ಕೇಂದ್ರದ ಸಿಎಸ್ ಆರ್ ಅನುದಾನದಲ್ಲಿ ಪುರಸಭೆಗೆ 175 ಕೋಟಿ ರು. ನೀಡುವಂತೆ ಕೇಂದ್ರ ಸಚಿವ ಕುಮಾರಸ್ವಾಮಿಗೆ ಆಗ್ರಹ

KannadaprabhaNewsNetwork |  
Published : Jun 25, 2025, 11:47 PM IST
25ಕೆಎಂಎನ್ ಡಿ13 | Kannada Prabha

ಸಾರಾಂಶ

ಪುರಸಭೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಸರ್ವ ಪಕ್ಷದ ಸದಸ್ಯರು ನೀಡಿರುವ ಮನವಿ ಸ್ವೀಕರಿಸಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ಅನುದಾನ ನೀಡುತ್ತೇನೆ. ಜತೆಗೆ ಪೌರ ಸನ್ಮಾನ ಕಾರ್‍ಯಕ್ರಮಕ್ಕೂ ದಿನಾಂಕ ನಿಗದಿಪಡಿಸಲಾಗುವುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕೇಂದ್ರದ ಸಿಎಸ್‌ಆರ್ ಅನುದಾನದಲ್ಲಿ 175 ಕೋಟಿ ರು. ನೀಡುವಂತೆ ಪುರಸಭೆ ಸದಸ್ಯರು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ದೆಹಲಿಯ ಎಚ್.ಡಿ.ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿದ ಪುರಸಭೆಯ ಜೆಡಿಎಸ್, ಬಿಜೆಪಿ ಹಾಗೂ ರೈತಸಂಘ- ಕಾಂಗ್ರೆಸ್ ಬೆಂಬಲಿತ ಸರ್ವ ಪಕ್ಷಗಳ ಸದಸ್ಯರು ಪುರಸಭೆ ವ್ಯಾಪ್ತಿಯಲ್ಲಿ ಬರುವ ಸಂತೆ ಮೈದಾನದ ಅಭಿವೃದ್ಧಿಗೆ 50 ಕೋಟಿ, ಎಲ್ಲಾ ಹಳೆ ಕಟ್ಟಡ, ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಾಣ ಮಾಡುವುದಕ್ಕೆ 100 ಕೋಟಿ ಹಾಗೂ ಪುರಸಭೆ ವ್ಯಾಪ್ತಿಯ ಎಲ್ಲಾ ರಸ್ತೆಗಳ ಅಭಿವೃದ್ಧಿಪಡಿಸಲು 25 ಕೋಟಿ ಅನುದಾನವನ್ನು ಸಿಎಸ್‌ಆರ್ ಅನುದಾನದಡಿ ನೀಡಬೇಕೆಂದು ಮನವಿ ಮಾಡಿದರು.

ಬಳಿಕ ಸದಸ್ಯರು, ನಿಮಗೆ ಪೌರ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ. ಕಾರ್‍ಯಕ್ರಮದ ದಿನಾಂಕ ನಿಗದಿ ಮಾಡಿಕೊಡುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ಮನವಿ ಮಾಡಿದರು.

ನಂತರ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಪುರಸಭೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಸರ್ವ ಪಕ್ಷದ ಸದಸ್ಯರು ನೀಡಿರುವ ಮನವಿ ಸ್ವೀಕರಿಸಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ಅನುದಾನ ನೀಡುತ್ತೇನೆ. ಜತೆಗೆ ಪೌರ ಸನ್ಮಾನ ಕಾರ್‍ಯಕ್ರಮಕ್ಕೂ ದಿನಾಂಕ ನಿಗದಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಉಪಾಧ್ಯಕ್ಷ ಅಶೋಕ್, ಸದಸ್ಯರಾದ ಆರ್.ಸೋಮಶೇಖರ್, ಎಂ.ಗಿರೀಶ್, ಶಿವಣ್ಣ, ಕೃಷ್ಣ ಎ.ಅಣ್ಣಯ್ಯ, ಶಿವಕುಮಾರ್, ಚಂದ್ರು, ಇಮ್ರಾನ್, ಸರಸ್ವತಿ ಜಯರಾಮು, ಸುಧಾ ಜಯರಾಮು, ಅರ್ಚನಾ ಚಂದ್ರು, ಮಂಗಳ, ಗೀತಾ, ಸುನೀತ, ಖಮರುನ್ನಿಸ, ಮಹದೇವು, ರೈತಸಂಘ- ಕಾಂಗ್ರೆಸ್ ಸದಸ್ಯ ಪಾರ್ಥ, ಉಮಾಶಂಕರ್, ಧನಲಕ್ಷ್ಮೀ, ಶ್ರೀನಿವಾಸ್, ಜಯಲಕ್ಷ್ಮಮ್ಮ, ಸರಕಾರಿ ನಾಮಿನಿ ನಿರ್ದೇಶಕರಾದ ಮುರಳೀಧರ್, ಎಸ್.ರಮೇಶ್, ಎನ್.ಲಕ್ಷ್ಮೇಗೌಡ, ಸೇರಿದಂತೆ ಹಲವರು ಇದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ