ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
33 ಎಕರೆ ವಿಸ್ತೀರ್ಣದ ಉದ್ಯಾನವನದಲ್ಲಿ ಸಮರೋಪಾದಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಈಗಾಗಲೇ ಅಲ್ಲಿ 3,500 ದೊಡ್ಡ ಗಿಡಗಳನ್ನು ಜೊತೆಗೆ 25 ಸಾವಿರಕ್ಕೂ ಹೆಚ್ಚು ಅಲಂಕಾರಿಕ ಮತ್ತು ಔಷಧೀಯ ಗಿಡಗಳನ್ನು ನೆಡಲಾಗಿದೆ. ಅವುಗಳ ರಕ್ಷಣೆಗೆ ನುರಿತ ತಂಡವೇ ಕಾರ್ಯ ನಿರ್ವಹಿಸುತ್ತಿದೆ ಎಂದು ವಲಯ ಅರಣ್ಯಾಧಿಕಾರಿಗಳಾದ ಬಸನಗೌಡ ಬಿರಾದಾರ ಮತ್ತು ಗಿರೀಶ್ ಆಲಕುಡೆ ವಿವರಿಸಿದರು.
ಉದ್ಯಾನವನದಲ್ಲಿ ಆಕರ್ಷಕ ಪ್ಯಾರಾಗೋಲಗಳು, ವೀಕ್ಷಣಾ ಗೋಪುರ, ಸಿಬ್ಬಂದಿ ವಸತಿ ಗೃಹಗಳು, ಶುದ್ಧ ಕುಡಿಯುವ ನೀರಿನ ಘಟಕ, ಸಣ್ಣ ಸಣ್ಣ ನೀರಿನ ಹೊಂಡಗಳು, ಸ್ಥಳೀಯ ಕಲ್ಲುಗಳನ್ನೇ ಬಳಸಿ ಮಾಡಲಾದ ನೈಸರ್ಗಿಕ ನೀರಿನ ಝರಿಗಳು, ಬೃಹತ್ ಪ್ರಮಾಣದ ನೀರು ಸಂಗ್ರಹಾಗಾರ, ಚಿಕ್ಕ ಮಕ್ಕಳಿಗೆ ಮನರಂಜನಾ ಪಾರ್ಕ್, ಹೊರಾಂಗಣ ವ್ಯಾಯಾಮದ ಮೈದಾನ, ಉದ್ಯಾನವನದ ಸುತ್ತಲೂ ವಿಶಾಲವಾದ ವಾಯು ವಿಹಾರ ಪಥ, ಎಲ್ಲೆಡೆ ವಿಶ್ರಾಂತಿ ಕಟ್ಟೆಗಳು, ಕ್ಯಾಂಟೀನ್ ನಿರ್ಮಾಣ ಭರದಿಂದ ಸಾಗಿವೆ. ಇಡೀ ಪ್ರದೇಶದಲ್ಲಿ ಬೀಳುವ ಮಳೆ ನೀರಿನ ಒಂದು ಹನಿಯೂ ವ್ಯರ್ಥವಾಗದಂತೆ ಮಳೆ ನೀರಿನ ಸಂಗ್ರಹ ಮಾಡಲಾಗುತ್ತಿದೆ ಎಂದವರು ವಿವರಿಸಿದರು. ಇದೇ ಸಂದರ್ಭದಲ್ಲಿ ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು ಉದ್ಯಾನವನದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ನೀರೆರೆದರು.ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಅಮರೇಶ ಗೂಳಿ, ಗೌರವಾಧ್ಯಕ್ಷ ಸೋಮಶೇಖರ ಚೀರಲದಿನ್ನಿ, ಕಾರ್ಯದರ್ಶಿ ಬಸವರಾಜ ಬಿಜ್ಜೂರ, ಕಾಯಕಯೋಗಿ ಪ್ರಶಸ್ತಿ ಪುರಸ್ಕೃತ ಹಾಗೂ ಸಂಚಾಲಕ ಮಹಾಬಲೇಶ್ವರ ಗಡೇದ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಳಗದ ಮಾಜಿ ಅಧ್ಯಕ್ಷರಾದ ಬಿ.ಎಸ್.ಮೇಟಿ, ಅಶೋಕ ರೇವಡಿ, ನಾಗಭೂಷಣ ನಾವದಗಿ, ರಾಜಶೇಖರ ಕಲ್ಯಾಣಮಠ, ರವಿ ಗೂಳಿ, ಬಿ.ಎಚ್.ಬಳಬಟ್ಟಿ, ಸದಸ್ಯರಾದ ಬಿ.ಎಂ.ಪಲ್ಲೇದ, ಜಿ.ಎಂ.ಹುಲಗಣ್ಣಿ, ಮಲ್ಲಿಕಾರ್ಜುನ ಬಾಗೇವಾಡಿ, ವೆಂಕನಗೌಡ ಪಾಟೀಲ, ಎಚ್.ವೈ.ಪಾಟೀಲ, ರವಿ ತಡಸದ, ಪಿ.ಆರ್.ಕೂಡಗಿ, ಶ್ರೀಶೈಲ ಮರೋಳ, ಡಾ.ಚಂದ್ರಶೇಖರ ಶಿವಯೋಗಿಮಠ, ಅಮರೇಶ ಐಹೊಳೆ, ಬಸವರಾಜ ಸಿದರಡ್ಡಿ, ಕಿರಣ ಪಾಟೀಲ, ವೀರೇಶ ಹಂಪನಗೌಡ್ರ, ಈರಯ್ಯ ಮಠ, ಪಶು ವೈದ್ಯಾಧಿಕಾರಿ ಡಾ.ಬಸವರಾಜ ಸಜ್ಜನ, ಉಪನಾಳ, ಯಲ್ಲಪ್ಪ ತಂಗಡಗಿ, ಶ್ರೀನಿವಾಸ, ವಿನಾಯಕ ಬೊಂಬಳೇಕರ, ಅರಣ್ಯ ಇಲಾಖೆಯ ಅಧಿಕಾರಿಗಳಿದ್ದರು. ಬಸನಗೌಡ ಬಿರಾದಾರ ಸ್ವಾಗತಿಸಿದರು. ಯಲಗೂರಪ್ಪ ಗುಬ್ಬಿ ನಿರೂಪಿಸಿದರು. ವಿಠ್ಠಲ ಬೋರಟಗಿ ವಂದಿಸಿದರು.
ಸುಂದರವಾಗಿ ನಿರ್ಮಾಣವಾಗುತ್ತಿರುವ ಸಾಲುಮರದ ತಿಮ್ಮಕ್ಕನ ಉದ್ಯಾನವನ ಕಂಡು ಸಂತೋಷವಾಗುತ್ತದೆ. ನಿಜವಾಗಿಯೂ ಅದ್ಭುತವಾದ ಅರಣ್ಯವೇ ಸಾಮ್ರಾಜ್ಯ ಇಲ್ಲಿ ನಿರ್ಮಾಣವಾಗುತ್ತಿದೆ.