ಸಾರಿಗೆ ಬಸ್ ಕಲ್ಪಿಸಿಕೊಟ್ಟ ಸಾರಿಗೆ ಅಧಿಕಾರಿಗಳಿಗೆ ಗ್ರಾಮಸ್ಥರ ಅಭಿನಂದನೆ

KannadaprabhaNewsNetwork |  
Published : Jul 03, 2025, 11:50 PM ISTUpdated : Jul 03, 2025, 11:51 PM IST
3ಕೆಎಂಎನ್ ಡಿ14 | Kannada Prabha

ಸಾರಾಂಶ

ಗ್ರಾಮಸ್ಥರ ಮನವಿ ಮೇರೆಗೆ ಪಾಂಡವಪುರ, ಕೆ.ಆರ್.ಪೇಟೆ ಡಿಪೋಗಳಿಂದ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಲಾಗಿದ್ದು, ಪಾಂಡವಪುರದಿಂದ ರಾಗಿಮುದ್ದನಹಳ್ಳಿಯಿಂದ ಡಿಂಕಾ ಮಾರ್ಗವಾಗಿ ಮೈಸೂರಿಗೆ ತೆರಳಲು ಒಂದು ಬಸ್, ಪಾಂಡವಪುರದಿಂದ ರಾಗಿಮುದ್ದನಹಳ್ಳಿ ಮಾರ್ಗವಾಗಿ ಭೂವರಾಹನಾಥ, ಕಲ್ಲಹಳ್ಳಿ, ಬೆಳ್ತೂರು ಮಾರ್ಗವಾಗಿ ಸಂಚರಿಸುವ ಇನ್ನೊಂದು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಒತ್ತಾಯದ ಮೇರೆಗೆ ತಾಲೂಕಿನ ರಾಗಿಮುದ್ದನಹಳ್ಳಿಗೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟ ಸಾರಿಗೆ ಅಧಿಕಾರಿಗಳಿಗೆ ಗ್ರಾಮಸ್ಥರು, ಮುಖಂಡರು ಅಭಿನಂದನೆ ಸಲ್ಲಿಸಿದರು.

ತಾಲೂಕಿನ ದೊಡ್ಡ ಗ್ರಾಮಗಳ ಪೈಕಿ ಒಂದಾದ ರಾಗಿಮುದ್ದನಹಳ್ಳಿಗೆ ಸಾರಿಗೆ ಬಸ್ ವ್ಯವಸ್ಥೆಯೇ ಇರಲಿಲ್ಲ. ಇದರಿಂದ ಗ್ರಾಮದಿಂದ ವಿವಿಧ ಪಟ್ಟಣಕ್ಕೆ ಹೋಗುವಂತಹ ಸಾರ್ವಜನಿಕರು, ವಿದ್ಯಾಭ್ಯಾಸಕ್ಕೆ ಹೋಗುವಂತಹ ವಿದ್ಯಾರ್ಥಿಗಳಿಗೆ ಅನಾನೂಕೂಲ ಉಂಟಾಗಿತ್ತು.

ಖಾಸಗಿ ವಾಹನಗಳು, ಆಟೋಗಳ ಮೂಲಕವೇ ಚಿನಕುರಳಿಗೆ ಮೂರರಿಂದ ನಾಲ್ಕು ಕಿಮೀ ನಡೆದುಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಹಲವು ವರ್ಷಗಳಿಂದ ಮನವಿ ಮಾಡಿದ್ದರು.

ಗ್ರಾಮಸ್ಥರ ಮನವಿ ಮೇರೆಗೆ ಪಾಂಡವಪುರ, ಕೆ.ಆರ್.ಪೇಟೆ ಡಿಪೋಗಳಿಂದ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಲಾಗಿದ್ದು, ಪಾಂಡವಪುರದಿಂದ ರಾಗಿಮುದ್ದನಹಳ್ಳಿಯಿಂದ ಡಿಂಕಾ ಮಾರ್ಗವಾಗಿ ಮೈಸೂರಿಗೆ ತೆರಳಲು ಒಂದು ಬಸ್, ಪಾಂಡವಪುರದಿಂದ ರಾಗಿಮುದ್ದನಹಳ್ಳಿ ಮಾರ್ಗವಾಗಿ ಭೂವರಾಹನಾಥ, ಕಲ್ಲಹಳ್ಳಿ, ಬೆಳ್ತೂರು ಮಾರ್ಗವಾಗಿ ಸಂಚರಿಸುವ ಇನ್ನೊಂದು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರತಿ ದಿನ ಬೆಳಗ್ಗೆ- ಸಂಜೆ ಎರಡು ಸಮಯದಲ್ಲಿ ಸಂಚರಿಸಲಿವೆ. ಇದರಿಂದ ಗ್ರಾಮಸ್ಥರು ತಾಲೂಕು ಕೇಂದ್ರವಾದ ಪಾಂಡವಪುರ, ಮೈಸೂರು ಸೇರಿದಂತೆ ಇನ್ನಿತರೆ ಗ್ರಾಮಗಳಿಗೆ ಸಂಚರಿಸಲು ಅನುಕೂಲವಾಗಿದೆ. ಹಾಗಾಗಿ ಬಸ್ ಸಂಚಾರಕ್ಕೆ ಚಾಲನೆ ನೀಡಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಂತಹ ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಬಸ್ ಚಾಲಕ, ನಿರ್ವಾಹಕರನ್ನು ಅಭಿನಂದಿಸಿದರು.

ಈ ವೇಳೆ ಮಂಡ್ಯದ ಸಾರಿಗೆ ಸಂಸ್ಥೆ ನಿಯಂತ್ರಣ ಅಧಿಕಾರಿ ನಾಗರಾಜು, ಸಂಚಾಲನ ಅಧಿಕಾರಿ ಪರಮೇಶ್ವರಪ್ಪ, ಪಾಂಡವಪುರ ಘಟಕ ವ್ಯವಸ್ಥಾಪಕಿ ಮಮತಾ, ಕಾರ್ಯ ಅಧೀಕ್ಷಕ ಕಿರಣ್ ಕುಮಾರ್, ಎಸ್ ಡಬ್ಲ್ಯೂಸ್ ಸಹಾಯಕ ದಯಾನಂದ, ಕೆ.ಆರ್.ಪೇಟೆ ಘಟಕ ವ್ಯವಸ್ಥಾಪಕಿ ಉಮಾಮಹೇಶ್ವರಿ, ಮೈಸೂರು ವಿಭಾಗ ಸಾರಿಗೆ ನಿಯಂತ್ರಣಾಧಿಕಾರಿ ಶ್ರೀನಿವಾಸ್, ಸಂಚಾರಿ ಅಧಿಕಾರಿ ದಿನೇಶ್ ಕುಮಾರ್ , ಕೆಆರ್ ನಗರ ಘಟಕ ವ್ಯವಸ್ಥಾಪಕ ಕುಮಾರ್, ಕುವೆಂಪು ನಗರ ಘಟಕ ವ್ಯವಸ್ಥಾಪಕ ಚೇತನ್ ಸೇರಿ ಗ್ರಾಮದ ಮುಖಂಡರು, ಯಜಮಾನರು, ಯುವಕರು ಹಾಜರಿದ್ದರು.

PREV