ವಚನಾನಂದ ಶ್ರೀಗಳಿಂದ ಗದಗನಲ್ಲಿ ಮನೆ ಮನೆಗೆ ತೆರಳಿ ಜನ ಜಾಗೃತಿ

KannadaprabhaNewsNetwork |  
Published : Sep 22, 2025, 01:01 AM IST
ಶ್ರೀಗಳು ಗದಗ ನಗರದಲ್ಲಿ ಚಾಲನೆ ಮನೆ ಮನೆಗೆ ಭಿತ್ತಿ ಚಿತ್ರಕ್ಕೆ ಚಾಲನೆ ನೀಡಿದರು.  | Kannada Prabha

ಸಾರಾಂಶ

ಪಂಚಮಸಾಲಿ ಹರಿಹರ ಪೀಠದ ವಚನಾನಂದ ಶ್ರೀಗಳು ಭಾನುವಾರ ಗದಗ ನಗರದ ಒಕ್ಕಲಗೇರಿ ಓಣಿಯಲ್ಲಿ ಸಮಾಜದ ಮನೆ ಮನೆಗೆ ತೆರಳಿ ಜಾತಿ ಗಣತಿಯಲ್ಲಿ ಏನು ನಮೂದಿಸಬೇಕು ಎನ್ನುವ ಕುರಿತು ಜಾಗೃತಿ ಮೂಡಿಸಿ ಕರಪತ್ರಗಳನ್ನು ನೀಡಿದರು.

ಗದಗ: ಪಂಚಮಸಾಲಿ ಹರಿಹರ ಪೀಠದ ವಚನಾನಂದ ಶ್ರೀಗಳು ಭಾನುವಾರ ಗದಗ ನಗರದ ಒಕ್ಕಲಗೇರಿ ಓಣಿಯಲ್ಲಿ ಸಮಾಜದ ಮನೆ ಮನೆಗೆ ತೆರಳಿ ಜಾತಿ ಗಣತಿಯಲ್ಲಿ ಏನು ನಮೂದಿಸಬೇಕು ಎನ್ನುವ ಕುರಿತು ಜಾಗೃತಿ ಮೂಡಿಸಿ ಕರಪತ್ರಗಳನ್ನು ನೀಡಿದರು.

ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಕರಿಬಿಷ್ಟಿ ಅವರ ಮನೆಯಿಂದ ಪ್ರಾರಂಭವಾದ ಕಾರ್ಯವು ಕೊಟ್ರಪ್ಪ ಕಮತರ, ಪಕ್ಕಣ್ಣ ತುಪ್ಪದ, ಮಲ್ಲಿಕಾರ್ಜುನ ಹೊಂಬಳ ಸೇರಿದಂತೆ ಅನೇಕ ಸಮಾಜದ ಮುಖಂಡರ ಮನೆ ಮನೆಗೆ ತೆರಳಿ ಭಿತ್ತಿ ಚಿತ್ರ ಹಚ್ಚುವ ಮೂಲಕ ಜನಜಾಗೃತಿ ಅಭಿಯಾನ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ, ಶೈಕ್ಷಣಿಕ ವರದಿ ಮಾಡುತ್ತಿದೆ. ಸಮೀಕ್ಷೆ ಮಾಡಲು ಮನೆಗೆ ಬಂದಾಗ ಭಕ್ತರು ಧರ್ಮದ ಕಾಲಂ ನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸಬೇಕು ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರೊಟ್ಟಿಗೆ ಭಕ್ತರ ಮನೆ ಮನೆಗೆ ತೆರಳಿ ಭಿತ್ತಿ ಚಿತ್ರಗಳನ್ನು ಅಂಟಿಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯದ 16 ಜಿಲ್ಲೆಯ ಪ್ರವಾಸ ಮಾಡಿ ಭಕ್ತರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಅದರ ಆಧಾರದಲ್ಲಿ ಈ ನಿರ್ಧಾರವನ್ನು ಭಕ್ತರಿಗೆ ತಿಳಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸೋಮನಗೌಡ ಮಾಲೀಪಾಟೀಲ, ಈರಣ್ಣ ಕರಿಬಿಷ್ಠಿ, ಎಫ್.ವಿ. ಮರಿಗೌಡ್ರ, ಬಸನಗೌಡ ತೊಂಡಿಹಾಳ, ಮಂಜುನಾಥ ಮಾಗಡಿ, ಬಸವರಾಜ ತುಳಿ, ಶೇಖಣ್ಣ ಕನ್ಯಾಳ, ಬಸವರಾಜ ಕರಮುಡಿ, ನಿಂಗಣ್ಣ ನಾಗರಾಳ, ಬಸವರಾಜ ಕುಂದಗೋಳ, ಎಸ್.ವಿ. ಪಲ್ಲೇದ, ಶಿವು ಕತ್ತಿ, ಈಶಣ್ಣ ಹುಣಸಿಕಟ್ಟಿ, ವಿರುಪಾಕ್ಷಗೌಡ ದೇಸಾಯಿ, ಈರಣ್ಣ ಬಾಳಿಕಾಯಿ, ರವಿ ಪಾಟೀಲ, ಈರಣ್ಣ ಕಟಗಿ, ಮಲ್ಲಿಕಾರ್ಜುನ ಹೊಂಬಳ, ಶಂಕರ ಕರಿಬಿಷ್ಟಿ, ಸಿದ್ದು ಉಮಚಗಿ, ಅಶೋಕ ಬ್ಯಾಹಟ್ಟಿ ಮುಂತಾದವರು ಹಾಜರಿದ್ದರು.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ