ಕನ್ನಡಪ್ರಭ ವಾರ್ತೆ ಕೊರಟಗೆರೆ
ಗೌರಿ ಗಣೇಶ ಹಬ್ಬ ಎಂದರೆ ಇಡಿ ದೇಶವೇ ಆಚರಣೆ ಮಾಡುವ ಹಬ್ಬವಾಗಿದ್ದು, ಜಾತಿ ಧರ್ಮ ಎನ್ನದೇ ಎಲ್ಲರೂ ಒಂದಾಗಿ ಆಚರಣೆ ಮಾಡುವ ಹಬ್ಬವಾಗಿದ್ದು, ಕೊರಟಗೆರೆಯಲ್ಲಿ ಎಲ್ಲರೂ ಒಟ್ಟಾಗಿ ಒಂದೇ ಬಾರಿ ಗಣೇಶನನ್ನು ವಿಸರ್ಜನೆ ಮಾಡುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು. ಪಟ್ಟಣದಲ್ಲಿ ನಡೆದ ಗಣಪತಿಗಳ ಉತ್ಸವದಲ್ಲಿ ಭಾಗವಹಿಸಿ ಸತ್ಯ ಗಣಪತಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ದ ಹೋರಾಡಲು ಊರಿನ ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸಿ ಗಣಪತಿ ಹಬ್ಬದ ಆಚರಣೆಯನ್ನು ಮೆರವಣಿಗೆ ಮೂಲಕ ಬಾಲಗಂಗಾಧರನಾಥ್ ತಿಲಕ್ ರವರು ಆರಂಭಿಸಿದರು ಅಲ್ಲಿಂದ ಪ್ರಾರಂಭವಾದ ಗಣೇಶ ಉತ್ಸವವು ದೇಶದೆಲ್ಲೆಡೆ ಪ್ರತಿ ವರ್ಷ ನಡೆದುಕೊಂಡು ಬರುತ್ತಿದೆ. ಗಣಪತಿ ಪೂಜೆಗೆ ಮತ್ತು ಆಚರಣೆಗೆ ಯಾವುದೇ ಜಾತಿ ಧರ್ಮದ ಕಟ್ಟುಪಾಡುಗಳಿಲ್ಲ, ಎಲ್ಲಾ ಹಬ್ಬವು ಒಂದು ದಿನಗಳಲ್ಲಿ ಮುಗಿದರೆ ಗಣಪತಿ ಹಬ್ಬದ ಆಚರಣೆ ವಾರಗಟ್ಟಲೇ ತಿಂಗಳುಗಳ ಕಾಲ ನಡೆಯುತ್ತದೆ ಎಂದರು.ಗಣಪತಿ ಪ್ರತಿಷ್ಠಾಪನೆಯ ರಂಗಮಂದಿರದಲ್ಲಿ ಹಲವು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರಂಗಭೂಮಿ ನಾಟಕಗಳು ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಊರು ಗ್ರಾಮಗಳಲ್ಲಿ ಹಬ್ಬವು ವೈಭವವಾಗಿ ಕಂಗೊಳಿಸುತ್ತದೆ. ಇಂತಹ ಗಣಪತಿ ಹಬ್ಬವು ಸಮಾಜಕ್ಕೆ ಶಾಂತಿ ನೆಮ್ಮದಿಯನ್ನು ತರಲಿ ಜನರಲ್ಲಿ ಭಾವೈಕ್ಯತೆ ಮೂಡಲಿ ಎಂದು ಕೋರಿದರು.ದಸರಾ ಹಬ್ಬದಂತೆ ಕಂಗೊಳಿಸಿದ ಗಣಪತಿಗಳು;- ಕೊರಟಗೆರೆ ಪಟ್ಟಣದಲ್ಲಿ ಒಟ್ಟು ೧೯ ಬೃಹತ್ ಗಣಪತಿಗಳ ವಿಸರ್ಜಾನೆ ಕಾರ್ಯಕ್ರಮ ಪ್ರಮುಖ ಬೀದಿಗಳಲ್ಲಿ ಸಾವಿರಾರು ಭಕ್ತರೊಂದಿಗೆ ನಡೆಯಿತು, ಮೆರವಣಿಗೆಯಲ್ಲಿ ಶೇ.೫೦ ರಷ್ಟು ಮಹಿಳೆಯರು, ಯುವತಿಯರು ಹಾಗೂ ಬಾಲಕಿಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು, ಪಟ್ಟಣದ ಸತ್ಯ ಗಣಪತಿ, ಕಟ್ಟೆ ಗಣಪತಿ, ಕೋಟೆ ಗಣಪತಿ, ರಾಮಾಂಜನೇಯ ಬೀದಿ ಗಣಪತಿ, ವಾಲ್ಮೀಕಿನಗರ ಗಣಪತಿ, ಹಿಂದೂ ಮಹಾ ಗಣಪತಿ, ತಾಲೂಕು ಕಛೇರಿ ಗಣಪತಿ, ಬೆಟ್ಟದ ಗಣಪತಿ, ವಿದ್ಯಾಗಣಪತಿ, ಕಾಳಿದಾಸ ನಗರ ಗಣಪತಿ ಸೇರಿದಂತೆ ವಿವಿಧ ಬೀಡಿಗಳ ಗಣಪತಿಗಳನ್ನು ಮೆರವಣಿಗೆಯಲ್ಲಿ ಭಾಗವಹಿಸಿ ವಿಸರ್ಜನೆ ಮಾಡಲಾಯಿತು. ಗಣಪತಿ ಮೆರವಣಿಗೆಗೆ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು. ಮೆರವಣಿಗೆ ಚಾಲನೆ ಸಂದರ್ಭದಲ್ಲಿ ಜಿ.ಪಂ. ಸಿಇಓ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಆಶೋಕ್, ಮಧುಗಿರಿ ಡಿವೈಎಸ್ಪಿ ಮಂಜುನಾಥ್, ತಹಶೀಲ್ದಾರ್ ಮಂಜುನಾಥ್, ಇಓ ಅಪೂರ್ವ, ಸಿಪಿಐ ಆರ್.ಪಿ.ಅನಿಲ್, ಪಿಎಸೈಗಳಾದ ತೀರ್ಥೇಶ್, ಅಭಿಷೇಕ್, ಯೋಗೀಶ್, ಪ.ಪಂ.ಅಧ್ಯಕ್ಷೆ ಅನಿತಾ, ಸ್ಥಾಯಿಸಮಿತಿ ಅಧ್ಯಕ್ಷೆ ಹೇಮಲತಾಮಂಜುನಾಥ್, ಸದಸ್ಯರುಗಳಾದ ಕೆ.ಆರ್.ಓಬಳರಾಜು, ಕಾವ್ಯರಮೇಶ್, ಭಾಗ್ಯಮ್ಮಗಣೇಶ್, ಭಾರತಿ ಸಿದ್ದಮಲ್ಲಯ್ಯ, ಕೆ.ಎನ್.ಲಕ್ಷ್ಮೀನಾರಾಯಣ್, ನಂದೀಶ್, ನಟರಾಜು, ಮಂಜುಳಾ ಗೋವಿಂದರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್ ಸೇರಿದಂತೆ ಇತರರು ಹಾಜರಿದ್ದರು.