ವೀರಶೈವ ಲಿಂಗಾಯಿತ ಎಂದು ಬರೆಸಲು ಸಮಾಜದ ನಿರ್ಣಯ

KannadaprabhaNewsNetwork |  
Published : Sep 24, 2025, 01:00 AM IST
್ಿ | Kannada Prabha

ಸಾರಾಂಶ

ಜಾತಿಗಣತಿ ಸಮೀಕ್ಷೆಯಲ್ಲಿ ಹಲವು ಪಂಗಡಗಳಾಗಿ ವಿಂಗಡಣೆಯಾಗಿರುವ ವೀರಶೈವ ಲಿಂಗಾಯಿತ ಸಮುದಾಯ ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯಿತ ಎಂದು ತಪ್ಪದೇ ನಮ್ಮದು ಮಾಡಬೇಕು ಎಂದು ತುಮಕೂರು ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ಕೋರಿ ಮಂಜುನಾಥ ಅವರು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ, ತುಮಕೂರುಜಾತಿಗಣತಿ ಸಮೀಕ್ಷೆಯಲ್ಲಿ ಹಲವು ಪಂಗಡಗಳಾಗಿ ವಿಂಗಡಣೆಯಾಗಿರುವ ವೀರಶೈವ ಲಿಂಗಾಯಿತ ಸಮುದಾಯ ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯಿತ ಎಂದು ತಪ್ಪದೇ ನಮ್ಮದು ಮಾಡಬೇಕು ಎಂದು ತುಮಕೂರು ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ಕೋರಿ ಮಂಜುನಾಥ ಅವರು ಸಲಹೆ ನೀಡಿದರು.ನಗರದ ಜೆ.ಸಿ. ರಸ್ತೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ಸಮುದಾಯ ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿಗೊಳ್ಳಬೇಕಾದರೆ ತನ್ನ ಜನಸಂಖ್ಯಾ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಹೀಗಾಗಿ ಸರ್ಕಾರಗಳು ಕಾಲಕಾಲಕ್ಕೆ ನಡೆಸುವ ಜಾತಿ ಸಮೀಕ್ಷೆಯಲ್ಲಿ ಸಮುದಾಯಗಳು ತಮ್ಮ ಉಪಜಾತಿಗಳನ್ನ ನಮೂದು ಮಾಡುವುದು ಆಯಾ ಸಮುದಾಯದ ಅಭಿವೃದ್ಧಿ ವಿಚಾರಕ್ಕೆ ಅನುಕೂಲವಾಗುವುದರಿಂದ ಪ್ರಸ್ತುತ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ತುಮಕೂರು ಜಿಲ್ಲೆಯ ಎಲ್ಲ ವೀರಶೈವ ಲಿಂಗಾಯತ ಸಮುದಾಯದ ಸಮಾಜದ ಬಂಧುಗಳು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯಿತ ಧರ್ಮದ ಕಾಲಂನಲ್ಲಿ ಹಿಂದೂ ಎಂದು ತಪ್ಪದೇ ನಮೂದು ಮಾಡಬೇಕು ಎಂದು ಹೇಳಿದರು.ಸಿದ್ದಗಂಗಾ ಮಠದ ಲಿಂ. ಶಿವಕುಮಾರ ಸ್ವಾಮೀಜಿಗಳ ಆದೇಶದಂತೆ ಲಿಂಗಾಯಿತ ಮತ್ತು ವೀರಶೈವ ಸಮುದಾಯಗಳು 2 ಒಂದೇ ಎಂದು ನುಡಿದಿದ್ದರು. ಅನಾದಿಕಾಲದಿಂದಲೂ ಧಾರ್ಮಿಕವಾಗಿ ವೀರಶೈವ ಮತ್ತು ಲಿಂಗಾಯತ ಸಮುದಾಯಗಳು ಸಮಾಜದಲ್ಲಿ ಮಹತ್ವವನ್ನ ಉಳಿಸಿಕೊಂಡು ಬಂದಿವೆ. ವೀರಶೈವ ಲಿಂಗಾಯಿತ ಸಮುದಾಯದಲ್ಲಿ ಅನೇಕ ಪಂಗಡಗಳಿದ್ದು ಇವುಗಳಲ್ಲಿ ಜನಸಂಖ್ಯೆಯ ಪೈಪೋಟಿಗೆ ಇದೀಗ ಕೆಲವರು ರಾಜಕೀಯ ಬಣ್ಣವನ್ನು ಬಳಿಯಲು ಹೊರಟಿದ್ದಾರೆ ಇದು ಶೋಭೆ ತರುವ ವಿಚಾರವಲ್ಲ ವೀರಶೈವ ಮತ್ತು ಲಿಂಗಾಯತ ಸಮುದಾಯದ ಅಭಿವೃದ್ಧಿಗೆ ಮತ್ತು ಒಳಿತಿಗಾಗಿ ದುಡಿಯಬೇಕಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಟಿಬಿ ಹರೀಶ್, ಸಿದ್ದಲಿಂಗ ಮೂರ್ತಿ, ಕೆ ಜೆ ರುದ್ರಪ್ಪ,ಟಿ ಸಿ ಓಹಿಲೇಶ್ವರ, ಬಿಎಸ್ ಮಂಜುನಾಥ್, ಟಿ ಆರ್ ಸದಾಶಿವಯ್ಯ, ಸಿದ್ದಲಿಂಗಸ್ವಾಮಿ, ಶಶಿಧರ್, ಜಿಕೆ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ