ಕನ್ನಡಪ್ರಭ ವಾರ್ತೆ ಸಕಲೇಶಪುರ
೨೦೦೮ರಲ್ಲಿ ನಿರ್ಮಾಣವಾದ ಮೊದಲ ಹಂತದ ಮಿನಿವಿಧಾನಸೌಧದಲ್ಲಿ ತಾಲೂಕು ಕಚೇರಿ ಹಾಗೂ ಖಜಾನೆ ಹೊರತುಪಡಿಸಿ ಬೇರೆ ಯಾವುದೇ ಸರ್ಕಾರಿ ಕಚೇರಿಗಳಿಗೂ ಸ್ಥಳಾವಕಾಶ ದೊರೆಯದ ಕಾರಣ ಕಂದಾಯ ಇಲಾಖೆಯ ವಿವಿಧ ಶಾಖೆಗಳಾದ ಸರ್ವೆ, ರಿಜಿಸ್ಟ್ರಾರ್, ನಾಡ ಕಚೇರಿಗಳು ಪಟ್ಟಣದ ಒಂದೊಂದು ದಿಕ್ಕಿನಲ್ಲಿ ಖಾಸಗಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುವಂತಾಗಿತ್ತು. ಒಂದೇ ಸೂರಿನಡಿ ಎಲ್ಲ ಸರ್ಕಾರಿ ಕಚೇರಿ ತರುವ ಮಿನಿ ವಿಧಾನಸೌಧ ಪರಿಕಲ್ಪನೆ ಇಲ್ಲಿ ಸಾಧ್ಯವಾಗಿರಲಿಲ್ಲ. ೨೦೧೯-೨೦ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿಯವರಿಗೆ ಸಮಸ್ಯೆಯ ಬಗ್ಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಆಲೂರು ಹಾಗೂ ಸಕಲೇಶಪುರ ಮಿನಿವಿಧಾನಸೌಧದ ಎರಡನೇ ಹಂತದ ಕಾಮಗಾರಿಗೆ ತಲಾ ಮೂರು ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಿದ್ದರು. ೨೦೨೧ರಲ್ಲಿ ಆರಂಭವಾದ ಎರಡನೇ ಹಂತದ ಮಿನಿವಿಧಾನಸೌಧದ ಕಾಮಗಾರಿ ೨೦೨೫ರ ಅಂತ್ಯದಲ್ಲಿ ಮುಕ್ತಾಯಗೊಂಡಿದ್ದು, ೨೦೨೫ರ ನವೆಂಬರ್ ತಿಂಗಳಿನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನದಲ್ಲೇ ಡಿಜಿಟಲ್ ಮೂಲಕ ಮಿನಿವಿಧಾನಸೌಧದ ಉದ್ಘಾಟನೆ ನೆರವೇರಿಸಿದ್ದರು. ಆದರೆ, ಉದ್ಘಾಟನೆಗೊಂಡು ಆರು ತಿಂಗಳು ಕಳೆದರೂ ಮಿನಿವಿಧಾನಸೌಧಕ್ಕೆ ಯಾವುದೇ ಕಚೇರಿಗಳು ಸ್ಥಳಾಂತರಗೊಳ್ಳದಾಗಿದ್ದವು. ಆದರೆ, ಕಳೆದ ೧೫ ದಿನಗಳ ಹಿಂದೆ ಉಪವಿಭಾಗಾಧಿಕಾರಿಗಳು ತಾವೇ ಮುಂದಾಗಿ ತಮ್ಮ ಕಚೇರಿಯನ್ನು ಮಿನಿವಿಧಾನಸೌಧದ ಎರಡನೇ ಅಂತಸ್ಥಿಗೆ ಸ್ಥಳಾಂತರಗೊಳಿಸಲಾಗಿದೆ.
ಮಿನಿವಿಧಾನಸೌಧದ ಮೂರನೇ ಮಹಡಿಯಲ್ಲಿ ಎಂಟು ಕೊಠಡಿಗಳು ಸರ್ವೇ ಇಲಾಖೆಗೆ ಮೀಸಲಾಗಿದ್ದು, ಕಚೇರಿಗೆ ಪೀಠೋಪಕರಣಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಇನ್ನೊಂದು ವಾರದಲ್ಲಿ ಈ ಕಚೇರಿಯು ಮಿನಿ ವಿಧಾನಸೌಧಕ್ಕೆ ಬರಲಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗಾಗಿ ಮೂರನೇ ಮಹಡಿಯಲ್ಲಿ ೭೫೦ ಚದರ ಅಡಿ ಕೊಠಡಿ ಮೀಸಲಿಡಲಾಗಿದೆ. ಆದರೆ, ಸಬ್ ರಿಜಿಸ್ಟ್ರಾರ್ ಪ್ರಕಾರ ಕಚೇರಿಯಲ್ಲಿ ಕಡತಗಳ ಸಂಖ್ಯೆ ವಿಪರೀತ. ಆದ್ದರಿಂದ ಕನಿಷ್ಠ ೨೦೦೦ ಚದರ ಅಡಿ ವಿಸ್ತೀರ್ಣದ ಕೊಠಡಿ ಬೇಕು. ಅಲ್ಲದೆ ಮೂರನೇ ಮಹಡಿಯಲ್ಲಿ ಕಚೇರಿ ನೀಡಿದರೆ ಲಿಫ್ಟ್ ಇಲ್ಲದ ಕಟ್ಟಡದಲ್ಲಿ ಮೂರನೇ ಮಹಡಿ ತಲುಪುವುದು ಅಬಲರು, ಅಂಗವಿಕಲರಿಗೆ ಸಾಧ್ಯವಿಲ್ಲ. ಸಾಧ್ಯವಾದರೆ ಎರಡನೇ ಮಹಡಿಯಲ್ಲಿ ಕೊಠಡಿ ನೀಡಿ ಅಥವಾ ಈಗಿರುವ ಟ್ರಜರಿ ಕಚೇರಿಯನ್ನು ಮೂರನೇ ಮಹಡಿಗೆ ವರ್ಗಾಯಿಸಿ ಮೊದಲ ಮಹಡಿಯಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಅವಕಾಶ ನೀಡಿ ಎಂಬ ಮನವಿ ಉಪವಿಭಾಗಾಧಿಕಾರಿಗಳಿಗೆ ಸಲ್ಲಿಕೆಯಾಗಿದ್ದು ಇನ್ನೂ ಪರಿಶೀಲನೆ ಹಂತದಲ್ಲಿದ್ದು, ಈ ತಿಂಗಳ ಅಂತ್ಯದೊಳಗೆ ಈ ಕಚೇರಿ ಸಹ ಮಿನಿ ವಿಧಾನಸೌಧ ತಲುಪುವುದು ನಿಶ್ಚಿತ ಎನ್ನಲಾಗುತ್ತಿದೆ.ಹತ್ತಿರವಾದ ನಾಡಕಚೇರಿ:
ನಾಡ ಕಚೇರಿಯಾದ ಉಪವಿಭಾಗಾಧಿಕಾರಿ ಕಚೇರಿ:
ಒತ್ತುವರಿ;
ನೆಲಮಹಡಿ ಸೇರಿದಂತೆ ಮಿನಿ ವಿಧಾನಸೌಧ ನಾಲ್ಕು ಮಹಡಿಗಳ ಕಟ್ಟಡವಾಗಿದೆ. ಆದರೆ, ಈ ಬೃಹತ್ ಕಟ್ಟಡಕ್ಕೆ ಲಿಫ್ಟ್ ಅಳವಡಿಸಲಾಗಿಲ್ಲ. ಎರಡನೇ ಹಂತದ ಕಟ್ಟಡ ಪೂರ್ಣಗೊಂಡ ವೇಳೆ ಪರಿಶೀಲನೆ ನಡೆಸಿದ ಶಾಸಕ ಸೀಮೆಂಟ್ ಮಂಜು ಲಿಫ್ಟ್ ಅಳವಡಿಸದಿರುವ ಬಗ್ಗೆ ಚಕಾರ ಎತ್ತಿದ್ದರು. ಇದರಿಂದಾಗಿ ಮುಂದಿನ ದಿನಗಳಲ್ಲಿ ಲಿಫ್ಟ್ ಅಳವಡಿಸಲು ಸ್ಥಳ ಮೀಸಲಿಡಲಾಗಿದೆ. ಆದರೆ, ಅದುವರೆಗೂ ಮೆಟ್ಟಿಲೇ ಜನರಿಗೆ ಆಶ್ರಯವಾಗಿದ್ದು ಅಂಗವಿಕಲರು, ಅಬಲರಿಗೆ ಕಷ್ಟವಾಗಲಿದೆ.
*ಹೇಳಿಕೆ:
ಸಿಮೆಂಟ್ ಮಂಜು ಶಾಸಕ