ಕಂಪ್ಲಿ: ಪಟ್ಟಣದ ಎಸ್ಎನ್ ಪೇಟೆಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಅಂಗವಾಗಿ ವಿಶೇಷ ಪೂಜೆಗಳು ಜರುಗಿದವು.
ದೇವಸ್ಥಾನದಲ್ಲಿ ಪಂಚಾಮೃತ ಸಹಿತ ಅಷ್ಟೋತ್ತರ ಸಹಸ್ರನಾಮ, ಹೋಮ ಹವನ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ, ಸ್ವಾಮಿಗೆ ಹಲವು ಫಲಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಉತ್ತರ ದಿಕ್ಕಿನ ಬಾಗಿಲಿನಿಂದ ಶ್ರೀ ವೆಂಕಟೇಶ್ವರನ ದರ್ಶನವನ್ನು ಭಕ್ತರು ಪಡೆದರು.ಸೇವಾ ಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ, ರೂಪಾ, ಗುರುಪ್ರಸಾದ, ಕವಿತಾ ಶಶಿಧರ, ಭಗವತಿ, ಅಶ್ವತ್ಥ ನಾರಾಯಣ, ಸಂಪತ್ ಹಾಗೂ ಸರ್ವ ಸಮುದಾಯಗಳ ಸದ್ಭಕ್ತರು ಪಾಲ್ಗೊಂಡಿದ್ದರು.
ಅಮೃತ ಶಿಲಾ ಶ್ರೀರಾಮಚಂದ್ರ ಸ್ವಾಮಿಯ ಗ್ರಾಮಪ್ರದಕ್ಷಿಣೆ ಕಾರ್ಯಕ್ರಮ: ವೈಕುಂಠ ಏಕಾದಶಿಯ ಅಂಗವಾಗಿ ಇಲ್ಲಿನ ಗಂಗಾವತಿ ರಸ್ತೆಯಲ್ಲಿರುವ ಅಮೃತ ಶಿಲಾ ಶ್ರೀರಾಮಚಂದ್ರ ಸ್ವಾಮಿಯ ಗ್ರಾಮಪ್ರದಕ್ಷಿಣೆ (ಗಂಗೆಸ್ಥಳ) ಕಾರ್ಯಕ್ರಮ ಶನಿವಾರ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಜರುಗಿತು. ಇದರ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ರೀತಿಯಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಪ್ರಮುಖರಾದ ಡಿ. ಗುರುರಾಜ ಆಚಾರ್, ಡಿ. ವೇಣು, ಕೆ. ಅನಂತಪದ್ಮನಾಭ ಗೌಡ್ರು, ಗೋಪಾಲಕೃಷ್ಣ ವಿಷ್ಣು ಕುಲಕರ್ಣಿ, ವಸುಧೇಂದ್ರ, ಡಿ. ವಿಜಯಲಕ್ಷ್ಮೀ, ಡಿ. ಗೀತಾ ಹಾಗೂ ಗುರುರಾಜ ಸೇವಾ ಮಂಡಳಿ, ಭಜನಾ ಮಂಡಳಿಯವರಿದ್ದರು.