ಶ್ರೀಕೃಷ್ಣ ಗ್ರೂಪ್‌ನಿಂದ ಸಾಮಾಜಿಕ- ಸಾಂಸ್ಕೃತಿಕ ಕಾರ್ಯಕ್ರಮ

KannadaprabhaNewsNetwork | Published : Jan 20, 2024 2:01 AM

ಸಾರಾಂಶ

ಚಿತ್ರ ನಟ ರೂಪೇಶ್ ಶೆಟ್ಟಿ, ನಟಿಯರಾದ ಸುಕೃತ ವಾಗ್ಲೆ, ಚಿರಶ್ರೀ ಅಂಚನ್, ರಂಜಿತಾ ಶೇಟ್, ಹಾಸ್ಯ ನಟರಾದ ಭೋಜರಾಜ್ ವಾಮಂಜೂರು ಮತ್ತು ಸಾಯಿ ಕೃಷ್ಣ, ಕಿರುತೆರೆ ನಟ ಕಾರ್ತಿಕ್ ಸಾಮಗ ಮುಂತಾದವರು ಭಾಗವಹಿಸಿದ್ದರು.

(ಗಮನಿಸಿ - ಕೃಷ್ಣಮೂರ್ತಿ ಆಚಾರ್ಯರಿಂದ ಪರ್ಯಾಯಕ್ಕೆ 20 ಸಾವಿರ ಇತ್ತು)ಕನ್ನಡಪ್ರಭ ವಾರ್ತೆ ಉಡುಪಿ ಪುತ್ತಿಗೆ ಪರ್ಯಾಯ ಮಹೋತ್ಸವ ಪ್ರಯುಕ್ತ ಕಿನ್ನಿಮೂಲ್ಕಿ ಶ್ರೀಕೃಷ್ಣ ಗ್ರೂಪ್‌ ಆಫ್‌ ಡ್ಯಾನ್ಸ್‌ ವತಿಯಿಂದ ಕಿನ್ನಿಮೂಲ್ಕಿ ಜಂಕ್ಷನ್‌ನಲ್ಲಿ ಅಮೋಘ ಸಂಗೀತ ರಸಮಂಜರಿ, ನೃತ್ಯ ಪ್ರದರ್ಶನಗಳು ಜರುಗಿತು. ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಖ್ಯಾತ ನೇತೃತಜ್ಞ ಡಾ. ಕೃಷ್ಣಪ್ರಸಾದ್‌ ಕೂಡ್ಲು ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ರಿಕ್ಷಾ ಚಾಲಕರಿಗೆ ಸಮವಸ್ತ್ರ ವಿತರಿಸಿದರು. ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅಂಗನವಾಡಿ ಮಕ್ಕಳಿಗೆ ಆಟೋಟ ಸಾಮಗ್ರಿ ವಿತರಿಸಿದರು. ಶಿಕ್ಷಣತಜ್ಞೆ ಡಾ. ಉಮಾ ರಾಜಶೇಖರ್‌ ದಿಕ್ಸೂಚಿ ಭಾಷಣ ಮಾಡಿದರು. ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್‌, ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್‌. ಚಂದ್ರಶೇಖರ್‌, ಜಿ.ಪಂ. ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಪ್ರಖ್ಯಾತ್‌ ಶೆಟ್ಟಿ, ಕಿದಿಯೂರು ಉದಯ ಕುಮಾರ್‌ ಶೆಟ್ಟಿ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಕೆ. ಉದಯ ಕುಮಾರ್‌ ಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಕಾಂಚನ್‌, ಸಿನೆಮಾ ನಟಿ ರೂಪಾ ಗುರುರಾಜ್‌ ಬೆಂಗಳೂರು, ನಗರಸಭೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಮೊದಲಾದವರು ಉಪಸ್ಥಿತರಿದ್ದ‌ರು.

ಶ್ರೀ ಕೃಷ್ಣ ಗ್ರೂಪ್‌ ಆಫ್‌ ಡ್ಯಾನ್ಸ್‌ನ ಸಂಸ್ಥಾಪಕ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ನಿರೂಪಿಸಿದರು.

ಸಾಧಕರಿಗೆ ಸಮ್ಮಾನ ವಿವಿಧ ಶಾಲೆಗಳಿಗೆ ಫ್ಯಾನ್‌, ಸ್ಪೋರ್ಟ್ಸ್ ಕಿಟ್‌, ಅಶಕ್ತರಿಗೆ ಧನಸಹಾಯ ವಿತರಿಸಲಾಯಿತು.

ಚಿತ್ರ ನಟ ರೂಪೇಶ್ ಶೆಟ್ಟಿ, ನಟಿಯರಾದ ಸುಕೃತ ವಾಗ್ಲೆ, ಚಿರಶ್ರೀ ಅಂಚನ್, ರಂಜಿತಾ ಶೇಟ್, ಹಾಸ್ಯ ನಟರಾದ ಭೋಜರಾಜ್ ವಾಮಂಜೂರು ಮತ್ತು ಸಾಯಿ ಕೃಷ್ಣ, ಕಿರುತೆರೆ ನಟ ಕಾರ್ತಿಕ್ ಸಾಮಗ ಮುಂತಾದವರು ಭಾಗವಹಿಸಿದ್ದರು.

Share this article