ಗುತ್ತಲ: ಪಟ್ಟಣದ ಬಸ್ ನಿಲ್ದಾಣ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಗಂಡು ಮತ್ತು ಹೆಣ್ಣುಮಕ್ಕಳ ಶಾಲೆ, ಹೆಸ್ಕಾಂ ಕೇಂದ್ರಕ್ಕೆ ಸುಮಾರು 20 ಎಕರೆಗೂ ಅಧಿಕ ಭೂಮಿ ದಾನ ಮಾಡಿದ ಲಿಂ. ಸಂಗನಬಸವ ಸ್ವಾಮೀಜಿ ಅವರ ಹೆಸರನ್ನು ಈ ಕೇಂದ್ರಗಳಿಗೆ ನಾಮಕರಣ ಮಾಡಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಆಗ್ರಹಿಸಿದರು.ಪಟ್ಟಣದಲ್ಲಿ ಬುಧವಾರ ನಡೆದ ಲಿಂ. ಸಂಗನಬಸವ ಸ್ವಾಮೀಜಿ ಅವರ 7ನೇ ಪುಣ್ಯಸ್ಮರಣೋತ್ಸವ, ಸಂಗನಬಸವ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಮಠಗಳು ಸಮಾಜವನ್ನು ಅಭಿವೃದ್ಧಿ ಪಡಿಸುವ ಮತ್ತು ಮಕ್ಕಳಿಗೆ ಶಿಕ್ಷಣ ನೀಡುವಂತ ಕೆಲಸ ಮಾಡುತ್ತಿವೆ ಎಂದರು.
ಗುತ್ತಲ ಕಲ್ಮಠದ ಗುರುಸಿದ್ದ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಯೋಧ ಬಸವರಾಜ ಕಡ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಸಾಲಗೇರಿ, ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಹಂಸಬಾವಿ ಸಿದ್ದಲಿಂಗ ಸ್ವಾಮೀಜಿ, ಬೆಳ್ಳಟ್ಟಿಯ ಬಸವರಾಜ ಸ್ವಾಮೀಜಿ, ಶಿರಾಳಕೊಪ್ಪದ ಸಿದ್ದೇಶ್ವರ ಸ್ವಾಮೀಜಿ, ಹತ್ತಿಮತ್ತೂರ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಶಿವಣ್ಣ ತೋಟದ, ನಾಗನಗೌಡ ಸಿ.ಎನ್., ಮಾರುತಿ ಕೊಡಬಾಳ, ಮಂಜುಳಾ ಕೊಪ್ಪದ, ಪ್ರಶಾಂತ ಬೆನ್ನೂರ, ಡಾ. ಮಹೇಶ ಹಾವನೂರ, ದುರಗಪ್ಪ ಕೆಂಗನಿಂಗಪ್ಪನವರ, ವೇ.ಮೂ. ಬಸಯ್ಯ ಹೇಮಗಿರಿಮಠ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಗುಡ್ಡದ ಆನ್ವೇರಿ ಶಿವಯೋಗಿ ಸ್ವಾಮೀಜಿ, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯಯದ ಸುಮಂಗಲತಾಯಿ, ನಿವೃತ್ತ ಯೋಧರಾದ ಶ್ರೀಶೈಲ ಪಕ್ಕಣ್ಣನವರ, ಅಶೋಕ ಕುಂದರಗಿ, ಮಹೇಶ ಕುಂಬಾರ, ಸುನೀಲ ಜರಾಳಿ. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಾಳವ್ವ ಗೊರವರ, ಉಪಾಧ್ಯಕ್ಷ ಪರಶುರಾಮ ಯಲಗಚ್ಚ, ಸದಸ್ಯ ಮಾಲತೇಶ ಶಿತಾಳದ, ಹೆಸ್ಕಾಂ ಸಿಬ್ಬಂದಿ ಶಂಕ್ರಣ್ಣ ಚಂದಾಪುರ, ಕೊಟ್ರಯ್ಯಸ್ವಾಮಿ ಕೋವಳ್ಳಿಮಠ, ಚನ್ನಪ್ಪ ಕಲಾಲ, ವೀರಯ್ಯ ಪ್ರಸಾದಿಮಠ, ಹೊಳೆಯಯ್ಯ ಹಿರೇಮಠ, ಶಿವಲಿಂಗ ಕುಂದೂರ ಇತರರು ಇದ್ದರು.