ಲಿಂಗಾಯಿತ ಸಮಾಜದಲ್ಲಿ ಐಕ್ಯತೆ ಕುಗ್ಗುತ್ತಿದೆ

KannadaprabhaNewsNetwork |  
Published : Jan 31, 2025, 12:47 AM IST
30ಎಚ್ಎಸ್ಎನ್4 : ಬೇಲೂರು ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮವನ್ನು ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಉದ್ಘಾಟನೆ ನಡೆಸಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಲಿಂಗಾಯಿತ ಸಮಾಜಕ್ಕೆ ತನ್ನದೇ ಆದಂತಹ ಮನ್ನಣೆ ಇದ್ದರೂ ಇಷ್ಟಲಿಂಗದ ಪರಿಕಲ್ಪನೆಯಿಂದ ದೂರ ಉಳಿದು ಆಚಾರ ವಿಚಾರಗಳನ್ನು ಪ್ರತಿಯೊಬ್ಬರು ಮರೆಯುತ್ತಿದ್ದು, ಲಿಂಗಾಯಿತ ಸಮಾಜದಲ್ಲಿನ ಐಕ್ಯತೆ ಕುಗ್ಗುತ್ತಿದೆ ಎಂದು ಸಿದ್ಧಗಂಗಾ ಮಠದ ಶ್ರೀ ಸಿದ್ದಗಂಗಾ ಮಹಾಸ್ವಾಮಿಗಳು ಹೇಳಿದರು. ವರ್ಷಕ್ಕೆ ಮಠಕ್ಕೆ ನೀಡುವ ಒಂದು ಲಕ್ಷವನ್ನು ಸಮಾಜದ ಜನರಿಗೆ ನೆರವು ನೀಡಲು ಬಳಸಿಕೊಳ್ಳಿ ಎಂದು ಟ್ರಸ್ಟ್‌ನವರಿಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ರಾಜ್ಯದಲ್ಲಿ ಲಿಂಗಾಯಿತ ಸಮಾಜಕ್ಕೆ ತನ್ನದೇ ಆದಂತಹ ಮನ್ನಣೆ ಇದ್ದರೂ ಇಷ್ಟಲಿಂಗದ ಪರಿಕಲ್ಪನೆಯಿಂದ ದೂರ ಉಳಿದು ಆಚಾರ ವಿಚಾರಗಳನ್ನು ಪ್ರತಿಯೊಬ್ಬರು ಮರೆಯುತ್ತಿದ್ದು, ಲಿಂಗಾಯಿತ ಸಮಾಜದಲ್ಲಿನ ಐಕ್ಯತೆ ಕುಗ್ಗುತ್ತಿದೆ ಎಂದು ಸಿದ್ಧಗಂಗಾ ಮಠದ ಶ್ರೀ ಸಿದ್ದಗಂಗಾ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಡಾ.ಶಿವಕುಮಾರ ಸ್ವಾಮೀಜಿ ಸಮುದಾಯದಲ್ಲಿ‌ ನಡೆದ ಪಾದಪೂಜೆ ಮತ್ತು ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿ, ಇತ್ತೀಚಿನ ದಿನದಲ್ಲಿ ನಮ್ಮ ಸಮಾಜ ಕುಗ್ಗುತ್ತಿದೆ. ಇದಕ್ಕೆ ಕಾರಣ ಧರ್ಮದಲ್ಲಿನ ಲಿಂಗವನ್ನು ಧರಿಸಿದರೆ ಮಾತ್ರ ಲಿಂಗಾಯಿತರಾಗುತ್ತಾರೆ ಆದರೆ ವಿಶೇಷವಾಗಿ ಮಕ್ಕಳಿಗೆ ಸಂಸ್ಕಾರವನ್ನು ನೀಡುವಲ್ಲಿ ವಿಫಲರಾಗಿದ್ದೇವೆ. ಶಿವಕುಮಾರ ಸ್ವಾಮಿ ಟ್ರಸ್ಟ್ ಈ ಆಸ್ತಿಯನ್ನು ಸಂರಕ್ಷಣೆ ಮಾಡುವ ಮೂಲಕ ಜನರಿಗೆ ಉಪಯೋಗವಾಗುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಚೆನ್ನಕೇಶವ ಶೆಟ್ಟಿ ಎಂಬುವರಿಂದ ಪಡೆದ ಈ ಆಸ್ತಿಯನ್ನು ಮುಂದಿನ ದಿನಗಳಲ್ಲಿ ಸಮಾಜದ ಇನ್ನೂ ಉತ್ತಮವಾದಂತಹ ಕಾರ್ಯಗಳಿಗೆ ಬಳಕೆಯನ್ನು ಮಾಡಿ ರಿಯಾಯಿತಿ ದರದಲ್ಲಿ ಸಮಾಜದವರಿಗೆ ನೀಡಬೇಕು ಎಂದು ಹಲವು ಮುಖಂಡರ ಕೋರಿದ್ದಾರೆ. ವರ್ಷಕ್ಕೆ ಮಠಕ್ಕೆ ನೀಡುವ ಒಂದು ಲಕ್ಷವನ್ನು ಸಮಾಜದ ಜನರಿಗೆ ನೆರವು ನೀಡಲು ಬಳಸಿಕೊಳ್ಳಿ ಎಂದು ಟ್ರಸ್ಟ್‌ನವರಿಗೆ ತಿಳಿಸಿದರು.

ಹಾಸನ ತಣ್ಣೀರುಹಳ್ಳಿ ಮಠದ ವಿಜಯಕುಮಾರ ಸ್ವಾಮೀಜಿಗಳು ಮಾತನಾಡಿ, ಸಿದ್ದಗಂಗಾ ಡಾ.ಶ್ರೀ ಶಿವಕುಮಾರಸ್ವಾಮೀಜಿ ತಮ್ಮ ಜೀವಿತಾವಧಿಯಲ್ಲಿ ಕೈಗೊಂಡ ತ್ರಿವಿಧ ದಾಸೋಹದಿಂದ ಕೋಟ್ಯಂತರ ಮಂದಿಗೆ ಸಹಕಾರಿಯಾಗಿದೆ. ಅವರು ನಡೆದಾಡುವ ನಡೆ ನುಡಿಯ ದೇವರಾಗಿದ್ದಾರೆ ಎಂದರು.

ಪುಷ್ಪಗಿರಿ ಮಹಾಸಂಸ್ಥಾನ ಶ್ರೀ ಮಠದ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಕೆ.ಸುರೇಶ್, ತಣ್ಣೀರುಹಳ್ಳ ಶ್ರೀ ಮಠದ ವಿಜಯಕುಮಾರ ಸ್ವಾಮೀಜಿ, ಕೋಡ್ಲಿಪೇಟೆ, ಕಲ್ಮಠದ ಮಹಾಂತಸ್ವಾಮೀಜಿ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಡಾ.ಶಿವಕುಮಾರಸ್ಚಾಮೀಜಿ ಟ್ರಸ್ಟ್ ಅಧ್ಯಕ್ಷ ಬಿ.ಪಿ.ಧರಣೇಂದ್ರ, ಪುಷ್ಪಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ, ಬಿಜೆಪಿ ಮುಖಂಡ ಕೊರಟಿಕೆರೆ ಪ್ರಕಾಶ್, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಅದ್ಯಕ್ಷ ಎ.ಎಸ್‌.ಬಸವರಾಜ, ಮಾಜಿ ಅಧ್ಯಕ್ಷ ಸಿ.ಎಂ.ನಿಂಗರಾಜ್, ಮಾಜಿ ಅಧ್ಯಕ್ಷ ಬಿ.ಎಂ.ರವಿಕುಮಾರ್, ವಿಂಪು ಸಂತೋಷ, ಚೇತನ್, ಬಿ.ಕೆ.ಚಂದ್ರಕಲಾ, ಅದ್ಧೂರಿ ಚೇತನ್, ಕೌರಿ ರಾಜಶೇಖರ, ಪುಟ್ಟಸ್ವಾಮಿ, ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ
ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ