ಮತದಾನ ಮಾಡಿ, ಸಂವಿಧಾನ ಬಲಪಡಿಸಿ

KannadaprabhaNewsNetwork |  
Published : May 01, 2024, 01:22 AM IST
ಜಾಥಾಕ್ಕೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ಚಾಲನೆ ನೀಡಿದರು.  | Kannada Prabha

ಸಾರಾಂಶ

ಬೈಕ್ ರ್‍ಯಾಲಿ ನಾನಾ ಕಲಾ ತಂಡಗಳಿಂದ ಕಲಾ ಪ್ರದರ್ಶನ, ವಿದ್ಯಾರ್ಥಿಗಳ ವೇಷಭೂಷಣಗಳ ಮೂಲಕ ಮತದಾರರಲ್ಲಿ ಜಾಗೃತಿ

ಗದಗ: ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಪಂ, ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಸಹ ಭಾಗಿತ್ವ ಸಮಿತಿ (ಸ್ವೀಪ್), ಹಿಂದುಳಿದ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನಮ್ಮ ನಡೆ ಮತಗಟ್ಟೆ ಕಡೆಗೆ ಮತದಾನ ಜಾಗೃತಿ ಕಾರ್ಯಕ್ರಮವು ಮಂಗಳವಾರ ನಡೆಯಿತು.

ನಗರದ ಬೆಟಗೇರಿಯ ಅಂಬಾಭವಾನಿ ವೃತ್ತದಲ್ಲಿ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಹಾಗೂ ಜಿಪಂ ಸಿಇಒ ಭರತ್.ಎಸ್ ಕಾಲ್ನಡಿಗೆ ಮತ್ತು ಬೈಕ್ ರ್‍ಯಾಲಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್, ಕಳೆದ ಚುನಾವಣೆಯಲ್ಲಿ ಬೆಟಗೇರಿಯ ಭಾಗದಲ್ಲಿ ಕಡಿಮೆ ಮತದಾನವಾಗಿದ್ದು, ಈ ಪ್ರದೇಶಗಳಲ್ಲಿ ಈ ಬಾರಿ ನೂರಕ್ಕೆ ನೂರರಷ್ಟು ಮತದಾನವಾಗಬೇಕು. ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ತಮ್ಮ ಮತಗಟ್ಟೆ ಸಂಖ್ಯೆ, ಮತಗಟ್ಟೆ ಭಾಗದ ಕ್ರಮ ಸಂಖ್ಯೆ ಮುಂತಾದ ಮಾಹಿತಿ ತಿಳಿದುಕೊಂಡು ಮತದಾನ ಕಡ್ಡಾಯವಾಗಿ ಮಾಡುವಂತಾಗಬೇಕು ಎಂದರು.

ಜಿಪಂ ಸಿಇಒ ಭರತ್. ಎಸ್ ಅವರು, ಮೇ 7 ರಂದು ಮತದಾನ ನಡೆಯಲಿದ್ದು, ಊರ ಜಾತ್ರೆಯ ರೀತಿ ಕುಟುಂಬ,ಸ್ನೇಹಿತರೊಂದಿಗೆ ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡುವಂತಾಗಬೇಕು. ಪ್ರತಿ ಮತವೂ ಸಹ ಅಮೂಲ್ಯವಾಗಿದೆ ಎಂದು ತಿಳಿಸಿದರು.

ಜಾಥಾ ಕಾರ್ಯಕ್ರಮವು ಗದಗ ಬೆಟಗೇರಿಯ ಅಂಬಾಭವಾನಿ ವೃತ್ತದಿಂದ ಕುರಟ್ಟಿಪೇಟೆ, ಬಸ್ ನಿಲ್ದಾಣ ಮಂಜುನಾಥ ನಗರ, ಹುಯಿಲಗೋಳ ರಸ್ತೆ ಮಾರ್ಗವಾಗಿ ತಾರಾಲಯ ತಲುಪಿತು.

ಈ ಜಾಥಾದಲ್ಲಿ ಬೈಕ್ ರ್‍ಯಾಲಿ ನಾನಾ ಕಲಾ ತಂಡಗಳಿಂದ ಕಲಾ ಪ್ರದರ್ಶನ, ವಿದ್ಯಾರ್ಥಿಗಳ ವೇಷಭೂಷಣಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು. ಜಿಪಂ ಉಪ ಕಾರ್ಯದರ್ಶಿ ಸಿ.ಬಿ. ದೇವರಮನಿ, ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಸತಿ ನಿಲಯದ ವಿದ್ಯಾರ್ಥಿಗಳು ಕಲಾ ತಂಡ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ