ಜನಸೇವೆಗೆ ದೊರೆತ ಅ‍ವಕಾಶ ಬಳಸಿಕೊಳ್ಳಿ

KannadaprabhaNewsNetwork |  
Published : Jun 18, 2024, 12:51 AM IST
೧೭ಟೇಕಲ್-೧ಟೇಕಲ್‌ನ ನೂಟವೆ ಗ್ರಾಪಂ ನ ತೊರಲಕ್ಕಿ ಶಾಲಾ ಆವರಣದಲ್ಲಿ ಡಾ.ಕಿರಣ್ ಸೋಮಣ್ಣ ಟ್ರಸ್ಟ್‌ನಿಂದ ಬೃಹತ್ ಆರೋಗ್ಯ ತಪಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ಶಾಸಕ ಕೆ.ವೈ.ನಂಜೇಗೌಡರು ಗಿಡ ನೀರು ಹಾಕುವುದರ ಮೂಲಕ ಚಾಲನೆ ನೀಡಿದರು. | Kannada Prabha

ಸಾರಾಂಶ

ಮಾಲೂರು ತಾಲ್ಲೂಕಿನ ೨೮ ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿಯೊಂದು ಪಂಚಾತಿಗಳಲ್ಲೂ ಸರ್ಕಾರ ಹಾಗೂ ಡಾ. ಕಿರಣ್ ಸೋಮಣ್ಣರ ಸಹಭಾಗೀತ್ವದಲ್ಲಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲು ಶಾಸಕ ನಂಜೇಗೌಡ ಅವರು ಉದ್ದೇಶಿಸಿದ್ದಾರೆ

ಕನ್ನಡಪ್ರಭ ವಾರ್ತೆ ಟೇಕಲ್ಸಾರ್ವಜನಿಕ ಜೀವನದಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕುವುದು ವಿರಳ. ಅದು ಸಿಕ್ಕಾಗ ಸಮರ್ಪಕವಾಗಿ ಬಳಸಿಕೊಳ್ಳಬೇಕು. ವೈದ್ಯ ಡಾ.ಕಿರಣ್ ಸೋಮಣ್ಣ ಇಡೀ ಕುಟುಂಬದ ಸಹಕಾರದೊಂದಿಗೆ ಬೃಹತ್ ಆರೋಗ್ಯ ಶಿಬಿರ ಏರ್ಪಡಿಸಿ, ಉಚಿತ ಆರೋಗ್ಯ ಉಪಚಾರ ಜೌಷಧಿಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.ಟೇಕಲ್‌ನ ತೊರಲಕ್ಕಿಯಲ್ಲಿ ಡಾ.ಕಿರಣ್ ಸೋಮಣ್ಣ ಚಾರಿಟ್ರಬಲ್ ಟ್ರಸ್ಟ್‌ನಿಂದ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರಕ್ಕೆ ಶಾಸಕರು ಚಾಲನೆ ನೀಡಿ ಮಾತನಾಡಿದರು.ಮುಂದಿನ ದಿನಗಳಲ್ಲಿ ಮಾಲೂರು ತಾಲ್ಲೂಕಿನ ೨೮ ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿಯೊಂದು ಪಂಚಾತಿಗಳಲ್ಲೂ ಸರ್ಕಾರ ಹಾಗೂ ಡಾ. ಕಿರಣ್ ಸೋಮಣ್ಣರ ಸಹಭಾಗೀತ್ವದಲ್ಲಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ ಎಂದರು.ಬಡ ಜನರ ಆರೋಗ್ಯ ರಕ್ಷಣೆ

ಐಸ್ಟ್‌ನ ಅಧ್ಯಕ್ಷ ಡಾ.ಕಿರಣ್ ಸೋಮಣ್ಣ ಮಾತನಾಡಿ, ಗ್ರಾಮೀಣ ಭಾಗದ ಬಡ ಜನರ ಆರೋಗ್ಯ ಹಿತದೃಷ್ಷಿಯಿಂದ ಶಾಸಕ ಕೆ.ವೈ.ನಂಜೇಗೌಡರ ಹಾಗೂ ನನ್ನ ಕುಟುಂಬ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಸ್ನೇಹಿತ ಬಳಗದ ಸಹಕಾರದಿಂದ ೭ಕ್ಕೂ ಹೆಚ್ಚು ಬೃಹತ್ ಆರೋಗ್ಯ ಶಿಬಿರ ಹಮ್ಮಿಕೊಂಡು ಸೇವೆ ಮಾಡಲಾಗುತ್ತಿದೆ. ಪ್ರಸ್ತುತ ತೊರಲಕ್ಕಿ ಸುತ್ತ ಮುತ್ತಲಿನ ಬಡ ಜನರಿಗೆ ಆರೋಗ್ಯ ತಪಸಣಾ ಶಿಬಿರ ಏರ್ಪಡಿಸಿ ಉಚಿತ ಔಷಧಿ ನೀಡಲಾಗುತ್ತಿದೆ ಎಂದರು.

ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಎಂ.ವಿ.ಹನುಮಂತಯ್ಯ, ಕೆ.ಪಿ.ಸಿ.ಸಿ ಸದಸ್ಯ ಅಂಜನಿ ಸೋಮಣ್ಣ, ಟ್ರಸ್ಟಿನ ಅಧ್ಯಕ್ಷ ಡಾ.ಕಿರಣ್ ಸೋಮಣ್ಣ, ಡಾ.ಪ್ರತಿಭಾ ಕಿರಣ್, ಸದಸ್ಯ ಅಂಜನಿ ಭರತ್, ಡಿ.ಸಿ.ಸಿ. ಬ್ಯಾಂಕಿನ ಚೆನ್ನರಾಯಪ್ಪ, ಮುಖಂಡರಾದ ಟಿ.ಎಂ.ಅಶೋಕ್ ಕುಮಾರ್, ಸುನೀಲ್ ನಂಜೇಗೌಡ, ನಿದಮಂಗಲ ವೆಂಕಟಸ್ವಾಮಿ, ನಾಗರಾಜ್, ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!