ಉಪ್ಪಿನಂಗಡಿ: ಗೃಹ ರಕ್ಷಕ ದಳ ಪ್ರವಾಹ ರಕ್ಷಣಾ ತಂಡ ರಚನೆ

KannadaprabhaNewsNetwork |  
Published : Jun 04, 2025, 01:55 AM IST
ಉಪ್ಪಿನಂಗಡಿಯಲ್ಲಿ ಗೃಹರಕ್ಷಕದಳ ಪ್ರವಾಹ ರಕ್ಷಣಾ ತಂಡ ರಚನೆ | Kannada Prabha

ಸಾರಾಂಶ

ಮುಂಗಾರು ಮಳೆಗಾಲದ ಸಮಯದಲ್ಲಿ ಸಂಭಾವ್ಯ ಪ್ರಾಕೃತಿಕ ವಿಕೋಪ ಎದುರಿಸುವ ಸಲುವಾಗಿ ಈ ಬಾರಿಯೂ ಉಪ್ಪಿನಂಗಡಿಯಲ್ಲಿ ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡ ರಚಿಸಲಾಯಿತು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಮುಂಬರುವ ಮುಂಗಾರು ಮಳೆಗಾಲದ ಸಮಯದಲ್ಲಿ ಸಂಭಾವ್ಯ ಪ್ರಾಕೃತಿಕ ವಿಕೋಪ ಎದುರಿಸುವ ಸಲುವಾಗಿ ಈ ಬಾರಿಯೂ ಉಪ್ಪಿನಂಗಡಿಯಲ್ಲಿ ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡ ರಚಿಸಲಾಯಿತು. ಕಾರ್ಯಾಚರಣೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ 2 ರಬ್ಬರ್ ದೋಣಿ, 2 ಇಂಜಿನ್, ಲೈಫ್‌ ಜಾಕೆಟ್, ಲೈಫ್‌ ಬಾಯ್, ಆಸ್ಕ ಲೈಟ್, ಜನರೇಟರ್, ಮರ ಕತ್ತರಿಸುವ ಯಂತ್ರ ಸೇರಿದಂತೆ ರಕ್ಷಣಾ ಸಲಕರಣೆಗಳನ್ನು ಉಪ್ಪಿನಂಗಡಿ ಉಪ ತಹಸೀಲ್ದಾರ್‌ ಚೆನ್ನಪ್ಪ ಗೌಡ ಪರಿಶೀಲಿಸಿದರು.ಗೃಹರಕ್ಷಕದಳದ ಪ್ರಭಾರ ಘಟಕಾಧಿಕಾರಿ ಸುಖಿತಾ ಎ.ಶೆಟ್ಟಿ ನೇತೃತ್ವದ ತಂಡದಲ್ಲಿ ಸೆಕ್ಷನ್ ಲೀಡರ್ ದಿನೇಶ್ ಬಿ., ಸಹಾಯಕ ಸೆಕ್ಷನ್ ಲೀಡರ್ ಜನಾರ್ದನ ಆಚಾರ್ಯ, ಗೃಹರಕ್ಷಕರಾದ ಸೋಮನಾಥ್, ವಸಂತ, ದೇವರಾಜ್, ಶಿಭುಜಾನ್, ಜುನೈದ್, ಸಮದ್, ಇರಲಿದ್ದಾರೆ.ಈ ತಂಡದಲ್ಲಿ ಎಲೆಕ್ಟ್ರಿಷಿಯನ್, ದೋಣಿ ಆಪರೇಟರ್, ಪ್ಲಂಬರ್, ಈಜುಗಾರರು, ಸಹಾಯಕರು ಸೇರಿದಂತೆ 9 ಗೃಹರಕ್ಷಕರು ಇರುತ್ತಾರೆ. ಈ ತಂಡವು ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳ ಅಂತ್ಯದ ವರೆಗೆ ಒಟ್ಟು 4 ತಿಂಗಳ ಕಾಲ ಉಪ್ಪಿನಂಗಡಿ ದೇವಾಲಯದ ಸ್ನಾನ ಘಟ್ಟದ ಬಳಿ ದೋಣಿ ಸಹಿತ ರಕ್ಷಣಾ ಸಲಕರಣೆಯೊಂದಿಗೆ ಮೊಕ್ಕಾಂ ಇರಲಿದೆ.ರಸ್ತೆಗಳಲ್ಲಿ ಮರಗಳು ಉರುಳಿ ಬಿದ್ದರೆ ತೆರವುಗೊಳಿಸುವುದು, ನೆರೆ ಬಂದ ಸಮಯದಲ್ಲಿ ಸಾರ್ವಜನಿಕರ ಆಸ್ತಿ ರಕ್ಷಣೆಗೆ ಮೊದಲ ಆದ್ಯತೆ ನೀಡಲಿದೆಈ ತಂಡ ರಚನೆ ಸಂದರ್ಭ ಉಪ ತಹಸೀಲ್ದಾರ್‌ ಚೆನ್ನಪ್ಪ ಗೌಡ, ಉಪ್ಪಿನಂಗಡಿ ಪೋಲಿಸ್ ಠಾಣೆ ಸಹಾಯಕ ಪೋಲಿಸ್ ಉಪ ನೀರಿಕ್ಷಕ ದೇವಪ್ಪ ಗೌಡ, ಉಪ್ಪಿನಂಗಡಿ ಮಾದರಿ ಶಾಲೆಯ ಮುಖ್ಯೋಪಾಧ್ಯಾಯ ಹನುಮಂತಯ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಜೀದ್, ಗ್ರಾಮ ಸಹಾಯಕ ಯತೀಶ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!