ಜವೇನಹಳ್ಳಿ ಮಠದಲ್ಲಿ ಹುಣ್ಣಿಮೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹಾಸನಪ್ರಸ್ತುತ ದಿನಗಳಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚು ನಡೆದು ಪ್ರಾಣ ತೆಗೆಯುವ ಮಟ್ಟಿಗೆ ಮುಂದಾಗಿರುವುದನ್ನು ನಾಗರಿಕ ಸಮಾಜ ಖಂಡಿಸಬೇಕು ಎಂದು ಶ್ರೀ ಜವನಹಳ್ಳಿ ಮಠದ ಮಠಾಧೀಶ ಸಂಗಮೇಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ನಗರದ ಜವೇನಹಳ್ಳಿ ಮಠದಲ್ಲಿ ಬುಧವಾರ ಸಂಜೆ ನಡೆದ ಹುಣ್ಣಿಮೆ ಕಾರ್ಯಕ್ರಮದಲ್ಲಿ ಅರ್ಶಿರ್ವಚನ ನೀಡಿ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು, ಪ್ರಾಣ ತೆಗೆಯುವಂತಹ ದುಷ್ಕೃತ್ಯಗಳು ಹೆಚ್ಚಾಗಿವೆ. ಹುಬ್ಬಳ್ಳಿ ನಗರದ ಕಾರ್ಪೊರೇಟರ್ ಹಾಗೂ ವೀರಶೈವ ಲಿಂಗಾಯತ ಜಂಗಮ ಸಮಾಜದ ಹಿರೇಮಠ ರವರ ಮಗಳು ನೇಹಾ ಹಿರೇಮಠರ ಬರ್ಬರ ಹತ್ಯೆ ಇಡೀ ನಾಗರಿಕ ಸಮಾಜ ಖಂಡಿಸುವಂತದ್ದು. ಇಂತಹ ಕೃತ್ಯ ಎಸಗಿದ ಆರೋಪಿಗೆ ಗಲ್ಲಿಗೇರಿಸುವ ಶಿಕ್ಷೆ ಅದರೆ ಮಾತ್ರ ಇಂತವರಿಗೆ ಎಚ್ಚರಿಕೆ ಸಂದೇಶ ದೊರೆಯುವುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಮೃತ ನೇಹಾ ಹಿರೇಮಠ ರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೌನ ಆಚರಿಸಲಾಯಿತು. ನೇಹಾ ಹೀರೇಮಠರ ಕುಟುಂಬಕ್ಕೆ ದುಃಖ ತಡೆಯುವಂತಹ ಶಕ್ತಿ ದೇವರು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು. ಈ ಏಪ್ರಿಲ್ ತಿಂಗಳಲ್ಲಿ ಬಂದಂತಹ ರಾಮನವಮಿ, ಹನುಮ ಜಯಂತಿ ಹಾಗೂ ಶರಣೆ ಅಕ್ಕಮಹಾದೇವಿಯ ಜಯಂತಿ ಆಚರಣೆ, ಇವರ ಸಾಧನೆ ಹಾಗೂ ಅವರ ಜೀವನ ಚರಿತ್ರೆಯನ್ನು ಸಂಗಮೇಶ್ವರ ಸ್ವಾಮೀಜಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಸನ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಯುವ ಘಟಕದ ಅಧ್ಯಕ್ಷ ಅವೀನಾಶ್, ಹಾಸನ ಜಿಲ್ಲಾ ವಿಷ್ಣುವರ್ಧನ ಅಭಿಮಾನಿಗಳ ಸಂಘದ ಅಧ್ಯಕ್ಷ ಮಹಾಂತೇಶ್, ಗಂಧದ ಕೋಟೆ ಸರ್ಕಲ್ ಶಿವಕುಮಾರ್ ಸ್ವಾಮೀಜಿ, ಅಭಿಮಾನಿ ಸಂಘದ ಕುಮಾರ್, ಹಾಸನ ಜಿಲ್ಲಾ ಪ್ರೀಟಿಂಗ್ ಪ್ರೆಸ್ ಸಂಘದ ಅಧ್ಯಕ್ಷ ಚಂದ್ರಣ್ಣ, ಹನುಮಂತೇಗೌಡ ಹಾಗೂ ಶ್ರೀ ಜವನಹಳ್ಳಿ ಮಠದ ಭಕ್ತರು, ಅಭಿಮಾನಿಗಳು ಭಾಗವಹಿಸಿದ್ದರು.ಹಾಸನದ ಜವೇನಹಳ್ಳಿ ಮಠದಲ್ಲಿ ನಡೆದ ಹುಣ್ಣಿಮೆ ಕಾರ್ಯಕ್ರಮ.