- ದುಗ್ಗಮ್ಮ, ಬೀರಲಿಂಗೇಶ್ವರನಿಗೆ ಪೂಜೆ, ದರ್ಗಾದಲ್ಲಿ ಪ್ರಾರ್ಥನೆ, ಅಪಾರ ಬೆಂಬಲಿಗರ ಸಾಥ್ - - -
ಕನ್ನಡಪ್ರಭ ವಾರ್ತೆ, ದಾವಣಗೆರೆ
ಕಾಂಗ್ರೆಸ್ ಟಿಕೆಟ್ ವಂಚಿತ ಜಿ.ಬಿ.ವಿನಯಕುಮಾರ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಭಾರಿ ಜನಸಂಖ್ಯೆಯ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ತೆರಳಿ, ತಮ್ಮ ನಾಮಪತ್ರವನ್ನು 2ನೇ ಬಾರಿಗೆ ಸಲ್ಲಿಸಿದರು.ನಗರ ದೇವತೆ ಶ್ರೀ ದುರ್ಗಾಂಬಿಕಾದೇವಿ ದೇವಸ್ಥಾನಕ್ಕೆ ತೆರಳಿ ದೇವಿಗೆ ಬೆಂಬಲಿಗರ ಜೊತೆಗೆ ವಿಶೇಷ ಪೂಜೆ ಸಲ್ಲಿಸಿದರು. ಅನಂತರ ಖಡಕ್ ಷಾ ವಲಿ ಮಖಾನ್ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಹಳೆ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ಮೈದಾನಕ್ಕೆ ತೆರಳಿ, ಶ್ರೀ ಬೀರಲಿಂಗೇಶ್ವರನಿಗೆ ಪೂಜೆ ಸಲ್ಲಿಸಿದರು. ನಂತರ ಅಲ್ಲಿಂದ ವಿನಯಕುಮಾರ ಪರ ಜಯಘೋಷ ಮೊಳಗುತ್ತಿದ್ದಂತೆ ಬೃಹತ್ ರೋಡ್ ಶೋ ಮೂಲಕ ಜಿಲ್ಲಾಧಿಕಾರಿ ಕಚೇರಿಯತ್ತ ಉತ್ಸಾಹದಿಂದ ಸಾಗಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ, ದೇವರಾಜ ಅರಸು ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಜಿ.ಬಿ.ವಿನಯಕುಮಾರ ಜನಬೆಂಬಲ ಕಂಡು ಪುಳಕಿತರಾದರು. ಮೆರವಣಿಗೆಯಲ್ಲಿ ಸಾಗಿ ಜಿಲ್ಲಾ ಚುನಾವಣಾಧಿಕಾರಿಗೆ 2ನೇ ಸಲ ನಾಮಪತ್ರ ಸಲ್ಲಿಸಿದರು.ದೇವಸ್ಥಾನಗಳಲ್ಲಿ, ದರ್ಗಾದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿ ಜಿ.ಬಿ.ವಿನಯಕುಮಾರ ಹೊರಬರುತ್ತಿದ್ದಂತೆಯೇ ಬೆಂಬಲಿಗರು, ಅಭಿಮಾನಿಗಳು, ಹಿತೈಷಿಗಳು ಎತ್ತಿಕೊಂಡು, ಕುಣಿದು ಕುಪ್ಪಳಿಸಿದರು. ವಿನಯಕುಮಾರಗೆ ಜಯವಾಗಲಿ, ಮುಂದಿನ ಸಂಸದ ವಿನಯಣ್ಣ, ಸ್ವಾಭಿಮಾನ ವಿನಯ್ ಗೆದ್ದೇ ಗೆಲ್ಲುತ್ತಾರೆ, ಸಮಾನತೆಯ ಹರಿಕಾರ ವಿನಯಣ್ಣ ಎಂಬಿತ್ಯಾದಿ ಘೋಷಣೆಗಳು ಮೊಳಗಿದವು.
ತೆರೆದ ವಾಹನದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಿಂದ ಜಿ.ಬಿ.ವಿನಯಕುಮಾರ ಹಾಗೂ ಮುಖಂಡರು ಕೈಮುಗಿಯುತ್ತ ಬೆಂಬಲಿಸುವಂತೆ ಮನವಿ ಮಾಡಿದರು. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಬೆಂಬಲಿಗರು ಆಗಮಿಸಿದ್ದರು.- - - (* ಒಂದೇ ಪೋಟೋ ಬಳಸಿ)
-17ಕೆಡಿವಿಜಿ4, 5, 6, 7, 8, 9:
ದಾವಣಗೆರೆಯಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಬುಧವಾರ ಭರ್ಜರಿ ರೋಡ್ ಶೋ ಮೂಲಕ ಡಿಸಿ ಕಚೇರಿಗೆ ತೆರಳಿ, 2ನೇ ಸಲ ನಾಮಪತ್ರ ಸಲ್ಲಿಸಿದರು.