ವಿಜಯನಗರ ಡೀಸಿ ಗದರಿದ ಸಿಎಂ ಕ್ಷಮೆಯಾಚಿಸಲಿ : ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್

KannadaprabhaNewsNetwork |  
Published : Jan 17, 2025, 12:46 AM ISTUpdated : Jan 17, 2025, 01:04 PM IST
16ಸಿಎಚ್‌ಎನ್‌52ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಅ‍ವರು ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಅ‍ವರು ಸುದ್ದಿಗೋಷ್ಠಿ ನಡೆಸಿದರು.

 ಚಾಮರಾಜನಗರ :  ವಿಜಯನಗರದ ಜಿಲ್ಲಾಧಿಕಾರಿ ಗದರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರದ ಸಾಮೂಹಿಕ ವಿವಾಹದಲ್ಲಿ ಸ್ವಾಮೀಜಿ ಪಕ್ಕದಲ್ಲಿ ಕುಳಿತಿದ್ದ ಜಿಲ್ಲಾಧಿಕಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇ.ನೀನ್ಯಾರು ? ಸ್ವಾಮೀಜಿ ಪಕ್ಕದಲ್ಲೇ ಕುಳಿತಿದ್ದೀಯಾ ಎಂದು ಗದರಿ ಎದ್ದು ಕಳುಹಿಸುವ ಮೂಲಕ ಐಎಎಸ್ ಹುದ್ದೆಗೆ ಅಪಮಾನ ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ ಕೂಡಲೇ ಮುಖ್ಯಮಂತ್ರಿಗಳು ರಾಜ್ಯದ ಜನತೆಯಲ್ಲಿ ಕ್ಷಮೆಯಾಗಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯನವರು ಸಮಾಜವಾದಿ ಹಿನ್ನೆಲೆಯಲ್ಲಿ ಬಂದವರು ಎಂದು ಪ್ರಗತಿಪರರು ದೊಡ್ಡ ಬಿರುದು ಕೊಟ್ಟಿದ್ದಾರೆ. ಸಮಾಜವಾದಿ, ಸಂವಿಧಾನವಾದಿ, ಸಾಮಾಜಿಕ ನ್ಯಾಯದ ಹರಿಕಾರ ಎಂಬ ಬಿರುದು ತೆಗೆದುಕೊಂಡಿರುವ, ಸಂವಿಧಾನದಡಿಯಲ್ಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವ ಸಿದ್ದರಾಮಯ್ಯನವರೇ ಒಬ್ಬ ವ್ಯಕ್ತಿಯನ್ನು ಅಗೌರವಿಸುವುದು ಸಂವಿಧಾನಲ್ಲಿದ್ದಿಯಾ?. ಸಮಾರಂಭದಲ್ಲಿ ಜಿಲ್ಲಾಧಿಕಾರಿಗೆ ಅವಮಾನ ಮಾಡಿರುವುದು ಅತ್ಯಂತ ಖಂಡನೀಯ ನೀವೊಬ್ಬರೂ ಡೊಂಗಿ ಸಮಾಜವಾದಿ, ಸಂವಿಧಾನವಾದಿಯಾಗಿದ್ದಾರೆ ಎಂದು ಕಿಡಿಕಾರಿದರು.

ಒಬ್ಬ ವ್ಯಕ್ತಿಗೆ ಗೌರವ ಕೊಡುವುನ್ನು ಮುಖ್ಯಮಂತ್ರಿಗಳು ಕಲಿಯಬೇಕು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ಸಂವಿಧಾನ ಪರ, ಸಾಮಾಜಿಕ ನ್ಯಾಯ ಪರ ಎಂದು ಪೋಜ್ ಕೊಡುತ್ತಾರೆ. ಅವರು ದಿನಕ್ಕೊಂದು ಹೇಳಿಕೆ ಕೊಡ್ತಾರೆ. ಯಾಯ್ಯಾವ ಸಮಯದಲ್ಲಿ ನಾಟಕವಾಡಬೇಕು. ಬಣ್ಣ ಹಾಕಬೇಕು. ಎಂದು ಕಲಿತಿದ್ದಾರೆ. 

ಅದೇ ರೀತಿಯಲ್ಲಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ನಕ್ಸಲರನ್ನು, ದಲಿತ ಶಾಸಕನ ನಿವಾಸ ಧ್ವಂಸ ಮಾಡಿದ್ದವರನ್ನು ಪ್ರೀತಿಸುವ ಸಿದ್ದರಾಮಯ್ಯನವರು ಸ್ವಾಮೀಜಿ ಪಕ್ಕದಲ್ಲಿ ಜಿಲ್ಲಾಧಿಕಾರಿ ಕುಳಿತಿದ್ದು ದೊಡ್ಡ ಅಪರಾಧವೇ ಎಂಬಂತೆ ಗದರಿದ್ದಾರೆ. ನಿಜವಾಗಲೂ ಮನುಸತ್ವ, ಮಾನವೀಯತೆ ಬೆಲೆ ಕೊಡೋದು ಇದೇನಾ. ಇದನ್ನೇ ಸಮಾಜವಾದಿ, ಸಂವಿಧಾನವಾದಿ ಎನ್ನುತ್ತಾರ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದರು.ತಪ್ಪುಗಳನ್ನು ಪ್ರಶ್ನಿಸಿದ ಮಾಧ್ಯಮದವರ ವಿರುದ್ಧ ಗದರಿದ ಸಿದ್ದರಾಮಯ್ಯನವರು, ಪ್ರಧಾನಿಗಳನ್ನು ಏಕವಚನದಲ್ಲಿ ಮಾತನಾಡುತ್ತಿದ್ದಾರೆ.

 ರಾಷ್ಟ್ರಪತಿಗಳನ್ನು ಏಕವಚನದಲ್ಲಿ ಮಾತನಾಡಿದರು. ರಾಜ್ಯಪಾಲರನ್ನು ಟೀಕಿಸಿದರು ಈಗ ಜಿಲ್ಲಾಧಿಕಾರಿಯನ್ನು ಏಕವಚನದಲ್ಲಿ ಮಾತನಾಡಿದ್ದಾರೆ. ಇದು ಸಂವಿಧಾನ ವಿರೋಧಿಯಾಗಿದೆ ಎಂದರು.ನಿಗಮಗಳಿಗೆ ಹಣ ನೀಡದೆ ಸಮಾವೇಶ ಮಾಡುವುದು ವ್ಯರ್ಥ: ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಜಾತಿ ಗಣತಿಯನ್ನು ಮಾಡಲ್ಯ, ಒಳ ಮೀಸಲಾತಿಯನ್ನು ಜಾರಿ ಮಾಡಲ್ಲ. 18 ನಿಗಮಗಳಿಗೆ ಹಣ ಕೊಟ್ಟಿಲ್ಲ. ಅಂಬೇಡ್ಕರ್, ವಾಲ್ಮೀಕಿ ನಿಗಮದ ಹಗರಣ ಸರಿಪಡಿಸಿ, ಎಸ್‌ಇಪಿ, ಟಿಎಸ್‌ಪಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಶೋಷಿತರಿಗೆ, ಸಂಕಷ್ಠದಲ್ಲಿರುವವರಿಗೆ ಹಣ ನೀಡದೆ ನೀವು ಜೈಬಾಪೂ, ಜೈ ಭೀಮ್, ಜೈ ಸಂವಿಧಾನ್ ಸಮಾವೇಶ ಮಾಡುವುದು ವ್ಯರ್ಥವಾಗುತ್ತದೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಪದ್ಮ, ಎಸ್ ಸಿ ಮೋರ್ಚಾದ ಅಧ್ಯಕ್ಷ ಮೂಡಹಳ್ಳಿ ಮೂರ್ತಿ, ಹೊಂಗನೂರು ಮಹದೇವಸ್ವಾಮಿ, ಜಿಲ್ಲಾ ಮಾಧ್ಯಮ ಸಹ ಪ್ರಮುಖ್ ರಾಮಸಮುದ್ರ ಶಿವಣ್ಣ ಹಾಜರಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ