ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ಕಾಯಕ ಶರಣರ ಜಯಂತಿ’ಯನ್ನು ಉದ್ಘಾಟಿಸಿ ಮಾತನಾಡಿದರು.
ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಚಳವಳಿ, ಹೋರಾಟ ಹತ್ತು ಹಲವು ಬದಲಾವಣೆಗಳಿಗೆ ಕಾರಣವಾಯಿತು. ಸಮಸಮಾಜದ ಆಶಯವನ್ನು ಹೊಂದಿದ್ದ ಬಸವಣ್ಣನವರು ನಿರ್ಲಕ್ಷಿತ ಸಮುದಾಯಗಳನ್ನು ಅಪ್ಪಿಕೊಂಡರು ಮತ್ತು ಒಪ್ಪಿಕೊಂಡರು. ಸಾಮಾಜಿಕ ನ್ಯಾಯದ ಪರವಾಗಿದ್ದ ಬಸವಣ್ಣನವರು ಶಿವಶರಣರೆಲ್ಲರಿಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮುಕ್ತ ಅವಕಾಶ ನೀಡಿದ್ದರು ಎಂದರು.
ಅಂಬೇಡ್ಕರ್ ಮೇಲೆ ಪ್ರಭಾವ
ಪೆರೇಸಂದ್ರದ ಶಿಕ್ಷಕರು ಹಾಗೂ ವಿಚಾರವಂತರಾದ ಪಿ.ಎಸ್. ಸರ್ದಾರ್ ಚಾಂದ್ ಪಾಷಾ ಮಾತನಾಡಿ, ಕಾಯಕ ಶರಣರ ಬಗ್ಗೆ ಉಪನ್ಯಾಸ ನೀಡಿ, ಎರಡು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಮಹತ್ವದ್ದಾಗಿದೆ. ಸಾಮಾಜಿಕ ಮತ್ತು ಧಾರ್ಮಿಕ ದೃಷ್ಟಿಯಿಂದ 12 ನೇ ಶತಮಾನ ಪರಿವರ್ತನೆಯ ಕಾಲ. ಜಾತಿಗಳನ್ನು ನಿರಾಕರಿಸಿದ ಸಂದರ್ಭವೂ ಹೌದು ಎಂದರು.
ಕಾರ್ಯಕ್ರಮದಲ್ಲಿ ಕಾಯಕ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿದ್ದ ಅಧಿಕಾರಿಗಳು ಮತ್ತು ದಲಿತ ಮುಖಂಡರು ಕಾಯಕ ಶರಣರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ಕಾಯಕ ಶರಣರ ಜಯಂತಿ ಅಂಗವಾಗಿ ನಗರಸಭೆಯ ಪೌರಕಾರ್ಮಿಕರಾದ ವಿ.ಮುನಿರಾಜು ಮತ್ತು ಸತ್ಯಮ್ಮ ರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಗಾಯನ ಕಲಾವಿದರಾದ ಬಿ.ವಿ.ಆನಂದ್, ಸುದಾ ವೆಂಕಟೇಶ್ ಮತ್ತು ಚಿ.ಮು.ರಮೇಶ್ ವಚನಸಾಹಿತ್ಯ ಗೀತ ಗಾಯನ ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಜಿಲ್ಲಾಡಳಿತ ಭವನದ ಸಿಬ್ಬಂದಿ ಹಾಗೂ ದಲಿತ ಸಂಘಟನೆಗಳ ಮುಖಂಡರಾದ ಸು.ದಾ.ವೆಂಕಟೇಶ್, ಬಾಗ್ಯಮ್ಮ, ಶ್ರೀನಿವಾಸಯ್ಯ, ಕೇಶವ,ತಿಪ್ಪೇನಹಳ್ಳಿ ನಾರಾಯಣ್, ಗುಡಿಬಂಡೆ ಮಂಜು, ಎನ್. ಶ್ರೀನಿವಾಸ್, ನಾರಾಯಣಸ್ವಾಮಿ, ವೆಂಕಟ್ ಮತ್ತಿತರು ಇದ್ದರು.