ಪೆರ್ನಾಜೆ: ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ 10 ವರ್ಷಗಳನ್ನು ಪೂರೈಸಿ ದಶ ಸಂಭ್ರಮದಲ್ಲಿದ್ದು 14ರಂದು ವಿಟ್ಲ ಜೆಎಲ್ ಆಡಿಟೋರಿಯಂನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ದಶ ಸಂಭ್ರಮ ವಿಜೃಂಭಣೆಯಿಂದ ನಡೆಯಲಿದೆ. ಬೆಳಗ್ಗೆ ವಿದ್ವಾನ್ ಕೋಡಂಪಳ್ಳಿ ಗೋಪ ಕುಮಾರ್ ದೀಪ ಪ್ರಜ್ವಲನೆ ಮಾಡುವರು.
ಸಮಾರಂಭದ ಅಧ್ಯಕ್ಷ, ದಶಮಾನೋತ್ಸವ ಸಮಿತಿ ಅಧ್ಯಕ್ಷ, ಸ್ವರ ಸಿಂಚನ ಸಂಗೀತ ಶಾಲೆಯ ರವಿಶಂಕರ್ ಸಿ ಮೂಡಂಬೈಲು, ವಿಶೇಷ ಆಹ್ವಾನಿತರಾಗಿ ವಿಟ್ಲ ಅರಮನೆಯ ಕೆ ಕೃಷ್ಣಯ್ಯ, ಶ್ರೀ ಭಗವತಿ ದೇವಸ್ಥಾನದ ವಿಟ್ಲದ ವ್ಯವಸ್ಥಾಪಕ ಕೇಶವ್ ಆರ್ ವಿ, ರಾಜ್ಯಪ್ರಶಸ್ತಿ ಪುರಸ್ಕೃತ ಬರಹಗಾರ, ಕಲಾ ನಿರ್ದೇಶಕ ಕುಮಾರ ಪೆರ್ನಾಜೆ ಭಾಗವಹಿಸಲಿದ್ದಾರೆ.‘ಸ್ವರ ಸಿಂಚನ’ ಪುರಸ್ಕಾರವನ್ನು ಪಿಟೀಲು ವಾದಕ ವಿದ್ವಾನ್ ಕೋಡಂಪಳ್ಳಿ ಗೋಪ ಕುಮಾರ ಅವರಿಗೆ, ದಶಮಾನೋತ್ಸವ ಸನ್ಮಾನವನ್ನು ಹಿರಿಯ ಯಕ್ಷಗಾನ ಭಾಗವತ ಗೋವಿಂದ ನಾಯಕ್ ಪಾಲೆಚ್ಚಾರು ಅವರಿಗೆ ಪ್ರದಾನ ಮಾಡಲಾಗುವುದು. ಗುರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ನಂತರ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ವಯಲಿನ್ ಕಛೇರಿ, ಸಹ ಶಿಕ್ಷಕಿ ಸಿಂಚನ ಲಕ್ಷ್ಮೀ ಕೊಡಂದೂರು ಇವರಿಂದ ಸಂಗೀತ ಹಾಗೂ ವಯಲಿನ್ ಜುಗಲ್ ಬಂದಿ ನಡೆಯಲಿದೆ. ಮೃದಂಗವಾದಕರಾಗಿ ವಿದ್ವಾನ್ ಡಾ.ವಿ.ಆರ್ ನಾರಾಯಣ ಪ್ರಕಾಶ್ ಕ್ಯಾಲಿಕಟ್, ಪಿಟೀಲು ವಾದಕರಾಗಿ ವಿದ್ವಾನ್ ಕೋಡಂಪಳ್ಳಿ ಗೋಪ ಕುಮಾರ್, ಘಟಂ ವಾದಕರಾಗಿ ವಿದ್ವಾನ್ ಆಲುವ ರಾಜೇಶ್ ಕ್ಯಾಲಿಕಟ್ ಮೃದಂಗ, ಕ್ಶಿತೀಶ ರಾಮ ಕೆ ಎಸ್ ಸುಳ್ಯ, ಪಿಟೀಲು ಅಭಿರಾಮ್ ಕೋಡಂಪಳ್ಳಿ ಸಹಕರಿಸುವರು.ಪದ್ಮರಾಜ ಚಾರ್ವಾಕ ನಿರೂಪಿಸುವರು. ಹಿಮ್ಮೇಳ ಕಲಾವಿದರು ದಿನಪೂರ್ತಿ ಸಂಗೀತದ ರಸದೌತಣ ನೀಡಲಿರುವರು ಎಂದು ಸ್ವರಸಿಂಚನ ಕಲಾತಂಡದ ಮುಖ್ಯ ಶಿಕ್ಷಕಿ ಸವಿತಾ ಕೊಡಂದೂರು, ರಘುರಾಮ ಶಾಸ್ತ್ರಿ ಕೊಡಂದೂರು, ಸಿಂಚನ ಲಕ್ಷ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕುಮಾರ್ ಪೆರ್ನಾಜೆ ಇವರ ಸಾರಥ್ಯದಲ್ಲಿ ಸಂಸ್ಥೆಗೆ ಸ್ವರ ಸಿಂಚನ ಎಂಬ ಹೆಸರು ನೀಡಿದವರು ಇವರೇ. ಇದೇ ವೈವಿಧ್ಯ ವೇದಿಕೆಯಲ್ಲಿ ಆರು ವರ್ಷಕ್ಕೂ ಮಿಕ್ಕಿ ಸತತ ಕರ್ನೂರು ಸತೀಶ್ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನೀಡಿದ್ದು ವಿಶೇಷ.