ಜೀವನ ಮರು ರೂಪಿಸಿಕೊಳ್ಳಲು ವಾಲ್ಮೀಕಿ ಜೀವನ ಪ್ರೇರಣೆ

KannadaprabhaNewsNetwork |  
Published : Oct 10, 2025, 01:01 AM IST
ಪೊಟೋ ಪೈಲ್ ನೇಮ್ ಎಚ್೯-ಎಸ್‌ಜಿಎನ್ ಜಿ೩  ಕುನ್ನೂರು ಗ್ರಾಮದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಹೆಸ್ಕಾಂ ಅಧ್ಯಕ್ಷ ಖಾದ್ರಿ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮಹರ್ಷಿ ವಾಲ್ಮೀಕಿ ಅವರ ಉದಾತ್ತ ಜ್ಞಾನ, ತಪಸ್ಸು ಮತ್ತು ಕಾವ್ಯದ ಶಕ್ತಿ ಅವರನ್ನು ಮೊದಲ ಕಾವ್ಯ ಕರ್ತರನ್ನಾಗಿ ಮಾಡುವ ಮೂಲಕ ಆದಿಕವಿ ಎಂಬ ಬಿರುದನ್ನು ನೀಡಿತು. ಅವರು ಬರೆದ ರಾಮಾಯಣ ಎಂಬ ಮಹಾಕಾವ್ಯ ಜೀವಂತ ರೂಪಕ್ಕೆ ಸಾಕ್ಷಿಯಾಯಿತು ಎಂದು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಹೇಳಿದರು.

ಶಿಗ್ಗಾಂವಿ: ಮಹರ್ಷಿ ವಾಲ್ಮೀಕಿ ಅವರ ಉದಾತ್ತ ಜ್ಞಾನ, ತಪಸ್ಸು ಮತ್ತು ಕಾವ್ಯದ ಶಕ್ತಿ ಅವರನ್ನು ಮೊದಲ ಕಾವ್ಯ ಕರ್ತರನ್ನಾಗಿ ಮಾಡುವ ಮೂಲಕ ಆದಿಕವಿ ಎಂಬ ಬಿರುದನ್ನು ನೀಡಿತು. ಅವರು ಬರೆದ ರಾಮಾಯಣ ಎಂಬ ಮಹಾಕಾವ್ಯ ಜೀವಂತ ರೂಪಕ್ಕೆ ಸಾಕ್ಷಿಯಾಯಿತು ಎಂದು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಹೇಳಿದರು.

ತಾಲೂಕಿನ ಕುನ್ನೂರು ಗ್ರಾಮದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಾಲ್ಮೀಕಿಯವರ ಜೀವನವನ್ನು ಗಮನಿಸಿದರೆ ಅದು ಮಾನವನ ಪರಿವರ್ತನೆಯ ಅಮೋಘ ಮಾದರಿಯಾಗಿ, ನಮ್ಮೆಲ್ಲರ ಜೀವನವನ್ನು ಮರು ರೂಪಿಸಿಕೊಳ್ಳಲು ಪ್ರೇರಣೆಯಾಗಿದೆ ಎಂದರು.ಈ ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡುವ ಮೂಲಕ ಅವರ ಬದುಕನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕು. ತಾಲೂಕಿನ ವಾಲ್ಮೀಕಿ ಸಮಾಜ ನನ್ನನ್ನುಅತ್ಯಂತ ಪ್ರೀತಿಯಿಂದ ಕಾಣುತ್ತದೆ. ಅವರ ಪ್ರೀತಿಗೆ ಅಭಾರಿಯಾಗಿದ್ದೇನೆ ಎಂದು ಹೇಳಿದರು. ಗ್ರಾಮದ ಹಿರಿಯರಾದ ಯಲ್ಲಪ್ಪ ನವಲೂರ, ಕಲ್ಲಪ್ಪ ಅಗಸಿಮನಿ, ಕುಬೇರ ಓಲೆಕಾರ, ಅಣ್ಣಪ್ಪ ನಡಟ್ಟಿ ಹುಸೇನ್ ಜಿಗಳೂರ, ಚಂದು ನಾಯಕ, ಅಶೋಕ ಮರಸಿದ್ದಣ್ಣನವರ, ನಾಗರಾಜ ನಡಿಗೆರಿ, ಆನಂದ ಲಮಾಣಿ, ಯಲ್ಲಪ್ಪ ಶ್ಯಾಡಂಬಿ, ಮರತಿಮ್ಮಪ್ಪ ಬೀರೇಶಕುಮಾರ ಲಮಾಣಿ, ಸಹದೇವಪ್ಪ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!