ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಮೈಸೂರು ಮಹಾನಗರ ಪಾಲಿಕೆಯು ಮಂಗಳವಾರ ಆಯೋಜಿಸಿದ್ದ ಕಾಯಕ ಶರಣರ ಜಯಂತಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶಿವ ಶರಣರು ತಮ್ಮ ತಮ್ಮ ವಚನಗಳ ಮೂಲಕ ಪ್ರಯತ್ನಿಸಿದರು. ಸಮಾಜದಲ್ಲಿ ಮುಂದಿನ ಪೀಳಿಗೆಗೆ ಅವರ ವಿಚಾರಧಾರೆ ಮತ್ತು ಸಮಾಜದ ಅಸಮಾನತೆ ಬಗ್ಗೆ ತಿಳಿದುಕೊಳ್ಳಬೇಕು ಎಂದರು.ಸಮಾಜದಲ್ಲಿ ವಚನಕಾರರ ಸಂದೇಶವನ್ನು ಇರಿಸಿಕೊಂಡು ಜೀವನ ನಡೆಸಬೇಕು. ಸಮಾಜ ಉತ್ತಮವಾದ ರೀತಿಯಲ್ಲಿ ಇರಬೇಕಾದರೆ ಹಿಂದಿನ ಶಿವಶರಣ ವಚನಗಳ ಸಂದೇಶ ಮಹತ್ವವನ್ನು ತಿಳಿದು ಬದುಕಿನಲ್ಲಿ ಮಾನಸಿಕವಾಗಿ ಸದೃಢವಾಗಿ ತಮ್ಮ ಕಾಯಕವನ್ನು ನಡೆಸಬೇಕು ಎಂದರು.
ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ಮಾತನಾಡಿ, ಇತಿಹಾಸವನ್ನು ತಿದ್ದುಪಡಿ ಮಾಡಲು ಯಾರಿಗೂ ಶಕ್ತಿ ಇಲ್ಲ, ಅದನ್ನು ಅರ್ಥ ಮಾಡಿಕೊಳ್ಳಬೇಕು. ಭಾಷೆ, ಧರ್ಮ, ಜಾತಿ ಇವುಗಳನ್ನು ಸಮಾಜದಲ್ಲಿ ಸಮಸ್ಯೆಗಳನ್ನಾಗಿ ನಾವೇ ಸೃಷ್ಟಿಸಿಕೊಂಡಿದ್ದೇವೆ. ಸಮಾಜದಲ್ಲಿ ಏಳು ಬೀಳುಗಳನ್ನು ತಿಳಿದು ಜೀವನ ನಡೆಸುವುದು ಅತ್ಯಗತ್ಯ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಕಾಯಕ ಸಮಾಜ ಎಂದರೆ ಜೀವನದಲ್ಲಿ ಸುಳ್ಳು ಮೋಸ ವಂಚನೆ ಇವುಗಳನ್ನು ಬದಿಗಿಟ್ಟು ಜೀವನದಲ್ಲಿ ದುಡಿದು ತಿನ್ನುವ ಕೆಲಸದವರು. ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಹಲವಾರು ಶರಣ ವಚನಕಾರರು ಹೋರಾಟ ಕೈಗೊಂಡಿದ್ದರು ಎಂದರು.
ಶಿವ ಶರಣರ ಹರಳಯ್ಯ ಮಹಾಸಂಸ್ಥಾನ ಮಠದ ಶ್ರೀ ರುದ್ರಪ್ಪ ಹರಳಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಕನ್ನಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಮುಖಂಡರಾದ ಎಡತೋರ ನಿಂಗರಾಜು, ಪಾಳ್ಯ ರಾಜಪ್ಪ, ಕೆ.ಆರ್. ನಗರ ಮಹದೇವ, ಮೂಗೂರು ನಂಜುಂಡಸ್ವಾಮಿ ಮೊದಲಾದವರು ಇದ್ದರು.
- ತನ್ವೀರ್ ಸೇಠ್, ಶಾಸಕರುಜಾತಿಯನ್ನು ನಾಶ ಮಾಡಲು ಯಾವುದೇ ಔಷಧಿ ಇಲ್ಲ. ಮನುಷ್ಯನ ಮನಸ್ಥಿತಿಯಿಂದ ಹೋಗಲಾಡಿಸಲು ಮಾತ್ರ ಸಾಧ್ಯ. ಪ್ರತಿಯೊಬ್ಬರು ಅವಕಾಶ ಬಂದಾಗ ಅದನ್ನು ಉಪಯೋಗಿಸಿಕೊಳ್ಳಬೇಕು. ಸಮಾಜದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿ ವಿದ್ಯಾವಂತರಾಗಿ ಮಾಡಬೇಕು.