ಈಡಿಗ ಸಮಾಜದ ಬೇಡಿಕೆ ಈಡೇರಿಸದಿದ್ದಲಿ ಉಗ್ರ ಹೋರಾಟ

KannadaprabhaNewsNetwork |  
Published : Jan 10, 2026, 01:15 AM IST
ಜೇವರ್ಗಿ : ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ಚಿತಾಪುರ ತಾಲ್ಲುಕಿನ ಕರದಾಳ ಗ್ರಾಮದಿಂದ ಬೆಂಗಳೂರ ವರೆಗಿನ ಪಾದಯಾತ್ರೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಡಾ.ಪ್ರಣವಾನಂದ ಸ್ವಾಮೀಜಿ ಉದ್ಘಾಟಿಸಿದರು. ಭಗೀರತ ಸ್ವಾಮೀಜಿ, ಮಾಜಿ ಸಚಿವ ಶ್ರೀನಿವಾಸಗೌಡ ಬಾಲರಾಜ ಗುತ್ತೆದಾರ, ಸಮಾಜದ ತಾಲ್ಲುಕು ಅದ್ಯಕ್ಷ ನಾಗರಾಜ ಗುತ್ತೆದಾರ ಇದ್ದರು. | Kannada Prabha

ಸಾರಾಂಶ

Violent struggle if the demands of the present society are not met

-ಸ್ಮಾಲ್‌ ಕಿಕ್ಕರ್‌

ಎಚ್ಚರಿಕೆ

--

-ಬೇಡಿಕೆ ಈಡೇರಿಕೆಗಾಗಿ ಕರದಾಳ ಗ್ರಾಮದಿಂದ ಬೆಂಗಳೂರು ತನಕ ಪಾದಯಾತ್ರೆಯಲ್ಲಿ ಶ್ರೀಗಳು ಎಚ್ಚರಿಕೆ

-----

ಕನ್ನಡಪ್ರಭ ವಾರ್ತೆ ಜೇವರ್ಗಿ

ಆರ್ಯ ಈಡಿಗ ಸಮಾಜದ ಬೇಡಿಕೆ ಇಡೇರಿಕೆಗಾಗಿ ಚಿತಾಪುರ ತಾಲೂಕಿನ ಕರದಾಳ ಗ್ರಾಮದಿಂದ ಬೆಂಗಳೂರ ವರೆಗಿನ ಪಾದಯಾತ್ರೆ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದಿಂದ ಆರಂಭಿಸಲಾಗಿದ್ದು, ಈ ಹೋರಾಟ ಮಾಡು ಇಲ್ಲವೆ ಮಡಿ ಹಂತಕ್ಕೆ ನಡೆಯಲಿದ್ದು, ಸರ್ಕಾರ ಈ ಸಮಾಜದ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ನಿರಂತರ ಉಗ್ರ ಹೋರಾಟ ನಡೆಸಲಾಗುವುದು ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪೀಠಾಧಿಪತಿ ಡಾ.ಪ್ರಣವಾನಂದ ಸ್ವಾಮೀಜಿ ಎಚ್ಚರಿಸಿದರು.

ಅವರು ಗುರುವಾರ ಸಂಜೆ ಸಜ್ಜನ ಕಲ್ಯಾಣ ಮಂಟಪದಲ್ಲಿ ಚಿತಾಪುರ ತಾಲೂಕಿನ ಕರದಾಳ ಗ್ರಾಮದಿಂದ ಬೆಂಗಳೂರ ವರೆಗೆ ಪಾದಯಾತ್ರೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಆರ್ಯ ಈಡಿಗ, ಬಿಲ್ಲವ, ನಾಮಧಾರಿ ಸೇರಿದಂತೆ ೨೬ ಪಂಗಡಗಳನ್ನು ಹೊಂದಿದ ಈ ಸಮಾಜದ ಬೇಡಿಕೆ ಇಡೇರಿಕೆಗಾಗಿ ಎರಡು ಬಾರಿ ಪಾದಯಾತ್ರೆ ನಡೆಸಲಾಗಿದೆ. ಆದರೆ, ಈ ಸಮಾಜದ ಬೇಡಿಕೆ ಇಡೇರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಅಹಿಂದ ವರ್ಗದ ಹೆಸರು ಹೇಳಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಹಿಂದ ವರ್ಗದ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದರು.

ತೆಲಾಂಗಾಣ ರಾಜ್ಯದ ಮಾಜಿ ಸಚಿವ ಶ್ರೀನಿವಾಸಗೌಡ ಮಾತನಾಡಿ, ಆರ್ಯ ಈಡಿಗ ಸಮಾಜ ಸೇರಿದಂತೆ ಹಿಂದುಳಿದ ವರ್ಗಗಳ ಸಮಗ್ರ ಎಳಿಗೆಗಾಗಿ ಹತ್ತು ಹಲವಾರು ಯೊಜನೆಗಳನ್ನು ಜಾರಿಗೆ ತರುವ ಮೂಲಕ ಅವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲಾಗಿದೆ. ಆದರೆ, ರಾಜ್ಯದಲ್ಲಿ ಹಿಂದುಳಿದ ವರ್ಗದವರ ಹೆಸರು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಹೋರಾಟ ಉಗ್ರ ಸ್ವರೂಪ ತಾಳುವ ಮುನ್ನ ಸರ್ಕಾರ ಎಚ್ಚೆತ್ತು ಬೇಡಿಕೆಗಳು ಇಡೇರಿಸಬೇಕೆಂದು ಹೇಳಿದರು.

ಈಗಾಗಲೆ ಸರ್ಕಾರ ಆರ್ಯ ಈಡಿಗರ ನಿಗಮ ಮಂಡಳಿ ಸ್ಥಾಪಿಸಿದ್ದು, ನಿಗಮಕ್ಕೆ 500 ಕೋಟಿ ಮೀಸಲಿಡಬೇಕು, ಕುಲಕಸಬು ಕಳೆದಕೊಂಡ ಕಲ್ಯಾಣ ಕರ್ನಾಟಕ ಭಾಗದ ಸಂತ್ರಸ್ತ ಈಡಿಗರಿಗೆ 5 ಎಕರೆ ಜಮೀನು ಪ್ರತಿ ಕುಟುಂಬಕ್ಕೆ ನೀಡಬೇಕು, ಸಮಾಜವನ್ನು ಇಗಿರುವ 2ಎ ಯಿಂದ ಎಸ್.ಟಿ ಗೆ ಕೇಂದ್ರ ಸರ್ಕಾರಕ್ಕೆ ಸಿಫಾರಸ್ಸು ಮಾಡಬೇಕು, ನಾರಾಯಣಗುರುಗಳ ಪುತ್ಥಳಿಯನ್ನು ವಿಧಾನಸೌಧದ ಎದುರು ಸ್ಥಾಪಿಸಬೇಕೆಂದು ಅನೇಕ ಬೇಡಿಕೆಗಳನ್ನು ಇಡೇರಿಸಬೇಕೆಂದು ಒತ್ತಾಯಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಗೀರತ ಸ್ವಾಮೀಜಿ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಆರ್ಯ ಈಡಿಗ ಸಮಾಜದ ತಾಲುಕು ಅಧ್ಯಕ್ಷ ನಾಗರಾಜ ಗುತ್ತೇದಾರ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೆದಾರ, ಡಿಸಿಸಿಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ ನರಿಬೋಳ, ಆರ್ಯ ಈಡಿಗ ಸಮಾಜದ ತಾಲುಕು ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಸಂತೋಷ ಗುತ್ತೇದಾರ, ವೆಂಕಟೇಶ ಗುತ್ತೇದಾರ, ಮಹಾದೇವ ಗುತ್ತೇದಾರ, ಡಾ. ಸದಾನಂದ ಪೆರ್ಲಾ, ಬಸಯ್ಯ ಗುತ್ತೇದಾರ, ಗಾರಂಪಳ್ಳಿ, ದೇವಿಂದ್ರಪ್ಪ ಗುತ್ತೆದಾರ, ಉಪೇಂದ್ರ ಗುತ್ತೇದಾರ, ಶಿವರಾಜ ಗುತ್ತೇದಾರ, ಬಸಯ್ಯ ಎಲ್ ಗುತ್ತೇದಾರ, ದೇವಿಂದ್ರ ವಿ.ಗುತ್ತೇದಾರ, ಮಂಜುನಾಥ ಗುತ್ತೇದಾರ, ನವೀನ ಗುತ್ತೇದಾರ, ರಾಮು ಗುತ್ತೇದಾರ, ಯಂಕಯ್ಯ ಗುತ್ತೇದಾರ, ಸಿದ್ದಯ್ಯ ಗುತ್ತೇದಾರ, ನಿಂಗಯ್ಯ ಗುತ್ತೇದಾರ, ಮಲ್ಲಯ್ಯ ಗುತ್ತೇದಾರ, ಹುಲಗಯ್ಯ ಗುತ್ತೇದಾರ, ಶರಣಯ್ಯ ಗುತ್ತೇದಾರ, ರಾಜಶೇಖರ ಗುತ್ತೇದಾರ ಸೇರಿದಂತೆ ಸಮಾಜದ ಬಾಂಧವರು ಪಾಲ್ಗೊಂಡಿದ್ದರು. ಶರಣು ಗುತ್ತೇದಾರ ನಿರುಪಿಸಿದರು, ರಾಜಶೇಖರ ಗುತ್ತೇದಾರ ಸ್ವಾಗತಿಸಿದರು.

ಫೋಟೊ

ಚಿತಾಪುರ ತಾಲೂಕಿನ ಕರದಾಳ ಗ್ರಾಮದಿಂದ ಬೆಂಗಳೂರ ವರೆಗೆ ಪಾದಯಾತ್ರೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪೀಠಾಧಿಪತಿ ಡಾ.ಪ್ರಣವಾನಂದ ಸ್ವಾಮೀಜಿ ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ