ಚೇಂದಂಡ, ಚೆಪ್ಪುಡಿರ, ಮಂಡೇಪಂಡ, ಕುಪ್ಪಂಡಕ್ಕೆ ಗೆಲುವು

KannadaprabhaNewsNetwork |  
Published : Apr 23, 2025, 12:33 AM IST
ಚಿತರ್ :  22ಎಂಡಿಕೆ3: ಅಂಜಪರವಂಡ ಮತ್ತು ಚೆಪ್ಪುಡಿರ ನಡುವಿನ ಪಂದ್ಯ. | Kannada Prabha

ಸಾರಾಂಶ

ಮುದ್ದಂಡ ಹಾಕಿ ಕಪ್‌ನ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಚೇಂದಂಡ, ಚೆಪ್ಪುಡಿರ, ಮಂಡೇಪಂಡ, ಕುಪ್ಪಂಡಕ್ಕೆ ಗೆಲುವು ಸಾಧಿಸಿವೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಹಾಕಿ ಕಪ್ ನ ಪ್ರಿ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಚೇಂದಂಡ, ಚೆಪ್ಪುಡಿರ, ಮಂಡೇಪಂಡ, ಕುಪ್ಪಂಡಕ್ಕೆ ಗೆಲುವು ಸಾಧಿಸಿವೆ.

ಮಂಗಳವಾರ ನಡೆದ ಪಂದ್ಯಾಟದಲ್ಲಿ ಮೇಚಿಯಂಡ ಮತ್ತು ಚೇಂದಂಡ 6-0 ಗೋಲುಗಳ ಅಂತರದಲ್ಲಿ ಚೇಂದಂಡ ತಂಡ ಜಯ ಸಾಧಿಸಿತು. ಚೇಂದಂಡ ಪರ ಸುಬ್ಬಿ ಸುಬ್ಬಯ್ಯ 4 ಹಾಗೂ ನಿಖಿನ್ ತಿಮ್ಮಯ್ಯ ಹಾಗೂ ಬಿಪಿನ್ ಬೋಪಣ್ಣ ತಲಾ 1 ಗೋಲು ದಾಖಲಿಸಿದರು. ಮೇಚಿಯಂಡ ವಿನಿತ್ ನಾಚಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಅಂಜಪರವಂಡ ಮತ್ತು ಚೆಪ್ಪುಡಿರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಚೆಪ್ಪುಡಿರ ಜಯ ಸಾಧಿಸಿತು. ಚೆಪ್ಪುಡಿರ ಪರ ಚೇತನ್ ಚಿಣ್ಣಪ್ಪ, ವಚನ್ ಚಿಣ್ಣಪ್ಪ, ನರನ್ ಕಾರ್ಯಪ್ಪ ಹಾಗೂ ಪ್ರಣವ್ ತಿಮ್ಮಯ್ಯ ತಲಾ 1 ಗೋಲು ದಾಖಲಿಸಿದರು. ಅಂಜಪರವಂಡ ಜತನ್ ಅಪ್ಪಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಸಣ್ಣುವಂಡ ಮತ್ತು ಮಂಡೇಪಂಡ ನಡುವಿನ ಪಂದ್ಯದಲ್ಲಿ 4-1 ಗೋಲುಗಳ ಅಂತರದಲ್ಲಿ ಮಂಡೇಪಂಡ ಗೆಲುವು ಸಾಧಿಸಿತು. ಮಂಡೇಪಂಡ ಪರ ಕವನ್ ಮುತ್ತಪ್ಪ 2, ಚಂಗಪ್ಪ ಹಾಗೂ ನಂಜಪ್ಪ ತಲಾ 1 ಗೋಲು ದಾಖಲಿಸಿದರು. ಸಣ್ಣುವಂಡ ಪರ ಯತಿನ್ ಅಯ್ಯಪ್ಪ 1 ಗೋಲು ಬಾರಿಸಿದರು. ಸಣ್ಣುವಂಡ ಅಯ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಪರದಂಡ ಮತ್ತು ಕುಪ್ಪಂಡ (ಕೈಕೇರಿ) ನಡುವಿನ ಪಂದ್ಯದಲ್ಲಿ 5-2 ಗೋಲುಗಳ ಅಂತರದಲ್ಲಿ ಕುಪ್ಪಂಡ ತಂಡ ಗೆಲುವು ಸಾಧಿಸಿತು. ಕುಪ್ಪಂಡ ಪರ ಜಗತ್ 2, ಸೋಮಯ್ಯ, ಪ್ರಧಾನ್, ದ್ಯಾನ್ ತಲಾ 1 ಗೋಲು ದಾಖಲಿಸಿದರು. ಪರದಂಡ ಪರ ಪ್ರಜ್ವಲ್ ಪೂವಣ್ಣ 2 ಗೋಲು ದಾಖಲಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅದ್ಧೂರಿ ಮಾರಿಕಾಂಬೆ ಉತ್ಸವ ಮೂರ್ತಿ ಮೆರವಣಿಗೆ
ಗುರಿ ಸಾಧನೆಗೆ ಶ್ರಮ ಮುಖ್ಯ: ಭುವನೇಶ್ವರಿ