ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಗರ ಮಂಡಲದಿಂದ ಆಯೋಜಿಸಿದ್ದ ಬೂತ್ ಅಧ್ಯಕ್ಷರು ಹಾಗೂ ಬಿಎಲ್2 ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬೂತ್ಗಳಲ್ಲಿ ಕಾರ್ಯಕರ್ತರು ಬಿಜೆಪಿ ಸೇರಿದಂತೆ ಇತರೆ ಪಕ್ಷದ ಮುಖಂಡರ ಪಟ್ಟಿ ತಯಾರಿಸಿ ತಂತ್ರಗಾರಿಕೆ ಬಳಸಬೇಕು. ಮತದಾರರ ಮನವೊಲಿಸುವ ಮೂಲಕ ಪ್ರತಿ ಬೂತ್‌ಗಳಲ್ಲಿ ಅತಿ ಹೆಚ್ಚು ಮತಗಳಿಕೆಗೆ ಶ್ರಮವಹಿಸಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಗರ ಮಂಡಲದಿಂದ ಆಯೋಜಿಸಿದ್ದ ಬೂತ್ ಅಧ್ಯಕ್ಷರು ಹಾಗೂ ಬಿಎಲ್2 ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ ಹಾಗೂ ಮೋದಿ ಅಭಿಮಾನಿಗಳ ಪರವಾಗಿ ಕೆಲಸ ಮಾಡುವವರ ಪಟ್ಟಿ ತಯಾರಿಸಿ ಅಭ್ಯರ್ಥಿ ಗೆಲುವಿಗೆ ನಿರಂತರ ಕಾರ್ಯನಿರ್ವ ಹಿಸಬೇಕು ಎಂದರು.ನಗರಸಭೆಯಲ್ಲಿ ಒಟ್ಟಾರೆ 12 ಮಂದಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಒಬ್ಬರು ಬದುಕಿದ್ದು ಸತ್ತಂತೆ ವರ್ತಿಸುತ್ತಿದ್ದಾರೆ. ಮತ್ತೋರ್ವ ಉಂಡ ಮನೆಗೆ ದ್ರೋಹವೆಸಗಿದ್ದಾನೆ. ಇನ್ನುಳಿದ ನಗರಸಭಾ ಹಾಲಿ- ಮಾಜಿ ಸದಸ್ಯರು ಆಯಾ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಗೆಲುವಿಗೆ ಸಹಕರಿಸಬೇಕು ಎಂದರು.ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನೇರವಾಗಿ ತಮ್ಮ ವಿರುದ್ಧ ಕೆಲಸ ಮಾಡಿದ ಪರಿಣಾಮ ಮಾಜಿ ಶಾಸಕರ ಪಟ್ಟ ಲಭಿಸಿದೆ. ಅದರಂತೆ ಇತರೆ ಕ್ಷೇತ್ರಗಳಲ್ಲಿ ಅಲ್ಪಮತಗಳ ಅಂತರಗಳಿಂದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡರು. ಹಾಗಾಗಿ ಎಂಎಲ್‌ಎ ಮನಸ್ಥಿತಿಯಿಂದ ಮತದಾರರನ್ನು ಹೊರ ತರಬೇಕಿರುವ ಕೆಲಸವಾಗಬೇಕು ಎಂದರು.
ರಾಜ್ಯದ ಚುನಾವಣೆಯಲ್ಲಿ ಕೆಲವರು ಕಾಂಗ್ರೆಸ್‌ಗೆ ಬೆಂಬಲಿಸಿದರೆ, ದೇಶದ ಚುನಾವಣೆಯಲ್ಲಿ ಕುಟುಂಬಸ್ಥರ ಸಮೇತ ಬಿಜೆಪಿ ಮತ ಕೊಡುವ ಆಶಯವನ್ನು ಅನೇಕ ಮುಖಂಡರು ವ್ಯಕ್ತಪಡಿಸಿದ್ದಾರೆ. ಪ್ರತಿ ಬೂತ್ ಗಳಲ್ಲಿ ಪಕ್ಷಾತೀತವಾಗಿ ಮುಖಂಡರು ಭೇಟಿ ಮಾಡಬೇಕು. ವಾರ್ಡಿನಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮತದಾರರ ಪಟ್ಟಿ ತಯಾರಿಸಿ ತಂತ್ರಗಾರಿಕೆಯಿಂದ ಚುನಾವಣೆ ಎದುರಿಸಬೇಕು ಎಂದು ಹೇಳಿದರು. ಉಡುಪಿ- ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಕ್ಷೇತ್ರದಲ್ಲಿ ಅಡಕೆ, ಕಾಫಿ, ತೆಂಗಿನ ಬೆಳೆಗಾರರ ಸಮಸ್ಯೆಗಳ ಬಗ್ಗೆ ತಿಳಿದಿದೆ. ಅಲ್ಲದೇ ಪಂಚಾಯಿತಿ ಹಾಗೂ ನಗರಸಭಾ ಆಡಳಿತದ ಸಮಸ್ಯೆಗಳು ಗೊತ್ತಿವೆ. ಹೀಗಾಗಿ ಮತದಾರರು ಒಮ್ಮೆ ಅವಕಾಶ ಕಲ್ಪಿಸಿದರೆ ಕ್ಷೇತ್ರದಲ್ಲಿ ಮಾದರಿ ಕೆಲಸ ಕೈಗೊಳ್ಳುವ ಗುರಿ ಹೊಂದಿ ದ್ದೇನೆ ಎಂದರು.ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್ ಸಭೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜಸಂತ್ ಅನಿಲ್‌ಕುಮಾರ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಮುಖಂಡರಾದ ಸೀತರಾಮ ಭರಣ್ಯ ಇದ್ದರು.
12 ಕೆಸಿಕೆಎಂ 5ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಗರ ಮಂಡಲದಿಂದ ಆಯೋಜಿಸಿದ್ದ ಬೂತ್ ಅಧ್ಯಕ್ಷರು ಹಾಗೂ ಬಿಎಲ್2 ಸಭೆಯಲ್ಲಿ ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿದರು.