ವಿಡಿಐಟಿ ಎಂಜಿನಿಯರಿಂಗ್ ವಿದ್ಯಾಲಯಕ್ಕೆ ಪ್ಲಾಟಿನಂ ಸುಸ್ಥಿರ ಕ್ಯಾಂಪಸ್ ಪ್ರಶಸ್ತಿ

KannadaprabhaNewsNetwork |  
Published : Jun 05, 2026, 02:45 AM IST
ಪಟ್ಟಣದ ಕೆ.ಎಲ್.ಎಸ್ ಸಂಸ್ಥೆಯ ವಿಡಿಐಟಿ ಎಂಜಿನಿಯರಿಂಗ್ ವಿದ್ಯಾಲಯಕ್ಕೆ ಪ್ಲಾಟಿನಂ ಸುಸ್ಥಿರ ಕ್ಯಾಂಪಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. | Kannada Prabha

ಸಾರಾಂಶ

ಪರಿಸರ ಸ್ನೇಹಿ, ಹಸಿರು ಶಕ್ತಿ, ಜಲ ಸಂರಕ್ಷಣೆ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆಗೈದ ಪಟ್ಟಣದ ಕೆ.ಎಲ್.ಎಸ್ ಸಂಸ್ಥೆಯ ವಿಡಿಐಟಿ ಎಂಜಿನಿಯರಿಂಗ್ ವಿದ್ಯಾಲಯಕ್ಕೆ ಪ್ಲಾಟಿನಂ ಸುಸ್ಥಿರ ಕ್ಯಾಂಪಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹಳಿಯಾಳ

ಪರಿಸರ ಸ್ನೇಹಿ, ಹಸಿರು ಶಕ್ತಿ, ಜಲ ಸಂರಕ್ಷಣೆ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆಗೈದ ಪಟ್ಟಣದ ಕೆ.ಎಲ್.ಎಸ್ ಸಂಸ್ಥೆಯ ವಿಡಿಐಟಿ ಎಂಜಿನಿಯರಿಂಗ್ ವಿದ್ಯಾಲಯಕ್ಕೆ ಪ್ಲಾಟಿನಂ ಸುಸ್ಥಿರ ಕ್ಯಾಂಪಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ರಿಸರ್ಚ್‌ ಹೈಟ್ ಫೌಂಡೇಶನ್ (ಆರ್.ಎಚ್.ಎಫ್) ಮತ್ತು ಪರಿಸರ ಸಂರಕ್ಷಣಾ ತರಬೇತಿ ಮತ್ತು ಸಂಶೋಧನಾ ಸಂಸ್ಥೆ (ಇ.ಪಿ.ಟಿ.ಆರ್.ಐ) ಜೂ. 1ರಂದು ಹೈದರಾಬಾದ್‌ನಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿದ್ಯಾಲಯದ ಪರವಾಗಿ ಪ್ರೊ.ರಾಕೇಶ್ ಪಾಟೀಲ ಪ್ರಶಸ್ತಿ ಸ್ವೀಕರಿಸಿದರು. ಭಾರತ ಸಸ್ಟೆನೇಬಲ್ ಕ್ಯಾಂಪಸ್ ಮಿಷನ್ 2026 ಅಡಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದೇಶದಲ್ಲಿನ ವಿವಿಧ ರಾಜ್ಯಗಳ 321 ಕಾಲೇಜುಗಳಿಗೆ ಈ ಪ್ರಶಸ್ತಿ ನೀಡಲಾಗಿದೆ. ರಾಜ್ಯದಿಂದ ಪ್ರಶಸ್ತಿ ಪಡೆದ 28 ಕಾಲೇಜುಗಳಲ್ಲಿ ಕೇವಲ 14 ಕಾಲೇಜುಗಳು 7ಕ್ಕೂ ಅಧಿಕ ಪರಿಸರ ಸಂರಕ್ಷಣಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದ್ದು, ಇದರಲ್ಲಿ ಹಳಿಯಾಳದ ವಿ.ಡಿ.ಐ.ಟಿ ಕಾಲೇಜ್ ಒಂದಾಗಿದೆ. ಕಾಲೇಜಿಗೆ ರಾಷ್ಟ್ರೀಯ ಪ್ರಶಸ್ತಿ ದೊರೆತಿರುವುದಕ್ಕೆ ಆಡಳಿತ ಮಂಡಳಿ ಅಧ್ಯಕ್ಷ ಪ್ರಶಾಂತ ಕುಲಕರ್ಣಿ ಹಾಗೂ ಪ್ರಾಚಾರ್ಯ ಡಾ. ವಿ.ಎ.ಕುಲಕರ್ಣಿ ಸಂತಸ ವ್ಯಕ್ತಪಡಿಸಿದ್ದಾರೆ.

ಶಕ್ತಿ ಹಾಗೂ ಪರಿಸರ ಸಂರಕ್ಷಣೆಯ ಕುರಿತಾಗಿ ಇಕೋ ಕ್ಲಬ್ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಫಲವಾಗಿ ಕಾಲೇಜು ಪುರಸ್ಕಾರಕ್ಕೆ ಭಾಜನವಾಗಿರುವುದು ಹರ್ಷ ತಂದಿದೆ ಎಂದು ಇಕೋ ಕ್ಲಬ್ ಸದಸ್ಯರಾದ ಡಾ. ಸ್ನೇಹಾ ಕುಲಕರ್ಣಿ, ಪ್ರೊ. ರೋಹಿಣಿ ಕಲ್ಲೂರ, ಪ್ರೊ. ಸುನೀತಾ ಕಲ್ಲು, ಪ್ರೊ. ನವೀನ ಹಿರೇಮಠ, ಪ್ರೊ. ಅಮರನಾಥ ಸ್ವಾಮಿ, ಜಿ.ಎಸ್. ಯಳ್ಳೂರ ಪ್ರತಿಕ್ರಿಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ಗೆ ಅಭಿನಂದನೆ
ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ: ಪ್ರೇಮ ಕುಮಾರ್