ನವಲಗುಂದ:
ಪಟ್ಟಣದ ಎ.ಬಿ. ಕೊಪ್ಪದ ಅವರ ಗುರು ಕಾರುಣ್ಯದಲ್ಲಿ ಮಂಗಳವಾರ ಶರಣ ಸಾಹಿತ್ಯ ಪರಿಷತ್ ಹಾಗೂ ಜಾನಪದ ಪರಿಷತ್ ಆಶ್ರಯದಲ್ಲಿ ಆಯೋಜಿಸಿದ್ದ ಮನೆ ಮನೆಯಲ್ಲಿ ಶ್ರಾವಣ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ರಾಮು ಮೂಲಗಿ ಅವರು ವಿವಿಧ ಹಬ್ಬಗಳ ವಿಶೇಷತೆ, ಮಹತ್ವದ ಬಗ್ಗೆ ಜಾನಪದ ಹಾಡುಗಳ ಮೂಲಕ ತಿಳಿಸಿದರು.ಅಣ್ಣಪ್ಪ ಬಾಗಿ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಎ.ಬಿ. ಕೊಪ್ಪದ ಹಾಗೂ ಧಾರವಾಡ ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಪ್ರಮಿಳಾ ಜಕ್ಕಣ್ಣವರ, ಹಿರಿಯ ಕಲಾವಿದ ಸಿ.ಬಿ. ಹೂಗಾರ, ಎಸ್.ಎಫ್. ನೀರಲಗಿ, ಪಿ.ಕೆ. ಹಿರೇಗೌಡ್ರ, ಶ್ರೀನಿವಾಸ ಅಮಾತೆಣ್ಣವರ, ಸಿದ್ಧಲಿಂಗೇಶ ಹಂಡಗಿ, ಪ್ರಕಾಶ ಹೂಗಾರ, ಗಣೇಶ ಹೂಳೆಯಣ್ಣವರ ಮಾತನಾಡಿದರು.
ವಸಂತ ಚಾಕಲಬ್ಬಿ, ಮಲ್ಲಿಕಾರ್ಜುನ ವಗ್ಗರ, ಬಸವರಾಜ ಯಲಿಗಾರ, ಡಿ.ಎಚ್. ಮಳಲಿ, ಪಿ.ಸಿ. ಸೂರಪ್ಪನವರ, ವೈ.ಕೆ. ಹಾಲವರ ಉಪಸ್ಥಿತರಿದ್ದರು. ಎನ್.ಎಚ್. ತಾಳಿಕೋಟಿಮಠ ವಚನ ಗಾಯನ ಮಾಡಿದರು. ಸಾತ್ವಿಕ ಕೊಪ್ಪದ ವಂದಿಸಿದರು. ಸಂಜೀವಗೌಡ, ಹಿರೇಗೌಡ್ರ ಕಾರ್ಯಕ್ರಮ ನಿರೂಪಿಸಿದರು.