ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಬೆಟ್ಟದಮಾದಹಳ್ಳಿ ಗ್ರಾಮದ ಬಿ.ಸಿ.ಮಹದೇವಸ್ವಾಮಿ ಅವರ ತೋಟದ ಮನೆಯಲ್ಲಿ ನಡೆದ ಊರಿಂದೂರಿಗೆ ಶರಣ ಸಂದೇಶ 19ರ ಕಾರ್ಯಕ್ರಮದಲ್ಲಿ ವಚನಗಳ ವೈಚಾರಿಕತೆ ವಿಷಯ ಕುರಿತು ಮಾತನಾಡಿದರು. ರೂಢಿ ಅಲ್ಲಗಳೆಯುವುದೇ ವೈಚಾರಿಕತೆ ಅಂತಾರೆ ಕೆಲವರು. ಆದರೆ ವೈಚಾರಿಕತೆ ಅಂದರೆ ಸತ್ಯವನ್ನು ಅರಿಯುವುದು ಅಂತ. ಹಿರಿಯರು ವಚನಗಳನ್ನು ಮಕ್ಕಳಿಗೆ ಓದಿಸುವುದನ್ನು ಕಲಿಸಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ಹಿಂದೂ ಸಂಸ್ಕೃತಿ ಇತ್ತು. ಹಿಂದೂ ಧರ್ಮವಲ್ಲ. ಜಗತ್ತಿನ ಮೊದಲ ಧರ್ಮ ಜೈನ ಧರ್ಮವಾಗಿದೆ. ಈ ಧರ್ಮವನ್ನು ಅಪ್ಪಿಕೊಂಡು ಒಪ್ಪಿಕೊಳ್ಳಬೇಕು. ವಚನಗಳು ಎಂದರೆ ವೈಚಾರಿಕತೆಯ ಕಂಡರೆ ವಚನಗಳಲ್ಲಿ ಉಪ್ಪೂ ಇದೆ, ಸಿಹಿಯೂ ಇದೆ. ಶರಣ ಸಂದೇಶ ಮಾಡುವುದು ಕಾಲಹರಣ ಎನ್ನೂವರರು ಇದ್ದಾರೆ ಎಂದರು. ಇತ್ತೀಚೆಗೆ ನಡೆದ ಸಿಇಟಿ, ನೀಟ್ ಪರೀಕ್ಷೆಗಳ ಸಮಯದಲ್ಲಿ ಜನಿವಾರ ಸದ್ದು ಮಾಡಿತು ಆದರೆ ಲಿಂಗದಾರ ಸದ್ದು ಮಾಡಲಿಲ್ಲ, ಯಾಕೆ ಎಂದರೆ ವಿದ್ಯಾರ್ಥಿಗಳ ಕೊರಳಲ್ಲಿ ಲಿಂಗಗಳೇ ಇರಲಿಲ್ಲವಲ್ಲ ಎಂದು ಸಭಿಕರನ್ನು ನಗೆ ಗಡಲಲ್ಲಿ ಮುಳುಗಿಸಿದರು.ಉದ್ದೇಶ ಸರಿಯಿದೆ:
ಮೆರವಣಿಗೆ ನಡೆಸಿ, ಊಟ ಕೊಟ್ಟರೆ ಜಯಂತಿ ಮುಗೀತು!
ಮೆರವಣಿಗೆ ನಡೆಸಿ ಊಟ ಕೊಟ್ಟರೆ ಮುಗೀತು ಮಹಾತ್ಮರ ಜಯಂತಿಗಳ ಆಚರಣೆ ಎಂದು ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಹೇಳಿದರು. ತಾಲೂಕಿನ ಬೆಟ್ಟದಮಾದಹಳ್ಳಿ ಗ್ರಾಮದ ಬಿ.ಸಿ.ಮಹದೇವಸ್ವಾಮಿ ಅವರ ತೋಟದ ಮನೆಯಲ್ಲಿ ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘ, ಚಾಮರಾಜನಗರ ಮಹಾ ಮನೆ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ಬಸವೇಶ್ವರ ಪತ್ತಿನ ಸಹಕಾರ ಸಂಘ ಹಾಗೂ ಸಂಗಮ ಗೃಹ ನಿರ್ಮಾಣ ಸಂಘದ ಸಹಯೋಗದಲ್ಲಿ ಶರಣ ಚಿಂತನ ಊರಿಂದೂರಿಗೆ ಶರಣ ಸಂದೇಶ 19 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಿನ್ನದ ಕರಡಿಗ ಹಾಕಿದರೆ ದೊಡ್ಡ ಭಕ್ತ ನಾಗುವುದಿಲ್ಲ. ಬಸವಣ್ಣ ಹಾದೀಲಿ ನಡೆಯಬೇಕು. ಅದು ಸಾದ್ಯವಾಗುತ್ತಿಲ್ಲ. ಜೊತೆಗೆ ಜಯಂತಿಗಳು ಅದ್ಧೂರಿಯಾಗಿ ಆಚರಣೆ ಆಗಲಿ ಆದರೆ ಸಮಾಜ ಸುಧಾರಕರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶರಣ ಸಂದೇಶ ಉದ್ಘಾಟಿಸಿದ ಗುಂಡ್ಲುಪೇಟೆ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಶ್ ಕೊತ್ತಲವಾಡಿ, ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ಉಪಾಧ್ಯಕ್ಷ ಗಂಗಾಧರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಎಸ್.ಪ್ರಸಾದ್, ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಸದಸ್ಯ ಎನ್ ರೀಚ್ ಮಹದೇವಸ್ವಾಮಿ, ಗ್ರಾಮದ ಯುವ ಮುಖಂಡ ಸತೀಶ್, ಪಟೇಲ್ ರಾಜಪ್ಪ ಮಾತನಾಡಿದರು.