ಕನ್ನಡಪ್ರಭ ವಾರ್ತೆ ಉಡುಪಿ
ಅವರು ಸನ್ಮಾನಕ್ಕೆ ಪ್ರತಿಕ್ರಿಯಿಸುತ್ತಾ, ಈ ಪ್ರಶಸ್ತಿ ದೇಶ ಸೇವೆ, ನಮ್ಮ ಸಂಸ್ಕೃತಿ ರಕ್ಷಣೆಯಲ್ಲಿ ತೊಡಗಿದವರಿಗೆ ಸೇರಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ್ ವಿಕಾಸ್ ಪರಿಷದ್ ಅಧ್ಯಕ್ಷ ಕೃಷ್ಣದಾಸ್ ಸಿ.ಪಿ. ವಹಿಸಿದ್ದರು. ದಕ್ಷಿಣ ಪ್ರಾಂತ್ಯ ಸಂಪರ್ಕ ಸಲಹೆಗಾರ ಹರಿರಾಮ ಶೆಣೈ, ಪರಿಷದ್ ಸಂಚಾಲಕ ಪಂಡಿತ್ ವಸಂತ್ ಭಟ್, ಸಂಸ್ಥಾಪಕ ಅಧ್ಯಕ್ಷ, ನಿವೃತ್ತ ಉಪನ್ಯಾಸಕ ಕೆ.ಕಮಲಾಕ್ಷ ಉಪಸ್ಥಿತರಿದ್ದರು. ಹರಿರಾಮ ಶಣೈ ಕಾರ್ಯಕ್ರಮ ನಿರೂಪಿಸಿದರು. ಮೋಹನ್ ಶಾನ್‌ಭೋಗ್ ವಂದಿಸಿದರು.ಜೋಯ್ಸ ಅವರಿಗೆ ಜು.24ರಂದು ಮಥುರಾದ ಪಂಡಿತ್ ದೀನದಯಾಳ್ ವಿವಿಯಿಂದ ವಿದ್ಯಾ ವಾಚಸ್ಪತಿ ಸರಸ್ವತಿ ಸಮ್ಮಾನ್ ಹಾಗೂ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಗಿದೆ.
ಜೋಯ್ಸರವರು ಪರಿಸರ ವಿಜ್ಞಾನದಲ್ಲಿ ಎಂಎಸ್‌ಸಿ ಪದವಿಯನ್ನು ಗಳಿಸಿದ್ದಾರೆ. ಹಾಗೆಯೇ ಸಂಸ್ಕೃತ, ವೇದ, ತರ್ಕ, ಜ್ಯೋತಿಷ್ಯ ಶಾಸ್ತ್ರದಲ್ಲಿ ಆಳವಾದ ಜ್ಞಾನ ಪಡೆದಿದ್ದಾರೆ. ಅವರು ಭಾಗಮಂಡಲದ ಮಧುಸಾಗರ ಪ್ರಶಸ್ತಿ, ವೇದರತ್ನ ಪ್ರಶಸ್ತಿ, ವೇದ ಆಚಾರ್ಯ ಪ್ರಶಸ್ತಿ ಹಾಗೂ ಆಗಮ ಪ್ರವೀಣ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.