ ನೀಡಿದ ಸಮವಸ್ತ್ರಗಳನ್ನು ಜಿಲ್ಲಾಧಿಕಾರಿ ವಿತರಿಸಿದರು. | Kannada Prabha

ಸಾರಾಂಶ

ಕುಂದಗೋಳ ತಾಲೂಕಿನ ಮಂಜುನಾಥ ಮತ್ತು ರಾಜೇಶ್ವರಿ ದಂಪತಿ ಈ ಮೊದಲಿನಿಂದಲೂ ಎಲೆಮರೆಯ ಕಾಯಿಯಂತೆ ಸಮಾಜ ಸೇವೆ ಮಾಡುತ್ತಿದ್ದು, ಅಕ್ಕ ಕ್ಯಾಂಟೀನ್‌ ನಂತರವಂತೂ ಅದರ ಲಾಭವನ್ನು ಬಡ ಮಕ್ಕಳಿಗೆ ವಿತರಿಸುತ್ತಿದ್ದಾರೆ.

ಧಾರವಾಡ:

ಈ ದಂಪತಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸರ್ಕಾರದ ಸಹಾಯಧನದಲ್ಲಿ ಅಕ್ಕ ಕ್ಯಾಂಟೀನ್‌ ನಡೆಸುತ್ತಿದ್ದು, ದಾನದ ರೂಪದಲ್ಲಿ ಬಂದ ಲಾಭವನ್ನು ಸಮಾಜಕ್ಕೆ ಮರಳಿಸುತ್ತಿದ್ದಾರೆ. ಇದೀಗ ಮತ್ತೊಂದು ಉತ್ಕೃಷ್ಟ ಕಾರ್ಯ ಮಾಡಿದ್ದಾರೆ.

ಕುಂದಗೋಳ ತಾಲೂಕಿನ ಮಂಜುನಾಥ ಮತ್ತು ರಾಜೇಶ್ವರಿ ದಂಪತಿ ಈ ಮೊದಲಿನಿಂದಲೂ ಎಲೆಮರೆಯ ಕಾಯಿಯಂತೆ ಸಮಾಜ ಸೇವೆ ಮಾಡುತ್ತಿದ್ದು, ಅಕ್ಕ ಕ್ಯಾಂಟೀನ್‌ ನಂತರವಂತೂ ಅದರ ಲಾಭವನ್ನು ಬಡ ಮಕ್ಕಳಿಗೆ ವಿತರಿಸುತ್ತಿದ್ದಾರೆ. ಖಾಸಗಿ ಶಾಲಾ ಮಕ್ಕಳಿಗೆ ಪಾಲಕರು ಶಾಲಾವಸ್ತ್ರ ಕೊಡಿಸುತ್ತಾರೆ. ಆದರೆ, ಸರ್ಕಾರದಿಂದ ಇತ್ತೀಚೆಗೆ ಆರಂಭಿಸಿರುವ ಎಲ್‌ಕೆಜಿ-ಯುಕೆಜಿ ಶಾಲಾ ಮಕ್ಕಳಿಗೂ ಈ ಭಾಗ್ಯ ದೊರೆಯಲಿ ಎಂದು ಮಾಳಮಡ್ಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 60 ಮಕ್ಕಳಿಗೆ ಸಮವಸ್ತ್ರ ಕೊಡಿಸಿದ್ದಾರೆ.

ಈ ಸಮವಸ್ತ್ರ ವಿತರಣೆ ಕಾರ್ಯಕ್ರಮಕ್ಕೆ ಸ್ಚತಃ ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಆಗಮಿಸಿ ಮಂಜುನಾಥ-ರಾಜೇಶ್ವರ ದಂಪತಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜದಿಂದ ಪಡೆದ ಲಾಭವನ್ನು ಮರಳಿ ಸಮಾಜಕ್ಕೆ ಕೊಡುವುದು ತುಂಬಾ ಕಡಿಮೆ. ಇಂತಹ ಸಂದರ್ಭದಲ್ಲಿ ಈ ದಂಪತಿ ಬಂದ ಲಾಭವನ್ನು ಮರಳಿ ಸಮಾಜಕ್ಕೆ ವಿವಿಧ ರೂಪದಲ್ಲಿ ನೀಡುತ್ತಿರುವ ಕಾರ್ಯ ಮತ್ತೊಬ್ಬರಿಗೆ ಮಾದರಿ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾರ್ಥಕ ಬದುಕಿಗೆ ವಚನಗಳ ಸಾರ ದಾರಿದೀಪ
ನಗರಸಭೆಯಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ