ಗದಗ: ಪುಣ್ಯಕೋಟಿಗಳ ನೆಲೆ, ಸಂಗೀತ ಕಾಶಿಯೆಂದೇ ಖ್ಯಾತಿಯಾದ ಇಲ್ಲಿನ ವೀರೇಶ್ವರ ಪುಣ್ಯಾಶ್ರಮವು ಈಗ ಹಿಂದೆಂದೂ ಕಂಡಿರದಂತ ತೀವ್ರ ಗೊಂದಲ ಮತ್ತು ವಿವಾದಗಳ ಸುಳಿಯಲ್ಲಿ ಸಿಲುಕಿದೆ.
ಈ ಗೊಂದಲಕ್ಕೆ ಕೋಮು ವಿವಾದದ ಆಯಾಮ ನೀಡಿರುವುದು ಆಶ್ರಮದ ತೇರಿನ ಗಾಲಿಯ ಮೇಲಿನ ಒಂದು ಬರಹ. ಈ ಗಾಲಿಯ ಮೇಲೆ ಅನ್ಯ ಕೋಮಿನ ಮಹಿಳೆಯ ಹೆಸರು ಹಾಕಲಾಗಿದೆ ಎಂದು ಹಿಂದೂ ಮುಖಂಡರು ಆರೋಪಿಸಿ, ಇದನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಆಗ್ರಹ ಮಾಡಿದ್ದರು. ಇದರ ಬೆನ್ನಲ್ಲಿಯೇ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸುದ್ದಿಗೋಷ್ಠಿ ನಡೆಸಿ, ಈ ಹೇಳಿಕೆಯನ್ನು ಖಂಡಿಸುವುದರ ಜತೆಗೆ ತಮಗೆ ಜೀವಭಯವಿದೆ ಎಂದು ಹೇಳಿರುವುದು ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.
ಈ ಗೊಂದಲದ ಪ್ರಮುಖ ತಿರುವು ಎಂದರೆ, ಆಶ್ರಮದ ಕಲ್ಲಯ್ಯಜ್ಜನವರ ಟ್ರಸ್ಟಿಗಳ ವಿರುದ್ಧ ಜೀವಬೆದರಿಕೆ ಆರೋಪ. ಆಶ್ರಮದ ಒಳಗೆ ನಡೆಯುತ್ತಿರುವ ವಿದ್ಯಮಾನಗಳು ಸರಿಯಾಗಿಲ್ಲ, ಇಲ್ಲಿ ಸಾಕಷ್ಟು ಹಣಕಾಸಿನ ಮತ್ತು ಆಸ್ತಿ ವಿಷಯದಲ್ಲಿ ಗೊಂದಲಗಳಿವೆ ಎನ್ನುವುದು ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಯಿತು.ಇದು ರಾಜ್ಯಾದ್ಯಂತ ತೀವ್ರ ಸಂಚಲಕ್ಕೆ ಕಾರಣವಾಗಿದೆ. ನನಗೆ ಜೀವಬೆದರಿಕೆ ಹಾಕಿದ 6 ಜನರ ಮೇಲೆ ಪ್ರಕರಣ ದಾಖಲಿಸುವುದಾಗಿ ಹೇಳಿದ್ದು, ಕೂಡಾ ರಾಜ್ಯವೇ ಗದಗನತ್ತ ಹೊರಳಿ ನೋಡುವಂತೆ ಮಾಡಿತ್ತು.
ವೀರೇಶ್ವರ ಪುಣ್ಯಾಶ್ರಮದ ಈ ಗೊಂದಲಗಳು ಗದಗ ಹಾಗೂ ಅಕ್ಕಪಕ್ಕದ ಜಿಲ್ಲೆಯ ಜನತೆಯಲ್ಲಿ ತೀವ್ರ ಆತಂಕ ಮತ್ತು ಅಸಮಾಧಾನವನ್ನು ಮೂಡಿಸಿವೆ. ಆಶ್ರಮದಂತಹ ಪವಿತ್ರ ಸ್ಥಳವು ಈ ರೀತಿಯ ವಿವಾದಗಳಿಗೆ ಕಾರಣವಾಗಿರುವುದು ಅತ್ಯಂತ ದುರದೃಷ್ಟಕರ. ಆಶ್ರಮದ ಗೌರವ, ಸಂಗೀತ ಕಾಶಿಯ ಅಸ್ಮಿತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎನ್ನುತ್ತಾರೆ ಅಪಾರ ಸಂಖ್ಯೆಯ ಭಕ್ತರು.ಇಂದು ಪ್ರತಿಭಟನೆ