ಮಾಗಡಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಪಡೆಯದೆ ಖುಷ್ಕಿ ಭೂಮಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ನಿಷೇಧಿತ ಸ್ಫೋಟಕಗಳ ಬಳಕೆಯಿಂದ ಗ್ರಾಮಸ್ಥರಿಗೆ ತೊಂದರೆಯಾಗಿದ್ದು, ಆತಂಕಕ್ಕೆ ಒಳಗಾಗಿದ್ದಾರೆ.
ಗಣಿಗಾರಿಕೆಗೆ ಅನ್ಯರಾಜ್ಯಗಳ ಕಾರ್ಮಿಕರ ಬಳಕೆ:
ಕಲ್ಲು ಗಣಿಗಾರಿಕೆಗೆ ಅನ್ಯರಾಜ್ಯಗಳ ನುರಿತ ಕಾರ್ಮಿಕರನ್ನು ಬಳಸಿಕೊಂಡು ರಾತ್ರಿ ವೇಳೆ ಯಾವುದೇ ಮುಂಜಾಗೃತಾ ಕ್ರಮ ವಹಿಸದೆ ನಿಷೇಧಿತ ಸ್ಫೋಟಕಗಳನ್ನು ಬಳಸುತ್ತಿದ್ದಾರೆ. ಕಲ್ಲು ಸ್ಫೋಟವಾದ ಬಳಿಕ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ವಾಪಸ್ ಕಳುಹಿಸಿ ಸ್ಥಳೀಯ ಜೆಸಿಬಿ ಯಂತ್ರಗಳ ಮೂಲಕ ಬಂಡೆಗಳನ್ನು ಬೇರ್ಪಡಿಸುವ ಕೆಲಸ ಮಾಡುತ್ತಿದ್ದಾರೆ.ಬೆಂಗಳೂರಿಗೆ ಸಮೀಪ ಇರುವ ಮಾಗಡಿ ತಾಲೂಕಿನಲ್ಲಿ ರೈತರಿಂದ ಕಡಿಮೆ ಬೆಲೆಗೆ ಜಮೀನುಗಳನ್ನು ಖರೀದಿ ಮಾಡಿ ಜಮೀನಲ್ಲಿರುವ ಬಂಡೆಗಳನ್ನು ತೆರವುಗೊಳಿಸಲು ನಿಷೇಧಿತ ಸ್ಫೋಟಕಗಳನ್ನು ಬಳಸಿ ಬಂಡೆಗಳನ್ನು ತೆಗೆಯುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದೆ.ಫೋಟೋ 21ಮಾಗಡಿ1: ಮಾಗಡಿ ತಾಲೂಕಿನ ಹನುಮಾಪುರ ಸಮೀಪದ ಮೊಟ್ಟಗೌಡನ ಪಾಳ್ಯದಿಂದ ಕುರುಪಾಳ್ಯಕ್ಕೆ ಹಾದು ಹೋಗುವ ಖುಷ್ಕಿ ಜಮೀನಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ.ಪೋಟೋ 21ಮಾಗಡಿ2 : ನಿಷೇಧಿತ ಸ್ಫೋಟಕಗಳಿಂದ ಬಂಡೆಗಳನ್ನು ಸ್ಫೋಟಿಸುತ್ತಿರುವುದು.