ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ, ಮೆರವಣಿಗೆಯಲ್ಲಿ ತೆರಳಿ ತಹಸೀಲ್ದಾರ್ ಪೂರ್ಣಿಮಾಗೆ ಮನವಿ
ಕನ್ನಡಪ್ರಭ ವಾರ್ತೆ, ಕಡೂರುಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಕಡೂರು ಪಟ್ಟಣದಲ್ಲಿ ಕಾಂಗ್ರೆಸ್, ಬಹುಜನ ಸಮಾಜ ಮತ್ತು ಮಾದಿಗ ಸಮಾಜ ಮತ್ತು ವಿವಿಧ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪ್ರತಿಭಟನಾಕಾರರು ಮೆರವಣಿಗೆ ಮೂಲಕ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಲೋಕಸಭಾ ಅಧಿವೇಶನದಲ್ಲಿ ಕೇಂದ್ರದ ಮಂತ್ರಿಗಳಾದ ಅಮಿತ್ ಶಾ ರವರು, ಭಾರತ ದೇಶದ ಜನರು ಅಂಬೇಡ್ಕರ್ ಎಂದು ಹೇಳುವ ಬದಲು ದೇವರ ಹೆಸರು ಹೇಳಿದರೆ ನಿಮಗೆ ಸ್ವರ್ಗ ಸಿಗುತ್ತಿತ್ತು ಎಂದು ಹೇಳುವ ಮೂಲಕ ಕೋಟ್ಯಂತರ ಅಂಬೇಡ್ಕರ್ ಅನುಯಾಯಿಗಳಿಗೆ ಅವಮಾನ ಮಾಡಿದ್ದಾರೆ. ಇದನ್ನು ದಲಿತ, ಮಾದಿಗ ವರ್ಗ ಖಂಡಿಸುತ್ತದೆ ರಾಷ್ಟ್ರಪತಿಗಳು ತಕ್ಷಣವೇ ಅಮಿತ್ ಶಾ ರವರನ್ನುವಜಾ ಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಗೂ ಮುನ್ನ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶಾಸಕ ಕೆ ಎಸ್, ಆನಂದ್, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮತ್ತಿತರರು ಮಾತನಾಡಿದರು. ಆನಂತರ ಪ್ರಮುಖ ಬೀದಿಗಳಲ್ಲಿ ದಲಿತರು ಮೆರವಣಿಗೆ ನಡೆಸಿ ತಹಸೀಲ್ದಾರ್ ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ದೌರ್ಜನ್ಯ ಸಮಿತಿ ಸದಸ್ಯರಾದ ಕೆ.ಎಸ್. ಶಂಕರ್, ಮುಖಂಡರಾದ ಎಂ. ಎಚ್. ಚಂದ್ರಪ್ಪ, ಕೃಷ್ಣಪ್ಪ, ಆಸಂದಿ ಕಲ್ಲೇಶ್, ಚಂದ್ರಮೌಳಿ, ಕಂಸಾಗರ ಸೋಮಶೇಖರ್, ಶ್ರೀಕಾಂತ್,ಕಂಸಾಗರ ರೇವಣ್ಣ, ಬೀರೂರು ಚಂದ್ರಶೇಖರ್, ಟಿ.ಮಂಜಪ್ಪ, ರಾಮಚಂದ್ರಪ್ಪ, ಜಯಣ್ಣ, ಚಿಕ್ಕಂಗಳ ಲಕ್ಷ್ಮಣ, ತಿಮ್ಮಯ್ಯ, ಜಗದೀಶ್, ಗೋವಿಂದಪ್ಪ, ಪ್ರಮೋದ್, ವಾಸು, ಗಂಗರಾಜ್, ಸಂತೋಷ್, ಗೋವಿಂದಪ್ಪ, ಮಲ್ಲಿಕಾರ್ಜುನ್, ರಾಜು, ಗೋವಿಂದರಾಜು ಹಾಗೂ ನೂರಾರು ದಲಿತ ಕಾರ್ಯಕರ್ತರು ಭಾಗವಹಿಸಿದ್ದರು.25ಕೆಕೆಡಿಯು2.
ಕಡೂರು ಪಟ್ಟಣದಲ್ಲಿ ಅಮಿತ್ ಶಾ ವಿರುದ್ದ ಪ್ರಮುಖ ಬೀದಿಗಳಲ್ಲಿ ದಲಿತರು ಮೆರವಣಿಗೆ ನಡೆಸಿ ತಹಸೀಲ್ದಾರ್ ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಿದರು.