ಬೆಂಗಳೂರು: ಯುವಕರನ್ನು ರಾಷ್ಟ್ರ ನಿರ್ಮಾಣ, ಸಮಾಜ ಸೇವೆಗೆ ಬಳಸಿಕೊಳ್ಳಬೇಕು ಹಾಗೂ ಇದರ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಸಹಕರಿಯಾಗಬೇಕು ಎಂದು ಎಸ್‌ವೈಎಸ್ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಪಯೋಟ ಕರೆ ನೀಡಿದರು.ಎಸ್‌ವೈಎಸ್ ಜಯನಗರ ಝೋನ್ ವಾರ್ಷಿಕ ಕೌನ್ಸಿಲ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಕೋಮುವಾದವು ಅಪಾಯಕಾರಿಯಾಗಿ ಹೆಚ್ಚುತ್ತಿದ್ದು, ಇದರಿಂದ ದೇಶ ಅಭದ್ರತೆಯತ್ತ ಸಾಗುತ್ತಿದೆ. ಯುವಕರು ತಮ್ಮ ಯುವತ್ವವನ್ನು ಕ್ರಿಯಾಶೀಲವಾಗಿ ಬಳಸಿಕೊಳ್ಳುವ ಜತೆಗೆ ಅದಕ್ಕೆ ಉಪಯುಕ್ತವಾದ ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಲು ಸಿದ್ಧರಾಗಬೇಕು ಎಂದರು.
ಶಿಹಾಬ್ ಮಡಿವಾಳ ಸ್ವಾಗತಿಸಿ, ಜಮಾಲ್ ಸಖಾಫಿ ಧನ್ಯವಾದ ಸಮರ್ಪಿಸಿದರು.