ವಿದ್ಯುತ್ ಸಂಪರ್ಕವಿಲ್ಲದ ಗ್ರಾಮ ಚಾವಡಿ!

KannadaprabhaNewsNetwork |  
Published : Jul 06, 2026, 03:15 AM ISTUpdated : Jul 06, 2026, 04:53 AM IST
Chavadi

ಸಾರಾಂಶ

 ವಿದ್ಯುತ್ ಸಂಪರ್ಕವಿಲ್ಲದೇ ಯಾವುದೇ ಕೆಲಸಗಳು ಕಚೇರಿಯಲ್ಲಿ ಮಾಡಲು ಸಾಧ್ಯವಿಲ್ಲ. ಆದರೆ, ಕಳೆದ ಎರಡು ವರ್ಷಗಳಿಂದ ಇಲ್ಲಿಯ ಗ್ರಾಮ ಚಾವಡಿಯಲ್ಲಿ ಸಿಬ್ಬಂದಿ ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ  

  ಗುಳೇದಗುಡ್ಡ :  ಪ್ರತಿಯೊಂದು ಕೆಲಸ ಕಾರ್ಯಗಳು ವಿದ್ಯುತ್ತನ್ನೇ ಅವಲಂಬಿಸಿದ ಇವತ್ತಿನ ಕಾಲದಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ ಯಾವುದೇ ಕೆಲಸಗಳು ಕಚೇರಿಯಲ್ಲಿ ಮಾಡಲು ಸಾಧ್ಯವಿಲ್ಲ. ಆದರೆ, ಕಳೆದ ಎರಡು ವರ್ಷಗಳಿಂದ ಇಲ್ಲಿಯ ಗ್ರಾಮ ಚಾವಡಿಯಲ್ಲಿ ಸಿಬ್ಬಂದಿ ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ ಎಂದರೆ ಅಶ್ಚರ್ಯ ಪಡಬೇಕಾಗಿಲ್ಲ.

ತಾಲೂಕು ಕೇಂದ್ರವಾಗಿರುವ ಗುಳೇದಗುಡ್ಡ ಪಟ್ಟಣದ ಹಳೆಯ ಕಟ್ಟಡದಲ್ಲಿ ಗ್ರಾಮ ಚಾವಡಿ

ತಾಲೂಕು ಕೇಂದ್ರವಾಗಿರುವ ಗುಳೇದಗುಡ್ಡ ಪಟ್ಟಣದಲ್ಲಿ ಹಳೆಯ ಕಟ್ಟಡದಲ್ಲಿ ಗ್ರಾಮ ಚಾವಡಿ ಇದೆ. ಈ ಕಟ್ಟಡದಲ್ಲಿ ನಾಲ್ಕು ಕೊಠಡಿಗಳಿವೆ. ಮಳೆಗಾಲದಲ್ಲಿ ಅವು ಸೋರುತ್ತವೆ. ಅಲ್ಲಿರುವ ಮಹತ್ವದ ದಾಖಲೆಗಳು ಮಳೆಯಲ್ಲಿ ಸೋರಿಕೆಯಿಂದ ಹಾಳಾಗಿವೆ. ಈ ಕಟ್ಟಡದಲ್ಲಿ ಕಂದಾಯ ನಿರೀಕ್ಷಕರು, ಗ್ರಾಮ ಸಹಾಯಕರು ಇರುತ್ತಾರೆ. ಕತ್ತಲೆ ಆವರಿಸಿದ ಕೊಠಡಿಯಲ್ಲಿ ಅವರ ಕೆಲಸಗಳೂ ನಿಗದಿತ ಸಮಯದಲ್ಲಿ ಆಗುವುದಿಲ್ಲ. ಜನ ನಿತ್ಯ ಅಡ್ಡಾಡುವುದೂ ತಪ್ಪುತ್ತಿಲ್ಲ.

ಕಂಪ್ಯೂಟರ್‌ ಗಳಿಲ್ಲ, ಏನಾದರೂ ಕಂಪ್ಯೂಟರ್‌ ದಲ್ಲಿ ಕೆಲಸ ಮಾಡಬೇಕಿದ್ದರೆ ಹೊರಗಡೆ ಹೋಗಿ ಮಾಡಬೇಕು. ಝರಾಕ್ಸ ಮಶೀನ್ ಇಲ್ಲ, ಕಟ್ಟಡದಲ್ಲಿ ಪ್ಯಾನ್‌ ಗಳಿಲ್ಲ, ಕೆಲವು ಸಲ ಹಗಲಿನಲ್ಲಿ ಮೋಡ ಕವಿದ ವಾತಾವರಣ ಇದ್ದರೆ ಕಟ್ಟಡದಲ್ಲಿ ಕತ್ತಲು ಆವರಿಸಿರುತ್ತದೆ. ಅಂದು ಕೆಲಸಗಳೇ ಬಂದ್ ಆಗುತ್ತವೆ. ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಕಚೇರಿಯಲ್ಲಿ ಸಿಬ್ಬಂದಿ ಕೆಲಸ ಮಾಡದಂತಾಗಿದೆ. ಹೀಗಾಗಿ ಹೆಚ್ಚಿನ ಸಮಯ ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ನಿಗದಿತ ಸ್ಥಳದಲ್ಲಿಯೇ ಇರದೇ ಹೊರಗಡೆಯೇ ಇರಬೇಕಾಗುತ್ತದೆ. ಪಟ್ಟಣದ ಹಾಗೂ ಗ್ರಾಮದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಬಂದಾಗ ಸಂಬಂಧಪಟ್ಟವರೇ ಇರುವುದಿಲ್ಲ. ಬದಲಾಗಿ ಕಚೇರಿಯಲ್ಲಿ ಸಿಬ್ಬಂದಿ ಮಾತ್ರ ಇರುವುದನ್ನು ಕಾಣುವಂತಾಗಿದೆ.

ಎರಡು ವರ್ಷಗಳ ಹಿಂದೆ ಗ್ರಾಮ ಚಾವಡಿಯಲ್ಲಿ ವಿದ್ಯುತ್ ಸಂಪರ್ಕವಿತ್ತು.

ಕಳೆದ ಎರಡು ವರ್ಷಗಳ ಹಿಂದೆ ಗ್ರಾಮ ಚಾವಡಿಯಲ್ಲಿ ವಿದ್ಯುತ್ ಸಂಪರ್ಕವಿತ್ತು. ಈ ಹಿಂದೆ ಇದ್ದ ಗ್ರಾಮ ಸಹಾಯಕರು ವಿದ್ಯುತ್ ಬಿಲ್ ಕಟ್ಟುತ್ತಿದ್ದರು. ಅವರು ವರ್ಗವಾಗಿ ಹೋದ ಮೇಲೆ ನಂತರ ಆ ಸ್ಥಾನಕ್ಕೆ ನಿಯುಕ್ತಿಯಾಗಿ ಬಂದ ಬೇರೊಬ್ಬ ಗ್ರಾಮ ಸಹಾಯಕರು ವಿದ್ಯುತ್ ಬಿಲ್ ಕಟ್ಟದ ಕಾರಣ ಹೆಸ್ಕಾಂ ಇಲಾಖೆಯವರು ವಿದ್ಯುತ್ ಸಂಪರ್ಕ ಕಟ್ ಮಾಡಿದ್ದಾರೆ. ಹೀಗಾಗಿ ಕಳೆದ 2 ವರ್ಷಗಳಿಂದ ಗ್ರಾಮ ಚಾವಡಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಆದರೂ ಅಲ್ಲಿ ಸಿಬ್ಬಂದಿ ಬಂದು ಹತ್ತಾರು ಸಹಿಗಳಿದ್ದರೆ ಮಾಡಿ, ಕಂಪ್ಯೂಟರ್ ಕೆಲಸ ಬಂದರೆ ಹೊರಗೆ ಹೋಗುತ್ತಾರೆ.

ಇವತ್ತು ಪ್ರತಿಯೊಂದು ಕೆಲಸ ಕಾರ್ಯಗಳು ಕಂಪ್ಯೂಟರ್ ಇಲ್ಲವೇ ಆನ್ಲೈನ್ ವ್ಯವಸ್ಥೆವನ್ನೇ ಅವಲಂಬಿಸಿವೆ. ಆದರೆ, ಇಲ್ಲಿನ ತಾಲೂಕು ಕೇಂದ್ರದ ಗ್ರಾಮ ಚಾವಡಿಗೆ ಮಾತ್ರ ವಿದ್ಯುತ್ ಸಂಪರ್ಕವಿಲ್ಲ. ಸಂಬಂಧಪಟ್ಟ ತಹಸೀಲ್ದಾರರು, ಪುರಸಭೆ ಮುಖ್ಯಾಧಿಕಾರಿಗಳು, ಕಂದಾಯ ನಿರೀಕ್ಷಕರು ಇದರ ಕಡೆ ಗಮನಹರಿಸದೇ ಇರುವ ವಿಷಯ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

 ಕಳೆದ 2 ವರ್ಷಗಳ ಹಿಂದೆ ಗ್ರಾಮ ಚಾವಡಿಯಲ್ಲಿ ವಿದ್ಯುತ್ ಸಂಪರ್ಕ ಇತ್ತು. ಹಿಂದಿನ ಗ್ರಾಮ ಲೆಕ್ಕಾಧಿಕಾರಿಗಳೇ ಅದರ ಬಿಲ್ ಕಟ್ಟುತ್ತಿದ್ದರು. ಆದರೆ ಎರಡು ವರ್ಷಗಳಿಂದ ವಿದ್ಯುತ್ ಸಂಪರ್ಕ ಕಟ್ ಆಗಿದೆ. ಕೆಲಸಕ್ಕೂ ತೊಂದರೆಯಾಗುತ್ತಿದೆ.

-ಎಸ್.ಡಿ. ಜೋಗಿನ ಕಂದಾಯ ನಿರೀಕ್ಷಕರು ಗುಳೇದಗುಡ್ಡ.ಗ್ರಾಮ ಚಾವಡಿ ಬ್ರಿಟಿಷರ ಕಾಲದ್ದು. ಸರಿಯಾಗಿ ನಿರ್ವಹಣೆ ಇಲ್ಲ. 2 ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲ ಅಂದರೆ ಅಲ್ಲಿ ಯಾವುದೇ ತ್ವರಿತ ಕೆಲಸಗಳು ನಡೆಯುವುದಿಲ್ಲ ಎಂದರ್ಥ. ತಹಸೀಲ್ದಾರರು ಗಮನಹರಿಸಬೇಕು.

-ಪ್ರಕಾಶ ಮುರಗೋಡ, ಮಾಜಿ ಉಪಾಧ್ಯಕ್ಷರು ಪುರಸಭೆ ಗುಳೇದಗುಡ್ಡ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬನ್ನಂಜೆ ಗೋವಿಂದಾಚಾರ್ಯರದ್ದು ಮಾದರಿ ಜೀವನ
ಮಾರುತಿ ಮಂದಿರ ಭಾಗಶಃ ಜಲಾವೃತ