ದೇಶದ ಸಮಗ್ರತೆಗೆ ವಲ್ಲಭಭಾಯ್‌ ಪಟೇಲರ ಕೊಡುಗೆ ಅನನ್ಯ

KannadaprabhaNewsNetwork |  
Published : Oct 31, 2024, 12:57 AM IST
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯ ಅಂಗವಾಗಿ ಬುಧವಾರ ಹುಬ್ಬಳ್ಳಿಯಲ್ಲಿ ನಡೆದ ಏಕತಾ ಓಟದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಪಾಲ್ಗೊಂಡರು. | Kannada Prabha

ಸಾರಾಂಶ

ದೇಶದ ಸಮಗ್ರತೆಗೆ ಸರ್ದಾರ್ ವಲ್ಲಭಭಾಯಿ ಪಟೇಲರ ಕೊಡುಗೆ ಅನನ್ಯವಾಗಿದೆ. ಇಂದು ಭಾರತವನ್ನು ಈ ಸ್ಥಿತಿಯಲ್ಲಿ ನೋಡಲು ಸಾಧ್ಯವಾಗಿದ್ದರೆ ಅದಕ್ಕೆ ಉಕ್ಕಿನ ಮನುಷ್ಯ ಪಟೇಲರ ಧೈರ್ಯ, ಸಾಹಸ, ಪರಿಶ್ರಮ ಮತ್ತು ಕಠಿಣ ನಿರ್ಧಾರಗಳು ಕಾರಣ‍ವಾಗಿವೆ.

ಹುಬ್ಬಳ್ಳಿ:

ಸರ್ದಾರ್ ವಲ್ಲಭಭಾಯ್‌ ಪಟೇಲ್ ಅವರ ಜಯಂತಿ ಅಂಗವಾಗಿ ಬುಧವಾರ ಬಿಜೆಪಿ ಹು-ಧಾ ಮಹಾನಗರ ವತಿಯಿಂದ ಕೆಎಂಸಿಆರ್‌ಐ ಆಸ್ಪತ್ರೆ ಮುಂಭಾಗದ ಮಹಾತ್ಮ ಗಾಂಧಿ ಪ್ರತಿಮೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪುಷ್ಪಾರ್ಪಣೆ ಮಾಡುವ ಮೂಲಕ ಏಕತಾ ಓಟಕ್ಕೆ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಸಚಿವರು, ದೇಶದ ಸಮಗ್ರತೆಗೆ ಸರ್ದಾರ್ ವಲ್ಲಭಭಾಯಿ ಪಟೇಲರ ಕೊಡುಗೆ ಅನನ್ಯವಾಗಿದೆ. ಇಂದು ಭಾರತವನ್ನು ಈ ಸ್ಥಿತಿಯಲ್ಲಿ ನೋಡಲು ಸಾಧ್ಯವಾಗಿದ್ದರೆ ಅದಕ್ಕೆ ಉಕ್ಕಿನ ಮನುಷ್ಯ ಪಟೇಲರ ಧೈರ್ಯ, ಸಾಹಸ, ಪರಿಶ್ರಮ ಮತ್ತು ಕಠಿಣ ನಿರ್ಧಾರಗಳು ಕಾರಣ‍ವಾಗಿವೆ ಎಂದರು.

ಅವರ ಕಾರ್ಯಗಳಿಗೆ ಗೌರವ ಅರ್ಪಿಸುವ ಉದ್ದೇಶದಿಂದ ಗುಜರಾತದ ಕವಾಡಿಯಾದಲ್ಲಿ ಜಗತ್ತೀನಲ್ಲಿಯೇ ಅತಿ ಎತ್ತರವಾದ ಸರ್ದಾರ್ ವಲ್ಲಭಭಾಯ್‌ ಪಟೇಲ ಪ್ರತಿಮೆ ಸ್ಥಾಪಿಸಲಾಗಿದೆ ಎಂದು ಜೋಶಿ, ಇಂದು ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಶ್ಚಂದ್ರ ಬೋಸ್, ಭಗತ್‌ಸಿಂಗ್‌, ರಾಜಗುರು, ಲಾಲ್‌ ಬಹದ್ದೂರ್‌ ಶಾಸ್ತ್ರೀ ಅವರು ನೀಡಿದ ಕೊಡುಗೆಯನ್ನು ಸದಾಕಾಲ ಸ್ಮರಿಸಲು ಬಿಜೆಪಿ ನಿರಂತರವಾಗಿ ಇಂತಹ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಎಂದರು.

ಕೆಎಂಸಿಆರ್‌ಐನಿಂರ ಆರಂಭವಾದ ಏಕತಾ ಓಟವು ಹೊಸೂರು ಕಾಸ್‌ ಮೂಲಕ ರಾಣಿ ಚೆನ್ನಮ್ಮ ವೃತ್ತದ ವರೆಗೆ ತೆರಳಿ ಸಮಾರೋಪಗೊಂಡಿತು.

ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಜಿಲ್ಲಾ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ವಿಜಯಾನಂದ ಶೆಟ್ಟಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ, ಪಾಲಿಕೆ ಮಾಜಿ ಮೇಯರ್‌ ವೀಣಾ ಭರದ್ವಾಡ, ವೀರಣ್ಣ ಸವಡಿ, ಸದಸ್ಯರಾದ ಸಂತೋಷ ಚವ್ಹಾಣ, ರೂಪಾ ಶೆಟ್ಟಿ, ಮುಖಂಡರಾದ ಡಾ. ಕ್ರಾಂತಿಕಿರಣ, ಮಹೇಂದ್ರ ಕೌತಾಳ, ರವಿ ನಾಯಕ ಸೇರಿದಂತೆ ಹಲವರಿದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು