100 ಹಾಸಿಗೆಯಿಂದ 150 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ

KannadaprabhaNewsNetwork | Published : Oct 24, 2024 12:31 AM

ಸಾರಾಂಶ

ಕೂಡ್ಲಿಗಿ ತಾಲೂಕು ಆಸ್ಪತ್ರೆ ವೀಕ್ಷಣೆ ಮಾಡಿದಂತೆ ಸಿಬ್ಬಂದಿ ಕೊರತೆ ಕಾಣುತ್ತಿದೆ ಇಲ್ಲಿ ವೈದ್ಯರ ಸೇವೆಗೆ ಸಾಮಗ್ರಿಗಳ ಸಲಕರಣೆ ಅವಶ್ಯಕತೆ

ಕೂಡ್ಲಿಗಿ:ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಯಿಂದ 150 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸಿದ್ಧವಿರುವುದಾಗಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಭರವಸೆ ನೀಡಿದರು.

ಅವರು ವಿಜಯನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗುವ ಮುನ್ನ ಕೂಡ್ಲಿಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ನೂತನ ಡಯಾಲಿಸಿಸ್‌ ಕೇಂದ್ರ ಉದ್ಘಾಟನೆ ಹಾಗೂ ತಾಲೂಕಿನ ಆಸ್ಪತ್ರೆಯ ವೈದ್ಯ ಸಿಬ್ಬಂದಿ ವಸತಿಗೃಹಗಳು, ಇತರೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಕೂಡ್ಲಿಗಿ ತಾಲೂಕು ಆಸ್ಪತ್ರೆ ವೀಕ್ಷಣೆ ಮಾಡಿದಂತೆ ಸಿಬ್ಬಂದಿ ಕೊರತೆ ಕಾಣುತ್ತಿದೆ ಇಲ್ಲಿ ವೈದ್ಯರ ಸೇವೆಗೆ ಸಾಮಗ್ರಿಗಳ ಸಲಕರಣೆ ಅವಶ್ಯಕತೆ ಇದ್ದು ಅದನ್ನು ಕೊಡಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದ ಸಚಿವರು ವೈದ್ಯರು ಹಾಗೂ ಸಿಬ್ಬಂದಿ ಆಸಕ್ತಿವಹಿಸಿ ತಮ್ಮ ಕರ್ತವ್ಯ ನಿರ್ವಹಿಸಿದಲ್ಲಿ ತಾಲೂಕು ಆಸ್ಪತ್ರೆ ಜಿಲ್ಲಾಸ್ಪತ್ರೆಯನ್ನು ಮೀರಿಸಬಲ್ಲದು ಎಂದರು.

ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡು ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಜನಪರ ಕಾಳಜಿ ಇಟ್ಟುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಕೂಡ್ಲಿಗಿಯಲ್ಲಿ 150ಹಾಸಿಗೆ ಆಸ್ಪತ್ರೆ ನಿರ್ಮಿಸಿ ಮಾದರಿ ಆಸ್ಪತ್ರೆಯಾಗಿ ಮಾಡಿ ಅದರ ಉದ್ಘಾಟನೆಗೆ ನಾನೇ ಬರುವೆ ಎಂದು ಸಚಿವ ದಿನೇಶ ಗುಂಡೂರಾವ್ ತಿಳಿಸಿದರು.

ಶಾಸಕ ಡಾ.ಶ್ರೀನಿವಾಸ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಕೋಟಿಗಳ ಅನುದಾನ ತರುತ್ತಿದ್ದೂ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಆಸ್ಪತ್ರೆ ಹಾಗೂ ವಸತಿ ಗೃಹಗಳಿಗೆ ಅನುದಾನ ನೀಡುವಲ್ಲಿ ಸಚಿವರ ಶ್ರಮ ಬಹಳಷ್ಟಿದೆ ಎಂದು ತಿಳಿಸಿದರು.

ಹಳೇ ಆಸ್ಪತ್ರೆ ಕಟ್ಟಡಗಳನ್ನು ನೂತನ ಕಟ್ಟಡವಾಗಿ ಮಾರ್ಪಡಿಸುವಲ್ಲಿ, ಟ್ರಾಮಾ ಕೆರ್ ಸೆಂಟರ್ ತೆರೆಯುವಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯುವಲ್ಲಿ ಸಚಿವರು ಸಹಕರಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಹರ್ಷಗುಪ್ತ, ಹೆಲ್ತ್ ಕಮಿಷನರ್ ಶಿವಕುಮಾರ, ವಿಜಯನಗರ ಜಿಲ್ಲಾಧಿಕಾರಿ ಎಂ ಎಸ್ ದಿವಾಕರ, ಹೊಸಪೇಟೆ ಡಿಎಚ್ಒ ಡಾ.ಶಂಕರನಾಯ್ಕ್, ಡಾ.ಷಣ್ಮುಖ ನಾಯ್ಕ್, ಡಾ.ವಿನಯ, ಕೂಡ್ಲಿಗಿ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರದೀಪ್ ಕುಮಾರ್, ಡಾ.ಮಧು, ಡಾ. ಜಂಭಯ್ಯ, ಡಾ. ನಾಗರಾಜ್, ಡಾ. ರವಿ, ಡಾ. ಅಚ್ಯುತ್, ಡಾ. ಮನ್ಸೂರ್, ಡಾ. ರಮ್ಯ, ಡಾ.ಉಮಾ ಪಟೇಲ್ ಸೇರಿದಂತೆ ಇತರೆ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು ಕೂಡ್ಲಿಗಿ ಪಟ್ಟಣ ಪಂಚಾಯತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಪ ಪಂ ಸದಸ್ಯೆ ಲಕ್ಷ್ಮೀದೇವಿ ಬಸವರಾಜ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸಿದ್ದನಗೌಡ, ಮಾಜಿ ಅಧ್ಯಕ್ಷ ಉದಯಜನ್ನು ಇತರರಿದ್ದರು.

Share this article