ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದಲ್ಲಿ ಹಾರೂಗೇರಿ ಪ್ರಗತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನೂತನ ೮ನೇ ಶಾಖೆಯನ್ನು ಲೋಕಾಪುರ ಪಟ್ಟಣದಲ್ಲಿ ಉದ್ಘಾಟಿಸಿ, ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಪ್ರಗತಿ ಸೌಹಾರ್ದ ಸಂಘವು ವಿವಿಧ ಕ್ಷೇತ್ರಗಳಲ್ಲಿ ಜನ ಸಾಮಾನ್ಯರಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅದರ ಭಾಗವಾಗಿ ಲೋಕಾಪುರದಲ್ಲಿ ಆರಂಭವಾದ ಶಾಖೆಯು ಇಲ್ಲಿನ ರೈತರಿಗೆ ಮತ್ತು ನಿರ್ಗತಿಕರಿಗೆ, ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡಲು ಉಪಯುಕ್ತವಾಗಲಿದೆ ಎಂದರು.
ಕಲ್ಮಡ ಲಕ್ಷಾನಟ್ಟಿಯ ಬಸವಪ್ರಭು ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಸಹಕಾರ ವಲಯವು ಪ್ರಸ್ತುತ ಜನರ ಬಹುತೇಕ ಬೇಡಿಕೆಗಳನ್ನು ಪೂರೈಸುವ ಮಹತ್ವದ ವ್ಯವಸ್ಥೆಯಾಗಿ ಕೆಲಸ ಮಾಡುತ್ತಿದೆ. ಸಹಕಾರ ಕ್ಷೇತ್ರದ ಭಾಗವಾಗಿ ಎರಡು ದಶಕದಿಂದ ಆರಂಭವಾದ ಸೌಹಾರ್ದ ವ್ಯವಸ್ಥೆ ಇದೀಗ ಹೆಚ್ಚಿನ ವೇಗ ಪಡೆದುಕೊಂಡಿದೆ ಎಂದರು.ಸಂಘದ ಸಂಸ್ಥಾಪಕ ಬಿ.ವಿ.ಬಿರಾದಾರ ಮಾತನಾಡಿ, ಅಲ್ಪಾವಧಿಯಲ್ಲಿ ಸಂಸ್ಥೆ ಅಧಿಕ ಠೇವಣೆ ಹೊಂದಿದ್ದು, ಉತ್ತಮ ಬೆಳವಣೆಗೆಯತ್ತ ಸಾಗುತ್ತಿದೆ. ವಿಶೇಷವಾಗಿ ರೈತರಿಗೆ ಸಂಸ್ಥೆ ಹೆಚ್ಚಿನ ಆದ್ಯತೆ ನೀಡುತ್ತಿದೆ,. ಲೋಕಾಪುರ ಶಾಖೆಯೂ ಕೂಡ ಎಲ್ಲರ ನೆರವಿನಿಂದ ಉತ್ತಮ ಬೆಳವಣೆಗೆ ಕಾಣಲಿದೆ ಎಂಬ ವಿಶ್ವಾಸವಿದೆ. ವಿವಿಧ ಸ್ಥಳಗಳಲ್ಲಿರುವ ಸಂಘದ ಶಾಖೆಗಳು ಉತ್ತಮ ಏಳ್ಗೆ ಕಂಡಿದ್ದು ಬಡವರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲೆನ್ನುವ ಉದ್ದೇಶದಿಂದ ಈ ಸಹಕಾರಿ ಸಂಘವನ್ನು ಆರಂಭಿಸಲಾಗಿದೆ ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಲು ಮನವಿ ಮಾಡಿದರು.