ಕಡಬೂರಲ್ಲಿ ಶಿವನ ದೇಗುಲ ಉದ್ಘಾಟಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

KannadaprabhaNewsNetwork |  
Published : Feb 27, 2026, 01:45 AM IST
ಕಡಬೂರಲ್ಲಿ ಶಿವನ ದೇಗುವ  | Kannada Prabha

ಸಾರಾಂಶ

ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ದೇಶದಲ್ಲಿ ಪ್ರಸ್ತುತ ನಡೆಯುವ ಘಟನೆಗಳನ್ನು ನೋಡಿದರೆ ಅಸಹ್ಯ ಎನಿಸುತ್ತಿದೆ. ಮಾನವೀಯ ಮೌಲ್ಯಗಳು ಹಾಳಾಗುತ್ತಿವರ, ಪ್ರತಿಯೊಬ್ಬರೂ ಅನ್ಯೋನ್ಯತೆಯಿಂದ ಒಳ್ಳೆಯವರಾಗಿ ಬದುಕಬೇಕು .

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಕಡಬೂರು ಗ್ರಾಮದ ಶಿವ ಮತ್ತು ಗಣಪತಿ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರ ಕಳಸಾರೋಹಣ ಮಹೋತ್ಸವವನ್ನು ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವರೂ ಆದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು.

ದೇವಸ್ಥಾನ ಉದ್ಘಾಟಿಸಿದ ಬಳಿಕ ನೆರೆದಿದ್ದ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಳ್ಳಿಯ ಸಂಸ್ಕೃತಿ ಇನ್ನೂ ಕೆಲ ಹಳ್ಳಿಗಳಲ್ಲಿದೆ. ಮನಸ್ಸು ಬೇರೆ ಕಡೆಗೆ ಸೆಳೆಯುತ್ತಿದೆ ಹಾಗಾಗಿ ಹಳೆಯ ಕಾಲದ ಸಂಸ್ಕೃತಿ ಉಳಿಸಬೇಕಿದೆ ಎಂದರು.

ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ದೇಶದಲ್ಲಿ ಪ್ರಸ್ತುತ ನಡೆಯುವ ಘಟನೆಗಳನ್ನು ನೋಡಿದರೆ ಅಸಹ್ಯ ಎನಿಸುತ್ತಿದೆ. ಮಾನವೀಯ ಮೌಲ್ಯಗಳು ಹಾಳಾಗುತ್ತಿವರ, ಪ್ರತಿಯೊಬ್ಬರೂ ಅನ್ಯೋನ್ಯತೆಯಿಂದ ಒಳ್ಳೆಯವರಾಗಿ ಬದುಕಬೇಕು ಎಂದರು.

ರಾಜ್ಯ ಯಾವ ರೀತಿ ಅಭಿವೃದ್ಧಿ ಹೊಂದುತ್ತಿದೆ ನೋಡಿ, ಒಳ್ಳೆಯ ಪ್ರತಿನಿಧಿ ತರುವ ಜವಾಬ್ದಾರಿ ಹಾಗೂ ಪ್ರಯತ್ನ ನಿಮ್ಮದಾಗಬೇಕು. ಭಾರತ ವಿಶ್ವದಲ್ಲೇ ೩ನೇ ರಾಷ್ಟ್ರವಾಗಿ ಹೊರ ಹೊಮ್ಮುತ್ತಿದೆ ಎಂದರು.

ಕಡಬೂರು ಮಂಜು ರೈತ ಹೋರಾಟದ ಮೂಲಕ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಹನೂರು ಶಾಸಕ ಮಂಜುನಾಥ್‌ ಕೂಡ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳ ತರಲು ಶ್ರಮಿಸುತ್ತಿದ್ದಾರೆ ಎಂದರು.

ಶಾಸಕರಾದ ಎಚ್.ಎಂ.ಗಣೇಶ್‌ ಪ್ರಸಾದ್‌, ಎಂ.ಆರ್.ಮಂಜುನಾಥ್‌, ಮಾಜಿ ಶಾಸಕರಾದ ಎಸ್.ಬಾಲರಾಜು, ಕೆ.ಅನ್ನದಾನಿ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್‌, ಜೆಡಿಎಸ್‌ ಮುಖಂಡರಾದ ಪುಟ್ಟಸ್ವಾಮಿ, ಕಡಬೂರು ಮಂಜುನಾಥ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ಜಿ.ಮಡಿವಾಳಪ್ಪ, ಮುಖಂಡರಾದ ಶಿವಪುರ ಸುರೇಶ್‌, ಕಲ್ಲಹಳ್ಳಿ ಮಹೇಶ್‌, ಹಿರೀಕಾಟಿ ಕುಮಾರ್‌, ಪ್ರಣಯ್‌, ಕುಂದಕೆರೆ ಸಂಪತ್ತು ಸೇರಿದಂತೆ ನೂರಾರು ಮಂದಿ ಇದ್ದರು.

------

ನನಗೂ ಎಚ್‌ಎಸ್‌ಎಂಗೂ ಆತ್ಮೀಯ ಸಂಬಂಧವಿತ್ತು!

ಗುಂಡ್ಲುಪೇಟೆ: ನಾನು, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ ಪ್ರಸಾದ್‌ ರಾಜಕೀಯವಾಗಿ ಬೇರೆ ಬೇರೆ, ಆದರೆ ಶಾಸಕರ ತಂದೆ ಎಚ್.ಎಸ್.ಮಹದೇವಪ್ರಸಾದ್‌ಗೂ ನನಗೂ ಆತ್ಮೀಯ ಸಂಬಂಧವಿತ್ತು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ದೇವಸ್ಥಾನ ಉದ್ಘಾಟನೆ ಬಳಿಕ ಮಾತನಾಡಿ ಎಚ್.ಎಸ್.ಮಹದೇವಪ್ರಸಾದ್‌ ರನ್ನು ನಾನು ಮುಖ್ಯಮಂತ್ರಿಯಾಗಿದ್ದಾಗ ಸಚಿವನನ್ನಾಗಿ ಮಾಡಿದ್ದೆ. ಅಲ್ಲದೆ ಮಹದೇವಪ್ರಸಾದ್‌ ಜನತಾ ಪರಿವಾರದಿಂದ ಬಂದವರು ಎಂದರು.

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹಾಗೂ ಮಾಜಿ ಸಚಿವ ದಿವಂಗತ ಎಚ್.ಎಸ್.ಮಹದೇವಪ್ರಸಾದ್‌ ಅವರ ಹೆಸರನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳುತ್ತಿದ್ದಂತೆಯೇ ನೆರೆದಿದ್ದ ಬಹುತೇಕ ಚಪ್ಪಾಳೆ ಸುರಿಮಳೆ ಗೈದರು.

)

ಎಚ್‌ಡಿಕೆ ಸ್ವಾಗತಿಸಿದ ಜಿಲ್ಲಾಧಿಕಾರಿ, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್!

ಗುಂಡ್ಲುಪೇಟೆ: ಕೇಂದ್ರ ಸಚಿವರಾಗಿ ತಾಲೂಕಿನ ಕಡಬೂರಿಗೆ ಮೊದಲ ಬಾರಿಗೆ ಆಗಮಿಸಿದ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಜಿಲ್ಲಾಧಿಕಾರಿ ಶ್ರೀರೂಪ ಹಾಗೂ ಕಾಂಗ್ರೆಸ್‌ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು ಸ್ವಾಗತಿಸಿದರು.

ಕಡಬೂರು ಗ್ರಾಮದ ಬಳಿ ಹೆಲಿಪ್ಯಾಡ್‌ ನಲ್ಲಿ ಆಗಮಿಸಿದಾಗ ಎಚ್.ಡಿ.ಕುಮಾರಸ್ವಾಮಿಗೆ ಮೊದಲಿಗೆ ಜಿಲ್ಲಾಧಿಕಾರಿ ಶ್ರೀರೂಪ ಹೂ ಗುಚ್ಛ ನೀಡುವ ಮೂಲಕ ಸ್ವಾಗತಿಸಿ ಬರ ಮಾಡಿಕೊಂಡರು.

ನಂತರ ಕಾಂಗ್ರೆಸ್‌ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರು ಕೂಡ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ದೊಡ್ಡ ಗಾತ್ರದ ಗುಲಾಬಿ ಹಾರ ಹಾಕಿ ಸ್ವಾಗತಿಸಿದರು.

ಬಳಿಕ ಮಾಜಿ ಶಾಸಕರಾದ ಎಸ್.ಬಾಲರಾಜ್‌, ಕೆ.ಅನ್ನದಾನಿ, ಜೆಡಿಎಸ್‌ ಮುಖಂಡರಾದ ಕಡಬೂರು ಮಂಜು, ಪುಟ್ಟಸ್ವಾಮಿ ಹಾಗೂ ಬಿಜೆಪಿ ಮುಖಂಡರು ಸ್ವಾಗತಿಸಿದರು.

ಎಚ್‌ಡಿಕೆಗೆ ಜೈಕಾರ:

ಕಡಬೂರಿಗೆ ಆಗಮಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಂದಾಗ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಜೈಕಾರ ಹಾಕಿದರು.

><

೨೬ಜಿಪಿಟಿ೨

ಗುಂಡ್ಲುಪೇಟೆ ತಾಲೂಕಿನ ಕಡಬೂರು ದೇವಸ್ಥಾನ ಉದ್ಘಾಟಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು.ಶಾಸಕರಾದ ಎಚ್.ಎಂ.ಗಣೇಶ್‌ ಪ್ರಸಾದ್‌,ಎಂ.ಆರ್.ಮಂಜುನಾಥ್‌ ಇದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

]ನನ್ನ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡಿದರೆ ಜನ ನಂಬಲ್ಲ: ಶಾಸಕ ಗಣೇಶ್‌
ವಿದ್ಯಾರ್ಥಿಗಳಿಗೆ ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ವಿಶೇಷ ತರಗತಿಗಳು ವರದಾನ: ಡಾ.ಯೋಗೇಶ್