ಕನ್ನಡಪ್ರಭ ವಾರ್ತೆ ಮಳವಳ್ಳಿ
ಶತ್ರುಗಳನ್ನು ಪ್ರೀತಿಸುವ ಹೃದಯವಂತಿಕೆ ನಟ ದಿ.ಅಂಬರೀಶ್ ಅವರಿಗೆ ಇದೆ. ಅವರ ನಡೆ-ನುಡಿ ಎಲ್ಲರಿಗೂ ಮಾದರಿಯಾಗಿತ್ತು. ಅಂಬರೀಶ್ ತೆರೆಯ ಮೇಲೆ ಮಾತ್ರವಲ್ಲದೇ ನಿಜ ಜೀವನದಲ್ಲೂ ಕಷ್ಟದಲ್ಲಿದ್ದ ಜನರಿಗೆ ಅನೇಕ ಸಹಾಯ ಮಾಡುವ ಮೂಲಕ ಕಲಿಯುಗದ ಕರ್ಣ, ಹೃದಯವಂತಿಕೆಯ ಸಾಮ್ರಾಟ ಎನಿಸಿಕೊಂಡಿದ್ದರು ಎಂದರು.
ರಾಜಕೀಯವಾಗಿ ಸಾಕಷ್ಟು ಹೆಸರು ಮಾಡಿದ್ದ ಅಂಬರೀಷ್ ಕೇಂದ್ರ ಮತ್ತು ರಾಜ್ಯ ರಾಜಕಾರಣದಲ್ಲಿ ತಮ್ಮದೆ ಆದ ಛಾವು ಮೂಡಿಸಿಕೊಂಡಿ ಎಲ್ಲರ ಮನದಲ್ಲಿ ಜೀವಂತವಾಗಿದ್ದಾರೆ. ಅವರ ಸೇವೆಗಳು ಇಂದಿಗೂ ಶಾಶ್ವತವಾಗಿ ಉಳಿದಿವೆ ಎಂದರು.ಈ ವೇಳೆ ಪುರಸಭೆ ಸದಸ್ಯ ಎಂ.ಆರ್.ರಾಜಶೇಖರ್, ದೇವಿಪುರದ ಚೌಡೇಗೌಡ, ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸತೀಶ್(ಗುಂಡ), ಪ್ರಮುಖರಾದ ಕೋಟೆ ಚಂದ್ರು, ರವಿ, ಬಂಕ್ ಬಸವರಾಜು, ಲೋಕೇಶ್, ಚೌಡೇಶ್, ಸೋಮರಾಜು, ಕರಿಯಪ್ಪ ಪಾಲ್ಗೊಂಡಿದ್ದರು.
ನಾಳೆ ಉಚಿತ ಆರೋಗ್ಯ ತಪಾಸಣಾ ಶಿಬಿರಕನ್ನಡಪ್ರಭ ವಾರ್ತೆ ಮಂಡ್ಯ
ನಾರಾಯಣ ಹೆಲ್ತ್ ಆಸ್ಪತ್ರೆ ಹಾಗೂ ಭಗವಾನ್ ಬುದ್ಧ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಯ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಮೇ ೩೧ರಂದು ಬೆಳಗ್ಗೆ ೯ ರಿಂದ ಮಧ್ಯಾಹ್ನ ೩ರವರೆಗೆ ಮಳವಳ್ಳಿಯ ಭಗವಾನ್ ಬುದ್ಧ ಶಿಕ್ಷಣ ಮಹಾವಿದ್ಯಾಲಯದ ನೂತನ ಕಟ್ಟಡದಲ್ಲಿ ಆಯೋಜಿಸಲಾಗಿದ ಎಂದು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಯಮದೂರು ಸಿದ್ದರಾಜು ತಿಳಿಸಿದರು.ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನಾರಾಯಣ ಹೆಲ್ತ್ ಆಸ್ಪತ್ರೆಯ ನುರಿತ ವೈದ್ಯರೂ ಸೇರಿದಂತೆ ೪೦ ಕ್ಕೂ ಹೆಚ್ಚು ವೈದ್ಯ ಸಿಬ್ಬಂದಿ ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆರೋಗ್ಯ ತಪಾಸಣಾ ಶಿಬಿರವನ್ನು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಎಂದು ಹೇಳಿದರು.ಶಿಬಿರದಲ್ಲಿ ಹೃದಯ, ಮಕ್ಕಳ ತಜ್ಞರು, ಕ್ಯಾನ್ಸರ್ ಹಾಗೂ ಮಹಿಳಾ ರೋಗ,ಮಂಡಿ ನೋವು, ಸಂಬಂಧಿತ ತಜ್ಞರು ಭಾಗವಹಿಸಲಿದ್ದು, ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಭಗವಾನ್ ಬುದ್ಧ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಯ ವಿವಿಧ ಘಟಕಗಳು ಶಿಬಿರ ಆಯೋಜನೆಯಲ್ಲಿ ಸಹಕಾರ ನೀಡಲಿವೆ ಎಂದರು. ಮುಖಂಡರಾದ ನಾಗಾರ್ಜುನ, ಜೆ.ಸಿ.ಸೌಮ್ಯ, ಸುಂದರ್, ಬಸವರಾಜು ಬಂಡೂರು ಗೋಷ್ಠಿಯಲ್ಲಿದ್ದರು.