ಕನ್ನಡಪ್ರಭ ವಾರ್ತೆ ಅಥಣಿ
ಸಮೀಪದ ಸತ್ತಿ ಗ್ರಾ.ಪಂಯಲ್ಲಿ ಶುಕ್ರವಾರ ಜರುಗಿದ ವಿಶೇಷ ಸಭೆಯಲ್ಲಿ ಲಿಂ.ಶ್ರೀ ಬಾಳಕೃಷ್ಣ ಮಹಾರಾಜರ ಸೇವಾ ಸಮಿತಿ ಹಾಗೂ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಸೇವಾ ಸಮಿತಿ ಇವರುಗಳ ಮಧ್ಯದಲ್ಲಿ ಜಾಗದ ಕುರಿತಾಗಿ ಉಂಟಾದ ಗೊಂದಲ ಉದ್ದೇಶಿಸಿ ಮಾತನಾಡಿ, ಈ ಇಬ್ಬರೂ ಮಹಾತ್ಮರ ಜಾಗಗಳು ಗ್ರಾಮಸ್ಥರಿಗೆ ಸದ್ಬಳಕೆಯಾಗಬೇಕು. ಭಕ್ತರ ಹೃದಯ ವಿಶಾಲತೆಯಿಂದ ಕೂಡಿರಬೇಕು. ಸಭೆಯಲ್ಲಿ ಎರಡು ಸಮಿತಿಯವರು ವಾಗ್ವಾದಕ್ಕೆ ಇಳಿಯದೇ ಸಹನೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಿರಿ. ಸತ್ತಿ ಗ್ರಾಮದ ಹಿರಿಯರು ಅನುಭಾವಿಗಳು. ಅಧಿಕಾರಿಗಳ ಮಾತಿಗೆ ಗೌರವ ನೀಡಿ ನ್ಯಾಯ ನಿರ್ಣಯ ಮಾಡಿಕೊಂಡಿದ್ದಕ್ಕಾಗಿ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ಕಳೆದ ಒಂದು ತಿಂಗಳಿನಿಂದ ಜಾಗದ ಸಮಸ್ಯ ಕುರಿತಾಗಿ ಎರಡು ಸಮಿತಿಯವರ ಮಧ್ಯದಲ್ಲಿ ಉಂಟಾಗಿದ್ದ ಗೊಂದಲದ ಹಿನ್ನೆಲೆ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ಮಧ್ಯಸ್ಥಿಕೆ ವಹಿಸಿ, ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿತು.ಈ ವೇಳೆ ತಾಪಂ ವ್ಯವಸ್ಥಾಪಕ ಜಿ.ಎಂ.ಸ್ವಾಮಿ, ಗ್ರಾ.ಪಂ. ಅಧ್ಯಕ್ಷೆ ಸುಜಾತಾ ಸನದಿ, ಉಪಾಧ್ಯಕ್ಷ ಸಂಜೀವ ಜಮಖಂಡಿ, ಪಿಡಿಒ ಮುತ್ತುರಾಜ ಗುರವ, ಮುಖಂಡ ಶ್ರೀಶೈಲ ಜಗದೇವ, ಪ್ರಕಾಶ ಭೂಷಣ್ಣವರ, ಮಲ್ಲಪ್ಪ ಹಂಚಿನಾಳ, ನ್ಯಾಯವಾದಿ ಶಂಕರ ಮಟ್ಟೆಪ್ಪನವರ, ಸಂಜೀವ ಗಡ್ಯಾಗೋಳ, ಬಸಪ್ಪ ತಮದಡ್ಡಿ, ಸಾಬು ಚಿನಗುಂಡಿ, ಮುತ್ತಪ್ಪ ನಂದೇಶ್ವರ, ವಿಠ್ಠಲ ಮೋಪಗಾರ, ಪೊಲೀಸ್ ಪೇದೆ ಆರ್. ಸಿ. ಹಾದಿಮನಿ ಹಾಗೂ ಗ್ರಾ.ಪಂ ಸದಸ್ಯರು ಸೇರಿದಂತೆ ಅನೇಕರು ಇದ್ದರು.