ವಾಲಿಬಾಲ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಿದ ಚಿಯರ್ ಗರ್ಲ್ಸ್ । ಆಟದ ಮೆರಗು ಹೆಚ್ಚಿಸಿದ ಡೊಳ್ಳು ಗೊಂಬೆಗಳು । ಆಗಾಗ್ಗೆ ಸುರಿದ ಮಳೆ
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿರುವ ಆಲ್ ಇಂಡಿಯಾ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಮೊದಲ ಆಟವಾಡಿದ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಜನರಿಗೆ ತಮ್ಮ ಆಟದ ಮೂಲಕ ರಸದೌತಣ ನೀಡಿದವು.
ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಸಹಕಾರದಿಂದ ಅಯೋಜಿಸಲಾಗಿದ್ದ ವರ್ಣರಂಜಿತ ವಾಲಿಬಾಲ್ ಪಂದ್ಯಾವಳಿಗೆ ವರ್ಣರಂಜಿತ ವೇದಿಕೆಯನ್ನು ಸೃಷ್ಟಿ ಮಾಡಲಾಗಿತ್ತು. ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಎಂ.ಎ.ಗೋಪಾಲಸ್ವಾಮಿಯವರ ೫೪ ನೇ ವರ್ಷದ ಹುಟ್ಟುಹಬ್ಬದ ಸಲುವಾಗಿ ಆಯೋಜಿಸಿದ್ದ ಪಂದ್ಯಾವಳಿಗೆ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಸೇರಿದಂತೆ ಅನೇಕ ಗಣ್ಯರು ದೀಪ ಬೆಳಗಿಸಿ, ನೆಟ್‌ಗೆ ಕಟ್ಟಲಾಗಿದ್ದ ವಾಲಿಬಾಲ್‌ನ್ನು ಬಿಡುಗಡೆಗೊಳಿಸುವ ಮೂಲಕ ಚಾಲನೆ ನೀಡಿದರು.ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ರಾಜಕೀಯದ ಜತೆಗೆ ಸಾರ್ವಜನಿಕರ ಮುಖಂಡ ಎಂ.ಎ.ಗೋಪಾಲಸ್ವಾಮಿಯವರು ಯುವಕರಿಗೆ, ಕ್ರೀಡಾಸಕ್ತರಿಗೆ ವಿವಿಧ ರಾಜ್ಯಗಳಿಂದ ತಂಡಗಳನ್ನು ಕರೆಸಿ ಮನರಂಜನೆ ನೀಡುತ್ತಿದ್ದಾರೆ. ರಾಜಕೀಯ ನಿಂತ ನೀರಲ್ಲ, ಸೋತು ಗೆದ್ದವರೇ ಎಲ್ಲರೂ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅತ್ಯಲ್ಪ ಮತಗಳ ಅಂತರದಿಂದ ಸೋತರೂ, ಕ್ಷೇತ್ರದಲ್ಲಿ ಜನರ ಕಷ್ಟ, ಸಮಸ್ಯೆ ಆಲಿಸುತ್ತಿರುವ ಮುಖಂಡ ಎಂ.ಎ.ಗೋಪಾಲಸ್ವಾಮಿಯವರಿಗೆ ಶೀಘ್ರವೇ ಒಳ್ಳೆ ದಿನಗಳು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಗಾಗ ಬಂದು ಹೋಗುತ್ತಿದ್ದ ಸೋನೆ ಮಳೆಯ ನಡುವೆಯೂ ಮೊದಲ ಪಂದ್ಯವಾಡಿದ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಜನರಿಗೆ ತಮ್ಮ ಆಟದ ಮೂಲಕ ರಸದೌತಣ ನೀಡಿದವು. ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಸಹಕಾರದಿಂದ ಅಯೋಜಿಸಲಾಗಿದ್ದ ವರ್ಣರಂಜಿತ ವಾಲಿಬಾಲ್ ಪಂದ್ಯಾವಳಿಗೆ ವರ್ಣರಂಜಿತ ವೇದಿಕೆಯನ್ನು ಸೃಷ್ಟಿ ಮಾಡಲಾಗಿತ್ತು. ಮೂರು ದಿನಗಳ ಪಂದ್ಯಾವಳಿಗೆ ಮೊದಲ ದಿನವೇ ಮಳೆರಾಯನ ಕಾಟ ಎದುರಾಗಿ ೨ಘಂಟೆ ತಡವಾಗಿ ಟೂರ್ನಿಗೆ ಚಾಲನೆ ನೀಡಲಾಯಿತು.
ಎಂ.ಎ.ಗೋಪಾಲಸ್ವಾಮಿಯವರ ಹುಟ್ಟುಹಬ್ಬಕ್ಕೆ ಸಚಿವ ಚಲುವರಾಯಸ್ವಾಮಿ, ಸಂಸದ ಶ್ರೇಯಸ್ ಪಟೇಲ್, ವರ್ತೂರ್ ಸಂತೋಷ್, ತನಿಷಾ, ರಕ್ಷಕ್ ಬುಲೆಟ್ ಸೇರಿದಂತೆ ಅನೇಕ ಚಲನಚಿತ್ರ ನಟರು ಆಗಮಿಸಿ ಶುಭಾಷಯ ಕೋರಿದರು.