ದೇಶಪ್ರೇಮದ ಕಿಚ್ಚಿಗೆ ಪ್ರೇರಣೆ ನೀಡಿದ ವಂದೇ ಮಾತರಂ: ಸಂಸದ ಬಿ.ವೈ. ರಾಘವೇಂದ್ರ

KannadaprabhaNewsNetwork |  
Published : Nov 08, 2025, 01:15 AM IST
ಪೊಟೋ: 07ಎಸ್‌ಎಂಜಿಕೆಪಿ06ಶಿವಮೊಗ್ಗ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯ ಮುಂಭಾಗದಲ್ಲಿ ಶೂಕ್ರವಾರ ನಡೆದ ವಂದೇ ಮಾತರಂ ಸಾಮೂಹಿಕ ಗೀತೆ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  | Kannada Prabha

ಸಾರಾಂಶ

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ದೇಶಪ್ರೇಮದ ಕಿಚ್ಚಿಗೆ ಪ್ರೇರಣೆ ನೀಡಿದ ಗೀತೆ ವಂದೇ ಮಾತರಂ ಗೀತೆಯಾಗಿದ್ದು, ಆ ಗೀತೆಗೆ 150 ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಂದಿನಿಂದ 1 ವರ್ಷ ಕಾಲ ದೇಶದೆಲ್ಲೆಡೆ ಸಂಭ್ರಮಾಚರಣೆ ನಡೆಯಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ದೇಶಪ್ರೇಮದ ಕಿಚ್ಚಿಗೆ ಪ್ರೇರಣೆ ನೀಡಿದ ಗೀತೆ ವಂದೇ ಮಾತರಂ ಗೀತೆಯಾಗಿದ್ದು, ಆ ಗೀತೆಗೆ 150 ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಂದಿನಿಂದ 1 ವರ್ಷ ಕಾಲ ದೇಶದೆಲ್ಲೆಡೆ ಸಂಭ್ರಮಾಚರಣೆ ನಡೆಯಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯ ಮುಂಭಾಗದಲ್ಲಿ ಶುಕ್ರವಾರ ನಡೆದ ವಂದೇ ಮಾತರಂ ಸಾಮೂಹಿಕ ಗೀತೆ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದ ಜನತೆಗೆ ಇದೊಂದು ಭಾವನಾತ್ಮಕ ಕಾರ್ಯಕ್ರಮವಾಗಿದ್ದು, ಸ್ವಾತಂತ್ರ್ಯದ ಕಿಚ್ಚಿಗೆ ಶಕ್ತಿ ತುಂಬಿದ ಈ ಗೀತೆ ಕೇವಲ ಗೀತೆ ಅಲ್ಲ, ದೇಶದ ಸಾಂಸ್ಕೃತಿಕ ಪರಂಪರೆಯ ರಾಯಭಾರಿಯಾಗಿ ಪ್ರಪಂಚಕ್ಕೆ ನಮ್ಮ ಇತಿಹಾಸ ತಲುಪಿಸಿದೆ ಎಂದರು.

ಹೆತ್ತ ತಾಯಿ ಬೇರೆ ಅಲ್ಲ, ಜನ್ಮ ಭೂಮಿ ಬೇರೆ ಅಲ್ಲ, ಎರಡೂ ಒಂದೇ. ನಮಗೆಲ್ಲರಿಗೂ ಜೀವನ ನಡೆಸುವ ಶಕ್ತಿಯನ್ನು ಈ ಭೂಮಿ ನೀಡಿದೆ. ಇಂತಹ ಸುಸಂದರ್ಭದಲ್ಲಿ ವಿಶ್ವದ ಅಪ್ರತಿಮ ನಾಯಕ ಮೋದಿ ಅವರು ಯೋಗಾಯೋಗವೆಂಬಂತೆ ದೇಶದ ಪ್ರಧಾನಿಯಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಕ್ಲಾಸ್ ರೂಂ ಇಲ್ಲದಿದ್ದರೂ ಪರವಾಗಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ರಕ್ತ ಹರಿಸಿ ಹುತಾತ್ಮರಾದವರ ಚರಿತ್ರೆಯೆ ಬಗ್ಗೆ ತಿಳಿಯುವ ಅವಶ್ಯಕತೆ ಇದೆ ಎಂದರು.

ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, 1875 ನ. 7 ರಂದು ಬಂಕಿಮಚಂದ್ರ ಚಟರ್ಜಿ ಅವರು ವಂದೇ ಮಾತರಂ ಗೀತೆ ರಚಿಸಿ ದೇಶವನ್ನು ಒಗ್ಗೂಡಿಸುವಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚುವಲ್ಲಿ ಅಮೂಲ್ಯ ಕೊಡುಗೆ ನೀಡಿದರು. 1857ರಲ್ಲಿ ಮೊಟ್ಟ ಮೊದಲ ಸ್ವಾತಂತ್ರ್ಯ ಹೋರಾಟ ಸಿಪಾಯಿ ದಂಗೆ ನಡೆದಾಗ ವೀರ ಸಾವರ್ಕರ್ ಅವರು ಇದು ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದರು.

ಜನರ ಮನಸ್ಸನ್ನು ಜೋಡಿಸುವ ಕೆಲಸವನ್ನು ವಂದೇ ಮಾತರಂ ಮಾಡಿದೆ. ವರ್ಷಪೂರ್ತಿ ಈ ಗೀತ ಗಾಯನ ಸಂಭ್ರಮ ನಡೆಯಲಿದೆ. ಕೆಲವರಿಗೆ ಈ ಗೀತೆ ಹಾಡಿದರೆ ದೇಶದ ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಎಂಬ ಭಾವನೆ ಇದೆ. ವಂದೇ ಮಾತರಂ ರಾಷ್ಟ್ರಗೀತೆಯಾಗಿದ್ದು, ಈ ದೇಶದ ಎಲ್ಲಾ ಸಂಗತಿಗಳು ಉದಾತ್ತ ಧ್ಯೇಯಗಳು ಈ ಹಾಡಿನಲ್ಲಿ ಅಡಕವಾಗಿವೆ ಎಂದರು.

ಈ ಸಂದರ್ಭದಲ್ಲಿ ಸಾಮೂಹಿಕವಾಗಿ ನೂರಾರು ಕಾರ್ಯಕರ್ತರು ವಂದೇ ಮಾತರಂ ಗೀತೆ ಹಾಡಿದರು.

ಬಿಜೆಪಿ ಪ್ರಮುಖರಾದ ಜ್ಯೋತಿಪ್ರಕಾಶ್, ಟಿ.ಡಿ. ಮೇಘರಾಜ್, ಮೋಹನ್ ರೆಡ್ಡಿ, ಜ್ಞಾನೇಶ್ವರ್, ಎನ್.ಜೆ. ನಾಗರಾಜ್, ಮಾಲತೇಶ್, ಹರಿಕೃಷ್ಣ, ಸುರೇಶ್, ಶಿವರಾಜ್, ವಿನ್ಸೆಂಟ್ ರೋಡ್ರಿಗಸ್, ರಾಮಣ್ಣ, ದೇವೇಂದ್ರಪ್ಪ, ರಶ್ಮಿ ಶ್ರೀನಿವಾಸ್, ಸುನಿತಾ ಅಣ್ಣಪ್ಪ, ಸಂತೋಷ್ ಬಳ್ಳೆಕೆರೆ, ವಿಶ್ವನಾಥ್, ಮಂಗಳಾ ನಾಗೇಂದ್ರ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!