ಆರೋಗ್ಯ ತಪಾಸಣೆಗೆ ವಿಶಿಷ್ಟ ಅಬಾಕಾರ್ಡ್ ಇನ್ನು ಕಡ್ಡಾಯ

KannadaprabhaNewsNetwork |  
Published : Sep 10, 2026, 01:15 AM IST
9999 | Kannada Prabha

ಸಾರಾಂಶ

ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ಶಿಕ್ಷಣ ನೀಡುವ ಉದ್ದೇಶದಿಂದ ರಾಜೀವ್ ಗಾಂಧಿ ವಿಶ್ವವಿದ್ಯಾಲಯದಲ್ಲಿ 25 ಕೋಟಿ ರುಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯ ಸ್ಥಾಪನೆ ಮಾಡುವುದಾಗಿಯೂ ತಿಳಿಸಿದರು. ವೃತ್ತಿಯಲ್ಲಿ ಉಳಿಯಬೇಕಾದರೆ ಮತ್ತು ಗಟ್ಟಿಯಾಗಬೇಕಾದರೆ ವಿದ್ಯಾರ್ಥಿಗಳು ನಾವಿಣ್ಯತೆ ಮತ್ತು ಕೌಶಲ್ಯವನ್ನು ಗಳಿಸಿಕೊಳ್ಳಬೇಕು. ಇಲ್ಲವಾದರೆ ಭವಿಷ್ಯ ಮಂಕಾಗಲಿದೆ ಎ.ಐ, ಎಂ.ಎಲ್, ಗೂಗಲ್ ಮತ್ತು ಫೈಥಾನ್ ಕ್ಷೇತ್ರಗಳಲ್ಲಿ ಹೆಚ್ಚು ಕೌಶಲ್ಯ ಬೆಳೆಸಿಕೊಂಡರೆ ವೃತ್ತಿಯಲ್ಲಿ ಎತ್ತರಕ್ಕೆ ಬೆಳೆಯಬಹುದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ವ್ಯಕ್ತಿಯ ಆರೋಗ್ಯದ ಸಂಪೂರ್ಣ ಮಾಹಿತಿ ನೀಡುವ ‘ಅಬಾ ಡಿಜಿಟಲ್ ಹೆಲ್ತ್ ಕಾರ್ಡ್ ಮುಂದಿನ ದಿನಗಳಲ್ಲಿ ಕಡ್ಡಾಯವಾಗಲಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಫಾರ್ಮಸಿ ವಿಭಾಗದ ಡೀನ್ ಡಾ. ಶಿವಕುಮಾರ್ ಸ್ವಾಮಿ ಹೇಳಿದ್ದಾರೆ.

ಶ್ರೀದೇವಿ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಶ್ರೀಸಂಸ್ಕೃತಿ ಉತ್ಸವ- 2026 ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು. ದೇಶದ 140 ಕೋಟಿ ಜನರಲ್ಲಿ ಆಧಾರ್ ಕಾರ್ಡ್ ಇರುವಂತೆ ಮುಂದಿನ ಕೆಲವೇ ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ಮಾಹಿತಿಯನ್ನು ಕಲೆ ಹಾಕುವ ಉದ್ದೇಶದಿಂದ ಇದನ್ನು ಕಡ್ಡಾಯಗೊಳಿಸಲಿದೆ ಎಂದರು.

ಇದರಿಂದ ವ್ಯಕ್ತಿಯ ಆರೋಗ್ಯದ ಸಂಪೂರ್ಣ ಚಿತ್ರಣ ಲಭ್ಯವಾಗಲಿದ್ದು, ಅವರ ಚಿಕಿತ್ಸೆ ಮತ್ತು ತಪಾಸಣೆ ಸುಲಭವಾಗಲಿದೆ. ಆರೋಗ್ಯ ವೃತ್ತಿಪರರಿಗೆ ಹೇರಳ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಅವರು ಹೇಳಿದರು. ಆಧಾರ್ ಕಾರ್ಡ್ ಗೆ 12 ಸಂಖ್ಯೆಗಳು ಇದ್ದರೆ, ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ ನೀಡಲಾಗುವ ಅಬಾ ಕಾರ್ಡ್ 14 ಅಂಕಿಯ ವಿಶಿಷ್ಟ ಆರೋಗ್ಯ ಗುರುತಿನ ಚೀಟಿಯಾಗಲಿದೆ ಎಂದು ತಿಳಿಸಿದರು.

ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ಶಿಕ್ಷಣ ನೀಡುವ ಉದ್ದೇಶದಿಂದ ರಾಜೀವ್ ಗಾಂಧಿ ವಿಶ್ವವಿದ್ಯಾಲಯದಲ್ಲಿ 25 ಕೋಟಿ ರುಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯ ಸ್ಥಾಪನೆ ಮಾಡುವುದಾಗಿಯೂ ತಿಳಿಸಿದರು. ವೃತ್ತಿಯಲ್ಲಿ ಉಳಿಯಬೇಕಾದರೆ ಮತ್ತು ಗಟ್ಟಿಯಾಗಬೇಕಾದರೆ ವಿದ್ಯಾರ್ಥಿಗಳು ನಾವಿಣ್ಯತೆ ಮತ್ತು ಕೌಶಲ್ಯವನ್ನು ಗಳಿಸಿಕೊಳ್ಳಬೇಕು. ಇಲ್ಲವಾದರೆ ಭವಿಷ್ಯ ಮಂಕಾಗಲಿದೆ ಎ.ಐ, ಎಂ.ಎಲ್, ಗೂಗಲ್ ಮತ್ತು ಫೈಥಾನ್ ಕ್ಷೇತ್ರಗಳಲ್ಲಿ ಹೆಚ್ಚು ಕೌಶಲ್ಯ ಬೆಳೆಸಿಕೊಂಡರೆ ವೃತ್ತಿಯಲ್ಲಿ ಎತ್ತರಕ್ಕೆ ಬೆಳೆಯಬಹುದು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿದ್ದ ಚಿತ್ರದುರ್ಗದ ಎಸ್.ಜೆ.ಎಂ ವಿಶ್ವವಿದ್ಯಾಲಯದ ರಿಜಿಸ್ಟರ್ ಡಾ.ಎಂ.ಎಸ್.ಗಣಾಚಾರಿ ಮಾತನಾಡಿ, ಕೃತಕ ಬುದ್ಧಿಮತ್ತೆ ಶಿಕ್ಷಕರನ್ನು ಬದಲಾಯಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಕೇವಲ ಸಿಲಿಬಸ್‌ಗೆ ಸೀಮಿತವಾಗಿ ಅಭ್ಯಾಸ ಮಾಡುವ ಹಳೆಯ ಸಂಪ್ರದಾಯದಿಂದ ಹೊರಬಂದು ಜ್ಞಾನ ಸಂಪಾದನೆಗಾಗಿ ಹೊಸ-ಹೊಸ ವಿಚಾರ ತಿಳಿದುಕೊಳ್ಳಬೇಕು ಎಂದು ಹೇಳಿದರು. ಹಿಂದೆ ಫಾರ್ಮಸಿ ಮಾಡಿದ್ದಾರೆ ಎಂದರೆ ಅವರು ಮೆಡಿಕಲ್ ಶಾಪ್ ತೆರೆಯುತ್ತಾರೆ ಎಂಬ ಭಾವನೆ ಜನರಲ್ಲಿ ಬೇರೂರಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಫಾರ್ಮಸಿ ಪದವೀಧರರು ಬೇಕಾದಷ್ಟು ಉದ್ಯೋಗ ಪಡೆಯುವ ಸಂಶೋಧನೆ ಮಾಡುವ ವಿಜ್ಞಾನಿಗಳಾಗುವ ಅವಕಾಶ ಹೇರಳವಾಗಿದೆ. ಕೃತಕ ಬುದ್ಧಿಮತ್ತೆಯಿಂದ ಫಾರ್ಮಸಿ ವೃತ್ತಿಪರರ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಶಿಕ್ಷಣ ಸಂಸ್ಥೆ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್. ಪಾಟೀಲ್ ಮಾತನಾಡಿ, ಭಾರತ ಜನರಿಕ್ ಔಷಧ ತಯಾರಿಕಾ ರಾಜಧಾನಿ ಎಂಬ ಬಿರುದುಗಳಿಸಿದ್ದು, ಫಾರ್ಮಸಿ ಪದವೀಧರರಿಗೆ ಹೇರಳ ಉದ್ಯೋಗಗಾವಕಾಶ ದೊರಲಿದೆ ಎಂದು ಹೇಳಿದರು. ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಗಿತು. ಶ್ರೀದೇವಿ ಔಷಧ ವಿಜ್ಞಾನ ಮಹಾವಿದ್ಯಾಲಯ ನಿರ್ದೇಶಕ ಡಾ.ಬಿ.ಗೋಪಾಲಕೃಷ್ಣ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ.ಶಿವಕುಮಾರ್ ಹಾಜರಿದ್ದರು. ಸಂಜೆ ಖ್ಯಾತಗಾಯಕರಾದ ನಿಶಾನ್ ರೈ ಹಾಗೂ ಪೃಥ್ವಿ ಭಟ್‌ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆತ್ರೇಯ ಕಾಲೇಜು ಲಾಕ್‌ಡೌನ್‌: 2ನೇ ದಿನಕ್ಕೆ ಕಾಲಿಟ್ಟ ಧರಣಿ
ಈಶ್ವರ ಖಂಡ್ರೆ ಭೇಟಿ ಬೆನ್ನಲ್ಲೇ ಹಿರೇಹಳ್ಳಿ ಕೆರೆ ಒತ್ತುವರಿ ತೆರವು