ಮೇದಾರ ಸಮಾಜದ ಪ್ರಗತಿಗೆ ಒಗ್ಗಟ್ಟು, ಶಿಕ್ಷಣವೇ ಬಲ: ರಾಜೂಗೌಡ

KannadaprabhaNewsNetwork |  
Published : Nov 26, 2026, 01:15 AM IST
ಸುರಪುರದ ಗರುಡಾದ್ರಿ ಕಲಾಮಂದಿರದಲ್ಲಿ ನಡೆದ ೮೯೬ನೇ ಶ್ರೀ ಶಿವಶರಣ ಮೇದಾರ ಕೇತಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜದ ಹಿರಿಯ ಅಧಿಕಾರಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

Unity and education are the strengths for the progress of the Medara community: Rajugowda

-೮೯೬ನೇ ಶ್ರೀಶಿವಶರಣ ಮೇದಾರ ಕೇತಯ್ಯನವರ ಜಯಂತಿ ಕಾರ್ಯಕ್ರಮ

--

ಕನ್ನಡಪ್ರಭ ವಾರ್ತೆ ಸುರಪುರ

ಪರಸ್ಪರ ಸಹಕಾರ ಹಾಗೂ ಏಕತೆಯಿಂದ ಮುನ್ನೆಡೆದಾಗ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಹೇಳಿದರು.

ಗರುಡಾದ್ರಿ ಕಲಾಮಂದಿರಲ್ಲಿ ಶ್ರೀಗುರು ಮೇದಾರ ಕೇತೇಶ್ವರ ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ಸೇವಾ ಸಂಘದಿಂದ ೮೯೬ನೇ ಶ್ರೀ ಶಿವಶರಣ ಮೇದಾರ ಕೇತಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೇದಾರ ಸಮಾಜ ಮತ್ತು ವಾಲ್ಮೀಕಿ ಸಮಾಜದವರು ಸಹೋದರರಂತೆ ಒಗ್ಗಟ್ಟು ಹಾಗೂ ಸೌಹಾರ್ದತೆಯಿಂದ ಸಾಗುತ್ತಿರುವುದು ಸಂತಸದ ಸಂಗತಿ. ಈ ಸಂಘಟನಾ ಶಕ್ತಿ ನಿರಂತರ ಮುಂದುವರೆಯಬೇಕು. ಮೇದಾರ ಸಮಾಜದವರು ಶ್ರಮಜೀವಿಗಳಾಗಿದ್ದು, ಹಿಂದೆ ಬುಟ್ಟಿ ಹೆಣೆಯುವ ಸಾಂಪ್ರಾದಾಯಿಕ ಕಸುಬಿನಲ್ಲಿ ತೊಡಗಿಸಿಕೊಂಡಿದ್ದರು.

ಸುರಪುರದಲ್ಲಿ ಹಣ್ಣಿನ ವ್ಯಾಪಾರ, ವಿವಿಧ ಉದ್ಯಮಗಳು, ಶಿಕ್ಷಣ ಹಾಗೂ ಸರ್ಕಾರಿ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದು, ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಸಮಾಜದ ಅಭಿವೃದ್ಧಿಗೆ ಸಂಘಟನೆ, ಪರಸ್ಪರ ಸಹಕಾರ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಮುದಾಯದ ಶಾಲೆಯ ಬೇಡಿಕೆಯನ್ನು ತಮ್ಮ ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ಶಾಸಕನಾಗಿ ಆಯ್ಕೆಯಾದರೆ ಮೊದಲು ಶಾಲೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ಡಾ.ನಾಗಪ್ಪ ಚವಲಕರ್, ಶಿವಶರಣ ಮೇದಾರ ಕೇತಯ್ಯನವರ ಜಯಂತಿಯನ್ನು ಗೌರಿ ಹುಣ್ಣಿಮೆಯಂದು ರಾಜ್ಯಾದ್ಯಂತ ಆಚರಿಸಲಾಗುತ್ತದೆ. ಮೇದಾರ ಸಮಾಜವು ರಾಜಕೀಯ. ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಶಿಕ್ಷಣ ಮೂಲಕ ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಪ್ರಜ್ಞಾವಂತರಾಗಬೇಕು. ಸಮಾಜದಲ್ಲಿ ಒಗ್ಗಟ್ಟು ಬೆಳೆಸಿಕೊಂಡು ಸಂಘಟಿರಾಗಿ ಮುನ್ನಡೆಯಬೇಕು ಎಂದು ಹೇಳಿದರು.

ಚಿತ್ರದುರ್ಗ ಮೇದಾರ ಗುರುಪೀಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ನಿಸರ್ಗ ಅವರು ಶಿವಶರಣ ಮೇದಾರ ಕೇತಯ್ಯನವರ ಕುರಿತು ಭಾಷಣ ಮಾಡಿದರು. ಸುರೇಶ ಚವಲಕರ್ ಹಾಗೂ ಮೇದಾ ಸಮಾಜದ ಮಹಿಳಾ ಮುಖಂಡ ಎಂ.ವಿ. ಭವಾನಿ ಬಾಳೆಹೊನ್ನೂರು ಅವರು ಮಾತನಾಡಿದರು.

ತಾಲೂಕು ಮೇದಾರ ಸಮಜದ ಅಧ್ಯಕ್ಷ ರಾಘವೇಂದ್ರ ಎಂ.ಪೊಲೀಸ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.

ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಮಾಜಿ ಅಧ್ಯಕ್ಷ ರಾಜಾ ಮುಕುಂದನಾಯಕ, ಶಂಕರನಾಯಕ, ಬಲಭೀಮನಾಯಕ ಬೈರಿಮಡ್ಡಿ ಇದ್ದರು.

ವಿವಿಧ ಇಲಾಖೆಗಳ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜದ ಹಿರಿಯ ಅಧಿಕಾರಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಭಾವನಾ ಭರತನಾಟ್ಯ ಪ್ರದರ್ಶಿಸಿ ಗಮನ ಸೆಳೆದರು.

ಫೋಟೊ: 25ವೈಡಿಆರ್‌3

ಸುರಪುರದ ಗರುಡಾದ್ರಿ ಕಲಾಮಂದಿರದಲ್ಲಿ ನಡೆದ ೮೯೬ನೇ ಶ್ರೀಶಿವಶರಣ ಮೇದಾರ ಕೇತಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜದ ಹಿರಿಯ ಅಧಿಕಾರಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆಯಲ್ಲಿ ಮುಳುಗಿವೆ ಕೊಳಚೆ ಮಂಡಳಿಯ ನಿವಾಸಗಳು: ರವಿಶಂಕರ್ ರೆಡ್ಡಿ
ಸಂತ್ರಸ್ತ ಕುಟುಂಬಗಳಿಗೆ ಸಚಿವ ಶಿವಲಿಂಗೇಗೌಡ ಸಾಂತ್ವನ