ವೀರಶೈವ ಸಹಕಾರ ಸಂಘಕ್ಕೆ ₹ 75.27 ಲಕ್ಷ ಲಾಭ: ತಡಸದ

KannadaprabhaNewsNetwork |  
Published : Sep 15, 2025, 01:01 AM IST
ಸಭೆ | Kannada Prabha

ಸಾರಾಂಶ

ಮುದ್ದೇಬಿಹಾಳ: ಅನೇಕ ಹಿರಿಯ ತ್ಯಾಗ ಹಾಗೂ ಪರಿಶ್ರಮದಿಂದ ಸ್ಥಾಪನೆಯಾದ ವೀರಶೈವ ಪತ್ತಿನ ಸಹಕಾರಿ ಸಂಘವೂ ಇಂದಿನ ಪೈಪೋಟಿ ನಡುವೆಯೂ ಸಹಕಾರಿ ತತ್ವದಡಿಯಲ್ಲಿ ಸಾಗುತ್ತಿದ್ದು, 2024-25 ಸಾಲಿನಲ್ಲಿ ₹ 75.27 ಲಕ್ಷ ಲಾಭ ಗಳಿಸಿ ಇಂದು ಸದಸ್ಯರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ಅಧ್ಯಕ್ಷ ವಿ.ಎಸ್.ತಡಸದ ಹೇಳಿದರು.

ಮುದ್ದೇಬಿಹಾಳ: ಅನೇಕ ಹಿರಿಯ ತ್ಯಾಗ ಹಾಗೂ ಪರಿಶ್ರಮದಿಂದ ಸ್ಥಾಪನೆಯಾದ ವೀರಶೈವ ಪತ್ತಿನ ಸಹಕಾರಿ ಸಂಘವೂ ಇಂದಿನ ಪೈಪೋಟಿ ನಡುವೆಯೂ ಸಹಕಾರಿ ತತ್ವದಡಿಯಲ್ಲಿ ಸಾಗುತ್ತಿದ್ದು, 2024-25 ಸಾಲಿನಲ್ಲಿ ₹ 75.27 ಲಕ್ಷ ಲಾಭ ಗಳಿಸಿ ಇಂದು ಸದಸ್ಯರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ಅಧ್ಯಕ್ಷ ವಿ.ಎಸ್.ತಡಸದ ಹೇಳಿದರು.

ಪಟ್ಟಣದ ಎಪಿಎಂಸಿ ಬಡಾವಣೆಯ ವೀರಶೈವ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಶನಿವಾರ ನಡೆದ 32ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಸಂಘವು ಬಡವರ ಹಾಗೂ ಮದ್ಯಮ ವರ್ಗದ ವ್ಯಾಪಾರಸ್ಥರಿಗೆ ಸಾಲಸೌಲಭ್ಯಗಳನ್ನು ನೀಡುವ ಮೂಲಕ ಉತ್ತಮ ಪಾರದರ್ಶಕ ಆಡಳಿತಕ್ಕೆ ಸಾಕ್ಷಿಯಾಗಿದೆ. 2024ರಲ್ಲಿ ₹ 3.24 ಕೋಟಿ ಇದ್ದ ಬಂಡವಾಳ ವರದಿ 2025 ಕ್ಕೆ ₹ 3.91 ಕೋಟಿ ಇದೆ. ಕಳೆದ 2024ರಲ್ಲಿ ₹ 20.70 ಕೋಟಿ ಇದ್ದ ಠೇವು ಹಣ 2025 ಕ್ಕೆ ₹ 23.21 ಕೋಟಿಯೊಂದಿಗೆ ₹ 2.51 ಕೋಟಿ ಹೆಚ್ಚಳವಾಗಿದೆ. ಲೆಕ್ಕಪತ್ರ, ಸಂಪೂರ್ಣ ಗಣಕೀಕರಣ ಹಾಗೂ ಸೇಫ್‌ ಡಿಪಾಜಿಟ್ ಲಾಕರ್ ಸೌಲಭ್ಯಗಳನ್ನು ಹೊಂದಿರುವ ನಮ್ಮ ಸಂಘ ಶೇರುದಾರರ ಹಾಗೂ ಠೇವಣಿದಾರರು ಹಾಗೂ ವ್ಯಾಪಾರಸ್ಥರ ಸಹಕಾರದಿಂದ ಪ್ರತಿವರ್ಷ ದುಡಿಯುವ ಬಂಡವಾಳವನ್ನು ವೃದ್ಧಿಸಿಕೊಂಡು ಹೆಚ್ಚಿನ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದರು.

ಸಂಘದ ಉಪಾಧ್ಯಕ್ಷ ಎಂ.ಸಿ.ದಡ್ಡಿ, ನಿರ್ದೇಶಕರಾದ ಎ.ಎಸ್.ಹಿರೇಮಠ, ಎಂ.ಎಸ್.ನಾವದಗಿ, ಕೆ.ಬಿ.ಮಾದನಶೇಟ್ಟಿ, ಎಸ್.ಎಂ.ಚಳಿಗೇರಿ, ಸಿ.ಜಿ.ಚಳಗೇರಿ, ಸಿ.ಜಿ.ಬಿಂಜಲಭಾವಿ, ಯು.ಎ.ನಾಯನೇಗಲಿ, ಪಿ.ಎಸ್.ಮುದ್ದೇಬಿಹಾಳ, ಎಂ.ವಿ.ಮೋಟಗಿ, ಜೆ.ಸಿ.ಕಂಠಿ, ಎಸ್.ವಿ.ಸಿದ್ದಾಪೂರ, ಎಸ್.ಎಸ್.ಪಾಟೀಲ ಸೇರಿ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ