ಉಪ್ಪಿನಂಗಡಿ ವಳಾಲು ಟೋಲ್ ಪ್ಲಾಝಾ ಕಾರ್ಯಾರಂಭ

KannadaprabhaNewsNetwork |  
Published : Nov 27, 2026, 02:45 AM IST
ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ ಸ್ಥಾಪಿಸಲ್ಪಟ್ಟ  ಟೋಲ್ ಪ್ಲಾಝಾ ಗುರುವಾರದಂದು ಕಾರ್ಯಾರಂಭಗೊAಡಿದ್ದು, ಶುಲ್ಕ ಪಾವತಿಯೊಂದಿಗೆ ಸಂಚಾರದ ಯೋಗಭಾಗ್ಯ  | Kannada Prabha

ಸಾರಾಂಶ

ರಾಷ್ಟ್ರೀಯಯ ಹೆದ್ದಾರಿ ೭೫ರಲ್ಲಿ ಬಿ.ಸಿ..ರೋಡ್-ಅಡ್ಡಹೊಳೆ ತನಕದ ಚತುಷ್ಪಥ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ ಸ್ಥಾಪಿಸಲ್ಪಟ್ಟ ಟೋಲ್ ಪ್ಲಾಝಾ ಗುರುವಾರದಂದು ಕಾರ್ಯಾರಂಭಗೊಂಡಿದ್ದು, ಶುಲ್ಕ ಪಾವತಿಯೊಂದಿಗೆ ಸಂಚಾರದ ಯೋಗಭಾಗ್ಯ ಲಭಿಸಿದಂತಾಗಿದೆ.

ಉಪ್ಪಿನಂಗಡಿ: ರಾಷ್ಟ್ರೀಯಯ ಹೆದ್ದಾರಿ ೭೫ರಲ್ಲಿ ಬಿ.ಸಿ..ರೋಡ್-ಅಡ್ಡಹೊಳೆ ತನಕದ ಚತುಷ್ಪಥ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ ಸ್ಥಾಪಿಸಲ್ಪಟ್ಟ ಟೋಲ್ ಪ್ಲಾಝಾ ಗುರುವಾರದಂದು ಕಾರ್ಯಾರಂಭಗೊಂಡಿದ್ದು, ಶುಲ್ಕ ಪಾವತಿಯೊಂದಿಗೆ ಸಂಚಾರದ ಯೋಗಭಾಗ್ಯ ಲಭಿಸಿದಂತಾಗಿದೆ. ಬಿ.ಸಿ. ರೋಡ್‌ನಿಂದ ಅಡ್ಡಹೊಳೆ ತನಕ ಚತುಷ್ಪಥ ರಸ್ತೆ ಕಾಮಗಾರಿ ಶೇಕಡಾ ೯೫ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಉಪ್ಪಿನಂಗಡಿಯಿಂದ ಸುಮಾರು ೮ ಕಿ.ಮೀ. ದೂರದ ಬಜತ್ತೂರು ಗ್ರಾಮದ ವಳಾಲು-ನೀರಕಟ್ಟೆ ಮಧ್ಯೆ ಟೋಲ್‌ಗೇಟ್ ನಿರ್ಮಾಣಗೊಂಡಿದೆ. ಬಿ.ಸಿ.ರೋಡು-ಪೆರಿಯಶಾಂತಿ ಮಧ್ಯೆ ೪೬ ಕಿ.ಮೀ. ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆ ಕೆಎನ್‌ಆರ್ ಕನ್‌ಸ್ಟ್ರಕ್ಸನ್ ಟೋಲ್ ಪ್ಲಾಝಾ ಕಾಮಗಾರಿಯನ್ನು ನಿರ್ವಹಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಈಗಾಗಲೇ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಿದೆ. ಚತುಷ್ಪಥ ಹೆದ್ದಾರಿಯಲ್ಲಿ ಎರಡೂ ಕಡೆ ತಲಾ ನಾಲ್ಕು ಲೇನ್‌ಗಳು ಇರಲಿವೆ. ಒಂದೇ ಸಮಯಕ್ಕೆ ಎರಡು ಬದಿ ಒಟ್ಟು ೮ ಲೇನ್‌ಗಳಲ್ಲಿ ವಾಹನ ಸಾಗಲು ಅವಕಾಶ ಸಿಗಲಿದೆ. ದ್ವಿಚಕ್ರ ಹಾಗೂ ರಿಕ್ಷಾಗಳ ಸಂಚಾರಕ್ಕೆ ಎರಡೂ ಬದಿ ಪ್ರತ್ಯೇಕ ಲೇನ್‌ಗಳಿವೆ. ಶುಲ್ಕ ಸಂಗ್ರಹಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಮಂಗಳೂರಿನ ಕೋರಲ್ ಸಂಸ್ಥೆ ನಿರ್ವಹಣೆಯ ಗುತ್ತಿಗೆಯನ್ನು ಪಡೆದುಕೊಂಡಿದೆ. ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಬೆಂಗಳೂರು-ಮಂಗಳೂರು ಮಧ್ಯೆ ಬೆಂಗಳೂರು ನೆಲಮಂಗಲದಿಂದ ಸಕಲೇಶಪುರ ಮಧ್ಯೆ ೫ ಕಡೆ ಟೋಲ್ ಫ್ಲಾಝಾ ಇದೆ. ದ.ಕ. ಜಿಲ್ಲೆಯ ಗುಂಡ್ಯದಿಂದ ಮಂಗಳೂರು ಪಂಪ್‌ವೆಲ್ ಮಧ್ಯೆ ಬಿ.ಸಿ. ರೋಡು ಸಮೀಪ ಬ್ರಹ್ಮರಕೂಟ್ಲುನಲ್ಲಿ ಟೋಲ್ ಫ್ಲಾಝಾ ಇದ್ದು, ಇದು ರದ್ದುಗೊಳ್ಳುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದೆ. ಪ್ರಸ್ತುತ ವಳಾಲುನಲ್ಲಿ ಆರಂಭವಾಗಲಿರುವ ಟೋಲ್ ಫ್ಲಾಝಾ ಜಿಲ್ಲೆಯ ಭಾಗದಲ್ಲಿ ಈ ಹೆದ್ದಾರಿಯಲ್ಲಿನ ೨ನೇಯದ್ದಾಗಿರುತ್ತದೆ. ಟೋಲ್ ಸಂಗ್ರಹಣಾ ಕೇಂದ್ರದ ಒಟ್ಟು ೮ ಲೇನ್‌ಗಳ ಪೈಕಿ ೬ ಲೈನ್‌ಗಳು (೩+೩) ಡೆಡಿಕೇಟೆಡ್ ಲೈನ್ ಆಗಿದ್ದು, ಇದರಲ್ಲಿ ಫಾಸ್ಟ್ ಟೇಗ್ ಇರುವವರು ಮಾತ್ರ ಹೋಗುವಂತದ್ದು, ೨ ಲೈನ್‌ಗಳು ಕ್ಯಾಸ್ ಪ್ಲಸ್ ಫಾಸ್ಟ್ ಟ್ಯಾಗ್‌ಗಳು. ಇವುಗಳಲ್ಲಿ ನಗದು ವ್ಯವಸ್ಥೆ ಇರುವುದಿಲ್ಲ, ಫೋನ್ ಪೇ, ಗೂಗಲ್ ಪೇ ಅಥವಾ ಸ್ಕ್ಯಾನಿಂಗ್ ಮಾತ್ರ ಅವಕಾಶ ಇರುತ್ತದೆ. ದ.ಕ. ಜಿಲ್ಲೆಯ ಒಳಗಿನ ನೋಂದಣಿಯ ವಾಹನಗಳಿಗೆ ಶೇಕಡಾ ೫೦ರಷ್ಟು ವಿನಾಯಿತಿ ದರ ನಿಗದಿ ಪಡಿಸಲಾಗಿದೆ. ಸುಂಕ ವಸೂಲಾತಿ ಕೇಂದ್ರದಿಂದ ೨೦ ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವ ನಿವಾಸಿಗಳಿಗೆ ೩೬೦ ರೂಪಾಯಿ ಮಾಸಿಕ ಪಾಸ್ ವ್ಯವಸ್ಥೆ ಇರುತ್ತದೆ.-ಯಜ್ಞೇಶ್, ಆಡಳಿತ ಪಾಲುದಾರ, ಕೋರಲ್, ಮಂಗಳೂರು.

ಟೋಲ್ ಸಂಗ್ರಹಣಾ ಕೇಂದ್ರವನ್ನು ನಿರ್ಮಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. ಪ್ರಸಕ್ತ ಟೋಲ್ ಕೇಂದ್ರ ವಿದ್ಯುತ್ ಚಾಲಿತವಾಗಿ ಕಾರ್ಯಾರಂಭಗೊಂಡಿದ್ದು, ಈ ಪರಿಸರದಲ್ಲಿನ ಸೂರ್ಯನ ಶಾಖವನ್ನು ಸದ್ಭಳಕೆ ಮಾಡಿಕೊಳ್ಳುವ ಉದ್ದೇಶದಿಂದ ಸೋಲಾರ್ ವಿದ್ಯುತ್ ಘಟಕವನ್ನೂ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸೌರಶಕ್ತಿಯ ಬಳಕೆಗೂ ಅವಕಾಶವಿದೆ ಎಂದು ಕೆ ಎನ್ ಆರ್ ಸಂಸ್ಥೆಯ ಇಂಜಿನಿಯರ್ ರಘುನಾಥ್ ರೆಡ್ಡಿ ಪ್ರತಿಕ್ರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಗುರಿ
ರೈತರಿಗೆ ಪ್ರತಿ ಟನ್‌ಗೆ ₹3,825 ರಂತೆ ಬಿಲ್ ಪಾವತಿ