ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ವಿಶ್ವ ಭೂಮಿ ದಿನಾಚರಣೆ ಹಾಗೂ ಹುಟ್ಟುಹಬ್ಬದ ಪ್ರಯುಕ್ತ ಮಮತೆಯ ಮಡಿಲು ಕೇಂದ್ರದಲ್ಲಿ ಅನ್ನದಾಸೋಹ ಮತ್ತು ಗಿಡ ವಿತರಿಸಿ ಮಾತನಾಡಿದರು.
ಪರಿಸರ ಸಂರಕ್ಷಣೆ ಹಾಗೂ ಭೂಮಿಯ ಮೇಲಿನ ನಮ್ಮ ಹೊಣೆಗಾರಿಕೆಯನ್ನು ಜಾಗೃತಗೊಳಿಸುವ ಸಲುವಾಗಿ ವಿಶ್ವಭೂಮಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ೧೯೭೦ರಲ್ಲಿ ಅಮೆರಿಕದ ಸೆನೆಟರ್ ಗೇಲೋರ್ಡ್ ನೆಲ್ಸನ್ ಅವರು ಪರಿಸರ ಸಮಸ್ಯೆಗಳನ್ನು ಸಾರ್ವಜನಿಕ ಚರ್ಚೆಗೆ ತರುವ ಉದ್ದೇಶದಿಂದ ವಿಶ್ವ ಭೂಮಿ ದಿನವನ್ನು ಪ್ರಾರಂಭಿಸಿದರು. ಆ ದಿನ ೨೦ ಮಿಲಿಯನ್ ಅಮೆರಿಕನ್ನರು ಪರಿಸರದ ಪರವಾಗಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು. ಈ ಚಳವಳಿಯ ಪರಿಣಾಮವಾಗಿ ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆ ಸ್ಥಾಪನೆಯಾಯಿತು ಎಂದರು.ಜಾಗತಿಕ ತಾಪಮಾನ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ವಿಶ್ವದಾದ್ಯಂತ ಹಲವಾರು ಪರಿಸರ ಸ್ನೇಹಿ ಕಾರ್ಯಕ್ರಮಗಳು ನಡೆಯುತ್ತಿವೆ. ಅಮೆರಿಕದ ಡೆಟ್ರಾಯಿಟ್ ನಗರದಲ್ಲಿ ಜೈಂಟ್ ಸೆಕ್ವಾಯಾ ಮರಗಳ ತೋಟ ನಿರ್ಮಾಣದ ಮೂಲಕ ನಗರ ಹಸಿರೀಕರಣಕ್ಕೆ ಮುಂದಾಗಿದೆ. ಕ್ಷಿಸಿಯಾಟಲ್‌ನಲ್ಲಿ ಲೇಡಿಬಗ್ ಫೆಸ್ಟಿವಲ್, ಪಾರ್ಕ್ ಶುದ್ಧೀಕರಣ ಮತ್ತು ಪರಿಸರ ಜಾಗೃತಿಗಾಗಿ ವಿವಿಧ ಸಮುದಾಯ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಕಲಾ ತಪಸ್ವಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಅನಿಲ್‌ಕುಮಾರ್, ಡಾ.ಈ.ಸಿ.ನಿಂಗರಾಜ್‌ಗೌಡ ಫೌಂಡೇಷನ್ ಕಾರ್ಯದರ್ಶಿ ವೈ.ಹೆಚ್.ಲೋಹಿತ್‌ಕುಮಾರ್, ನಿರ್ದೇಶಕರಾದ ಪಿ.ಕೆ.ರಮೇಶ್, ರಾಮಸ್ವಾಮಿ, ರಾಜುಸ್ವಾಮಿ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ಎಂ.ಯೋಗೇಶ್ ಇದ್ದರು.