ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ: 55 ಸಾವಿರ ಕೊರತೆ

KannadaprabhaNewsNetwork |  
Published : Jan 20, 2024, 02:04 AM IST
ಕಸಾಪ ಜಿಲ್ಲಾ ಕಾರ್ಯದರ್ಶಿ ಪಿ.ಆರ್.ನಾಯ್ಕ ಮಾಹಿತಿ  ನೀಡುತ್ತಿರುವುದು | Kannada Prabha

ಸಾರಾಂಶ

ಹೊನ್ನಾವರ ತಾಲೂಕಿನ ಶ್ರೀ ಮೂಡ ಗಣಪತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಉತ್ತರ ಕನ್ನಡ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿವಿಧ ಮೂಲಗಳಿಂದ 9.24 ಲಕ್ಷ ಜಮಾ ಆಗಿದ್ದು, 9.79 ಲಕ್ಷ ಖರ್ಚಾಗಿದೆ.

ಹೊನ್ನಾವರ:

ತಾಲೂಕಿನ ಶ್ರೀ ಮೂಡ ಗಣಪತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಉತ್ತರ ಕನ್ನಡ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿವಿಧ ಮೂಲಗಳಿಂದ ₹9.24 ಲಕ್ಷ ಜಮಾ ಆಗಿದ್ದು, ₹9.79 ಲಕ್ಷ ಖರ್ಚಾಗಿದೆ ಎಂದು ಕಸಾಪ ಜಿಲ್ಲಾ ಕಾರ್ಯದರ್ಶಿ ಪಿ.ಆರ್. ನಾಯ್ಕ ತಿಳಿಸಿದರು.

ತಾಪಂ ಸಭಾಭವನದಲ್ಲಿ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾ ಸಮ್ಮೇಳನದ ಖರ್ಚು-ವೆಚ್ಚವನ್ನು ಮೂಲ ರಶೀದಿಯೊಂದಿಗೆ ಮಂಡಿಸಿದರು.ಸಮ್ಮೇಳನದಲ್ಲಿ ಭಾಗವಹಿಸಿದ ಹಿರಿ-ಕಿರಿಯ ಸಾಹಿತಿಗಳಿಗೆ ಗೌರವಧನ, ಪ್ರಯಾಣ ವೆಚ್ಚ, ಮೆರವಣಿಗೆ ಸಂದರ್ಭದಲ್ಲಿ ಭಾಗವಹಿಸಿದ ಕಲಾತಂಡಗಳಿಗೆ ಗೌರವಧನ, ಬ್ಯಾನರ್, ಬಾವುಟ, ಬಂಟಿಂಗ್ಸ್, ಶಾಲು, ಸನ್ಮಾನಿತರಿಗೆ ಗೌರವಧನ, ಪೆಂಡಾಲ್, ವೇದಿಕೆ, ಪುಸ್ತಕ ಮಳಿಗೆ ಮುಂತಾದವುಗಳಿಗೆ ನಿಗದಿಪಡಿಸಿದ ದರದಂತೆ ಖರ್ಚು-ವೆಚ್ಚ ಭರಿಸಲಾಗಿದೆ ಎಂದು ತಿಳಿಸಿದರು.

ಎರಡು ದಿನಗಳ ಕಾಲ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದವರಿಗೆ ಊಟ, ಉಪಾಹಾರ ಮತ್ತು ತಂಪು ಪಾನೀಯ ವ್ಯವಸ್ಥೆಯನ್ನು ಉಸ್ತುವಾರಿ ಸಚಿವ ಮಂಕಾಳ ವೈದ್ಯ ನೀಡಿದ್ದಾರೆ. ಶಾಸಕ ದಿನಕರ ಶೆಟ್ಟಿ, ಉದ್ಯಮಿ ಜಿ.ಜಿ. ಶಂಕರ್ ಸಹಕಾರ ನೀಡಿದ್ದಾರೆ. ಆಗಮಿಸಿದ ಸಾಹಿತಿಗಳಿಗೆ ಗೌತಮಿ ಶೆಟ್ಟಿ ಅವರು ಬ್ಯಾಗ್‌ನ್ನು ಉಚಿತವಾಗಿ ನೀಡಿದ್ದಾರೆ. ತಾಲೂಕಿನ ವಿವಿಧ ಸಂಘಟನೆಗಳು, ಇಲಾಖೆಯವರು, ದಾನಿಗಳು ಹಾಗೂ ಶಿಕ್ಷಕರಿಂದ ದೇಣಿಗೆ ಸಂಗ್ರಹಿಸಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ್ದಾರೆ. ಸಹಕಾರ ನೀಡಿದವರನ್ನು ಅಭಿನಂದಿಸುತ್ತೇವೆ ಎಂದರು.

ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಎಲ್ಲ ಕನ್ನಡದ ಮನಸ್ಸುಗಳು ಭಾಗವಹಿಸುವುದರಿಂದ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ಲೆಕ್ಕಪತ್ರವನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ಶಿಸ್ತುಬದ್ಧವಾಗಿ ಇಡಲಾಗಿದೆ. ಜಮಾ ಖರ್ಚುಗಳನ್ನು ಲೆಕ್ಕಪರಿಶೋಧಕರಿಂದ ಆಡಿಟ್ ಮಾಡಿಸಿದ ಆನಂತರ ಸರ್ವ ಸದಸ್ಯರ ಸಭೆ ಕರೆದು ಮಂಡಿಸಲಾಗುತ್ತದೆ. ಸ್ಮರಣ ಸಂಚಿಕೆಗೆ ಜಾಹೀರಾತು ಸಂಗ್ರಹಿಸಿ ಕೊರತೆ ಹಣ ಸರಿದೂಗಿಸಲು ಪ್ರಯತ್ನಿಸಲಾಗುವುದು ಎಂದರು.

ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ ನಾಯ್ಕ ಮಾತನಾಡಿ, ಸಮ್ಮೇಳನದ ಯಶಸ್ಸಿಗೆ ಪ್ರತಿಯೊಂದು ಕನ್ನಡದ ಮನಸ್ಸುಗಳು ಕಾರಣ ಎಂದರು.

ಜಿಲ್ಲಾ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್, ಸೇಫ್ ಸ್ಟಾರ್ ಸಂಸ್ಥೆಯ ಮುಖ್ಯಸ್ಥ ಜಿ.ಜಿ. ಶಂಕರ, ಹಿರಿಯ ಸಾಹಿತಿ ಎನ್.ಆರ್. ನಾಯಕ, ನೌಕರರ ಸಂಘದ ಅಧ್ಯಕ್ಷ ಆರ್.ಟಿ. ನಾಯ್ಕ, ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಎಂ. ಹೆಗಡೆ, ಜಿಲ್ಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಸುದೀಶ ನಾಯ್ಕ, ಮಹೇಶ ಭಂಡಾರಿ ಮಾತನಾಡಿದರು. ಪ್ರಮುಖರಾದ ಎಲ್.ಎಂ. ಹೆಗಡೆ, ಸತೀಶ ನಾಯ್ಕ, ಪ್ರಕಾಶ ನಾಯ್ಕ, ಜನಾರ್ದನ ಕಾಣಕೋಣಕರ್, ದೀಪಕ್ ನಾಯ್ಕ ಉಪಸ್ಥಿತರಿದ್ದರು.

ತಾಲೂಕು ಘಟಕದ ಅಧ್ಯಕ್ಷ ಎಸ್.ಎಚ್. ಗೌಡ ಸ್ವಾಗತಿಸಿದರು. ಜಿಲ್ಲಾ ಕೋಶಾಧ್ಯಕ್ಷ ಮುರ್ಜುಜಾ ಹುಸೇನ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!