ಸಿಪಿಸಿ ಕಾನೂನು ಪದವಿ ಪರೀಕ್ಷೆಗಳನ್ನು ಮುಂದೂಡಲು ಒತ್ತಾಯ

KannadaprabhaNewsNetwork |  
Published : Jan 23, 2025, 12:49 AM IST
ಫೋಟೊ ಶೀರ್ಷಿಕೆ: 22ಆರ್‌ಎನ್‌ಆರ್2ರಾಣಿಬೆನ್ನೂರಿನಲ್ಲಿ ಕಾನೂನು ಪದವಿ ವಿದ್ಯಾರ್ಥಿಗಳು ಸಿಪಿಸಿ ಕಾನೂನು ಪದವಿ ಪರೀಕ್ಷೆಗಳನ್ನು ಮುಂದೂಡಲು ಆಗ್ರಹಿಸಿ ಆರ್‌ಟಿಇಎಸ್ ಕಾನೂನು ಮಹಾವಿದ್ಯಾಲದ ಪ್ರಾ ರಮೇಶ ಬಿ ಮೂಲಕ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಕುಲಪತಿ ಕುಲಪತಿ ಪ್ರೊ. ಡಾ. ಸಿ. ಬಸವರಾಜು ಅವರಿಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಕೆಪಿಎಸ್‌ಸಿ ವಿವಿಧ ಇಲಾಖೆಗಳ ಗ್ರೂಪ್ 'ಬಿ' ವೃಂದದ ಹುದ್ದೆಗಳ ನೇಮಕಾತಿಯ ಅಭ್ಯರ್ಥಿಗಳಿಗೆ ಜ. 25ರಂದು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಆದರಿಂದ ಜ. 25ರಂದು ನಡೆಯಬೇಕಾದ ಸಿವಿಲ್ ಪ್ರೊಸೀಜರ್ ಸಂಹಿತೆಯ (ಸಿಪಿಸಿ) ವಿಷಯದ ಪರೀಕ್ಷೆಗಳನ್ನು ಮುಂದೂಡುವಂತೆ ಕೋರಿದ್ದಾರೆ.

ರಾಣಿಬೆನ್ನೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ವಿವಿಧ ಇಲಾಖೆಗಳ ಗ್ರೂಪ್ ''''''''ಬಿ'''''''' ವೃಂದದ ಹುದ್ದೆಗಳ ನೇಮಕಾತಿ ಪರೀಕ್ಷೆ ಹಾಗೂ ಕಾನೂನು ಪದವಿ ಪರೀಕ್ಷೆಗಳು ಒಂದೇ ದಿನ ಇರುವುದರಿಂದ ಸಿವಿಲ್ ಪ್ರೊಸೀಜರ್ ಸಂಹಿತೆಯ (ಸಿಪಿಸಿ) ವಿಷಯದ ಪರೀಕ್ಷೆಗಳನ್ನು ಮುಂದೂಡಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕಾನೂನು ವಿದ್ಯಾರ್ಥಿಗಳ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಆರ್‌ಟಿಇಎಸ್ ಕಾನೂನು ಮಹಾವಿದ್ಯಾಲದ ಪ್ರಾಚಾರ್ಯ ರಮೇಶ ಬಿ. ಮೂಲಕ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಡಾ. ಸಿ. ಬಸವರಾಜು ಅವರಿಗೆ ಮನವಿ ಸಲ್ಲಿಸಿದರು.

ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಬರುವ ಕಾನೂನು ಪದವಿ ಕಾಲೇಜ್‌ಗಳ ಸೆಮಿಸ್ಟರ್ ಪರೀಕ್ಷೆಗಳು ಜನವರಿ ತಿಂಗಳು ಪ್ರಾರಂಭವಾಗಿವೆ. ಆದರೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ವಿವಿಧ ಇಲಾಖೆಗಳ ಗ್ರೂಪ್ ''''''''ಬಿ'''''''' ವೃಂದದ ಹುದ್ದೆಗಳ ನೇಮಕಾತಿಯ ಅಭ್ಯರ್ಥಿಗಳಿಗೆ ಜ. 25ರಂದು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತಿದ್ದು ಪರೀಕ್ಷೆ ಬರೆಯಲು ದೂರದ ಊರುಗಳಿಗೆ (ಸುಮಾರು 300-500 ಕಿಮೀ) ಹೋಗಬೇಕಾಗಿದೆ. ಪರೀಕ್ಷಾ ಕೇಂದ್ರಗಳಿಗೆ ತಲುಪಲು ಎರಡ್ಮೂರು ದಿನಗಳ ಪ್ರಯಾಣ ಮಾಡಬೇಕಾಗಿರುವುದರಿಂದ ಯಾವುದಾದರೂ ಒಂದು ಪರೀಕ್ಷೆ ಬರೆಯಲು ಸಾಧ್ಯವಾಗುತ್ತದೆ. ಮತ್ತೊಂದು ಪರೀಕ್ಷೆಗಳಿಂದ ವಂಚಿತರಾಗುವ ಗೊಂದಲ, ಭಯದ ವಾತಾವರಣದಲ್ಲಿ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಆದರಿಂದ ಜ. 25ರಂದು ನಡೆಯಬೇಕಾದ ಸಿವಿಲ್ ಪ್ರೊಸೀಜರ್ ಸಂಹಿತೆಯ (ಸಿಪಿಸಿ) ವಿಷಯದ ಪರೀಕ್ಷೆಗಳನ್ನು ಮುಂದೂಡುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.

ಶಿವರಾಜ ಹುಣಸಿಕಟ್ಟಿ, ಸುನೀಲ ಬೆಂದ್ರೆ, ವಿನಾಯಕ, ಮುತ್ತಯ್ಯ ಹಿರೇಮಠ, ಕಿರಣ ತುಮ್ಮಿನಕಟ್ಟಿ, ಕರಬಸಪ್ಪ ಎಚ್‌., ರಾಹುಲ ರಟ್ಟಿಹಳ್ಳಿ, ಅಜೇಯ, ಹನುಮಂತ ಹರಿಜನ, ಪುನೀತ್ ಎಸ್. ಹಾಗೂ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ